ಸಿಂಹ, ಹುಲಿ ಸೇರಿದಂತೆ ಇತರೆ ಪ್ರಾಣಿಗಳ ಹಸಿವು ನೀಗಿಸಲು ಈ ಹಿಂದೆ ನೀಡುತ್ತಿದ್ದ ದನದ ಮಾಂಸದ ಬದಲಾಗಿ ಕೋಳಿ ಮಾಂಸ ನೀಡಲಾಗುತ್ತಿದೆ. ಆದರೆ ದನದ ಮಾಂಸ ಸೇವನೆಯನ್ನೇ ರೂಢಿಸಿಕೊಂಡಿರುವ ಪ್ರಾಣಿಗಳು ಇದೀಗ ಕೋಳಿ ತಿನ್ನಲು ಹಿಂದೇಟು ಹಾಕುತ್ತಿದ್ದು ಇದು ಅ ಧಿಕಾರಿಗಳಿಗೆ ತೆಲೆನೋವಾಗಿ ಪರಿಣಮಿಸಿದೆ. ಮೃಗಾಲಯಗಳಿಗೆ ಗೋಹತ್ಯೆ ನಿಷೇಧ ಕಾಯ್ದೆ ಹೇರುವುದರಿಂದಾಗಿ ಪ್ರಾಣಿಗಳ ಆಹಾರದ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಪ್ರಾಣಿಗಳ ಉಳಿವಿಗಾಗಿ ಮೃಗಾಲಯಗಳಿಗೆ ಈ ಕಾನೂನಿನಿಂದ ವಿನಾಯಿತಿ ಬೇಕು ಎಂಬುದು ಪ್ರಾಣಿ ಪ್ರಿಯರ ಅಭಿಪ್ರಾಯವಾಗಿದೆ.
Advertisement
ಓದಿ :ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದರು: ರಾಮಲಿಂಗಾರೆಡ್ಡಿ