Advertisement

ಕೇಂದ್ರ ಸರ್ಕಾರದ್ದು ದಿವಾಳಿ ಬಜೆಟ್‌: ಲತಾ

02:39 PM Feb 02, 2021 | Team Udayavani |

ಹರಪನಹಳ್ಳಿ: ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಿಲ್ಲ. ರೈತರಿಗಾಗಿ ಹೊಸ ಯೋಜನೆ ಘೋಷಿಸಿಲ್ಲ. ಇದೊಂದು ದಿವಾಳಿ ಬಿಜೆಟ್‌ ಆಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಕಿಡಿಕಾರಿದ್ದಾರೆ.
ಕೋವಿಡ್‌ ವೇಳೆ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಅವುಗಳ ಪುನಃಚೇತನ ಬದಲು ಯಂತ್ರೋಪಕರಣಗಳ ಮೇಲೂ ಸೆಸ್‌ ಹಾಕಿದ್ದಾರೆ. ಕೋವಿಡ್‌ನಿಂದಾಗಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಇದರ ಚೇತರಿಕೆ ನಿರೀಕ್ಷೆ ಇತ್ತು ಅದರೆ ಅದು ಹುಸಿಯಾಗಿದೆ. ಜನ ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಆನರ ಅರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿಲ್ಲ. ಎಸ್‌ಸಿ, ಎಸ್‌ಟಿ ಹಾಗೂ ಅಲ್ಪಸಂಖ್ಯಾತ ಯುವಕರಿಗೆ ಯಾವುದೇ ಕಾರ್ಯಕ್ರಮ ಇಲ್ಲ. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಸೆಸ್‌ ಹೆಚ್ಚಳ ಮಾಡಲಾಗಿದ್ದು, ಜನರ ವಿರೋಧಿ ಬಜೆಟ್‌ ಆಗಿದೆ ಎಂದು ದೂರಿದ್ದಾರೆ.

Advertisement

ಓದಿ : ಮೈತ್ರಿಗೆ HDK ಕಂಬಳಿ ಹಾಕಿಕೊಂಡೇ ಕುಳಿತಿದ್ದರು

Advertisement

Udayavani is now on Telegram. Click here to join our channel and stay updated with the latest news.

Next