ಹರಪನಹಳ್ಳಿ: ಕೇಂದ್ರ ಸರ್ಕಾರದ 2021-22ನೇ ಸಾಲಿನಲ್ಲಿ ಮಂಡಿಸಿರುವ ಬಜೆಟ್ ಜನಸಾಮಾನ್ಯರ ವಿರೋ ಧಿ ಬಜೆಟ್ ಆಗಿದ್ದು, ಬಂಡವಾಳ ಶಾಹಿಗಳಿಗೆ ಪೂರಕವಾದ ಬಜೆಟ್ ಇದಾಗಿದೆ ಎಂದು ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್ ಹೇಳಿದ್ದಾರೆ. ಜನಸಾಮಾನ್ಯರ ದಿನನಿತ್ಯದ ವಸ್ತುಗಳ ಮೇಲೆ ಬೆಲೆ ಏರಿಕೆ ಆಗಿದೆ. ಜನರಿಗೆ ಕಷ್ಟ ಕೊಟ್ಟಿದ್ದಾರೆ. ರಾಜ್ಯಕ್ಕೆ ಯಾವುದೇ ಲಾಭ ಇಲ್ಲ. ಕೋವಿಡ್ ಕಾಲದಲ್ಲಿ ಘೋಷಿಸಿದ್ದ 20 ಲಕ್ಷ ಕೋಟಿ ಸುಳ್ಳಿನ ಪ್ಯಾಕೇಜ್‌ಗೂ ಇಂದಿನ ಬಜೆಟ್‌ಗೂ ವ್ಯತ್ಯಾಸವೇನಿಲ್ಲ. ಸೆಸ್‌ಗಳ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ ವಸೂಲಿ ಬಜೆಟ್ ಇದಾಗಿದ್ದು, ದೇಶದ ಇತಿಹಾಸದಲ್ಲಿ ಇಂಥ ನಿರುತ್ಸಾಹದ ಬಜೆಟ್ ಇನ್ನೊಂದಿಲ್ಲ. ಯಾವ ವರ್ಗಕ್ಕೂ ಬಜೆಟ್‌ನಲ್ಲಿ
ಸಹಾಯ ಮಾಡಿಲ್ಲ ಎಂದು ದೂರಿದ್ದಾರೆ.
ಓದಿ :
ಕೇಂದ್ರ ಸರ್ಕಾರದ್ದು ದಿವಾಳಿ ಬಜೆಟ್: ಲತಾ