ಡಿವೈಎಸ್ಪಿ ಹಾಲಮೂರ್ತಿರಾವ್ ತಿಳಿಸಿದರು.
Advertisement
ಪಟ್ಟಣದ ತಾಲೂಕು ಪಂಚಾಯಿತಿ ರಾಜೀವ್‌ಗಾಂದಿಸಭಾಂಗಣದಲ್ಲಿ ಹರಪನಹಳ್ಳಿ, ಹಡಗಲಿ, ಕೊಟ್ಟೂರುತಾಲೂಕಿನ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಸಭೆಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯಲ್ಲಿ100, 101, 108 ಸಹಾಯ ಸಂಖ್ಯೆಯ ಬದಲು 112ಸಂಖ್ಯೆಗೆ ಕರೆ ಮಾಡಬೇಕು ಹಾಗೂ ಕರೆ ಬಂದಾಗ ಹೇಗೆಕಾರ್ಯ ನಿರ್ವಹಣೆ ಮಾಡಬೇಕು ಎಂದು ಮಾಹಿತಿನೀಡಿದರು. ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್‌ಗೆಪ್ರತ್ಯೇಕ ತುರ್ತು ಸೇವಾ ನಂಬರ್‌ಗಳಿದ್ದವು. ಇದೀಗ ಒಂದೇನಂಬರ್ 112 ಸಂಖ್ಯೆಯಾಗಿದೆ. 112ಗೆ ಕರೆ ಮಾಡಿದಾಗಬೆಂಗಳೂರಿನಲ್ಲಿ ಕಂಟ್ರೋಲ್ ರೂಮ್‌ಗೆ ಸಂದೇಶರವಾನೆಯಾಗುತ್ತದೆ. ಬೆಂಗಳೂರಿನಲ್ಲಿ ಪರಿಣತ, ತರಬೇತಿ
ಪಡೆದ ಕಾಲ್‌ಸೆಂಟರ್ ಸಿಬ್ಬಂದಿ ಕರೆ ಮಾಹಿತಿಯನ್ನು ಕಲೆಹಾಕುತ್ತಾರೆ. ಬಳಿಕ ಕರೆ ಮಾಡಿದವರ ಲೋಕೇಷನ್ ಪತ್ತೆಹಚ್ಚಿ ಮ್ಯಾಪ್ ಸಂಗ್ರಹಿಸಲಾಗುತ್ತದೆ.ಕರೆ ಮಾಡಿದ ವ್ಯಕ್ತಿಹೇಳಿದ ಸಮಸ್ಯೆಯ ಸಂಪೂರ್ಣ ಮಾಹಿತಿ ಪಡೆದ ಬಳಿಕಸಂಬಂಧಪಟ್ಟ ಕಂಟ್ರೋಲ್ ರೂಂ, ಪೊಲೀಸ್, ಆಂಬ್ಯುಲೆನ್ಸ್,ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ರವಾನಿಸಲಾಗುತ್ತದೆ ಎಂದುತಿಳಿಸಿದರು.