Advertisement

ಮಾಚಿದೇವರ ತತ್ವಾದರ್ಶ ಸರ್ವಕಾಲಕ್ಕೂ ಪ್ರಸ್ತುತ

02:36 PM Feb 02, 2021 | Team Udayavani |

ಹರಪನಹಳ್ಳಿ: ಸಮಾಜ ಸುಧಾರಕ ಮಾಚಿ ದೇವರು ವಚನಗಳನ್ನು ರಚಿಸಿ ಆ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.
ಅವರ ತತ್ವ ಹಾಗೂ ಆದರ್ಶ ಗಳನ್ನು ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ತಹಶೀಲ್ದಾರ್‌ ಎಂ.ಎಲ್‌.ನಂದೀಶ್‌ ಹೇಳಿದರು.

Advertisement

ಪಟ್ಟಣದ ಮಿನಿವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸವವನ್ನು ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿ ಅವರು ಮಾತನಾಡಿದರು.
12 ನೇ ಶತಮಾನ ಶರಣರ ಸಾಹಿತ್ಯದ ಶತಮಾನವಾಗಿತ್ತು. ಜಾತಿ, ಮತ, ಧರ್ಮ, ಪಂಥ, ಬೇಧ-ಭಾವ ಇವುಗಳನ್ನು ನಿರಾಕರಿಸಿ ಮಾನವಿಯತೆ ಧರ್ಮವೇ ನಿಜವಾದ ಧರ್ಮವೆಂದು ಸಾರಿ ಅನೇಕ ಚಳುವಳಿಗಳನ್ನು ನಡೆಸಿ ಜನ ಸಾಮಾನ್ಯರಿಗೆ ಅರ್ಥವಾಗುವಂತಂಹ ಸರಳ ಪದಗಳಿಂದ ವಚನಗಳನ್ನು ರಚಿಸಿ ಜನರಲ್ಲಿ ಅರಿವು ಮೂಡಿ ಸಿದ್ದು ಶರಣರು.ಇಂತಹ ಶರಣರಲ್ಲಿ ಮಡಿವಾಳ ಮಾಚಿದೇವರು ಕೂಡ ಒಬ್ಬರು ಎಂದರು.

ಮಡಿವಾಳ ಸಮಾಜ ಜಿಲ್ಲಾಧ್ಯಕ್ಷ ಯರಬಳ್ಳಿ ಉಮಾಪತಿ ಮಾತನಾಡಿ, ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳಿದಂತೆ ತಮ್ಮ ಕಾಯಕವನ್ನು ನಿಷ್ಠೆಯಿಂದ ಮಾಡಿಕೊಂಡು, ಶಿವಶರಣರಾದವರಲ್ಲಿ ಮಾಚಿದೇವರು ಒಬ್ಬರಾಗಿದ್ದಾರೆ. ಮನುಷ್ಯರ ನಡುವೆ ಇರುವ ಅಂತರವನ್ನು
ಹೋಗಲಾಡಿಸಲು ಹೋರಾಡಿದ ಮಹಾನ್‌ ಶರಣರು. ಮಡಿವಾಳ ಮಾಚಿದೇವರು ಮುಖ್ಯವಾಗಿ ಎಲ್ಲಾ ಶರಣರಿಂದ ಗೌರವ ಪಡೆದುಕೊಂಡಂತಹ ಶರಣರು. ಅರಿವೇ ಗುರು ಎಂಬ ವಾಕ್ಯದೊಂದಿಗೆ ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ. ಆದರೆ ಜ್ಞಾನವನ್ನು ಕ್ರಿಯಾತ್ಮಕವಾಗಿಸಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ ಎಂದು ಮಡಿವಾಳ ಮಾಚಿದೇವರು ಹೇಳಿದ್ದಾರೆ ಎಂದ ತಿಳಿಸಿದರು.

ಓದಿ : ಸರ್ಕಾರಗಳ ನೀತಿಗೆ ಖಂಡನೆ

Advertisement

Udayavani is now on Telegram. Click here to join our channel and stay updated with the latest news.

Next