Advertisement

ವಚನಗಳ ಸಂರಕ್ಷಣೆಯಲ್ಲಿ ಮಾಚಿದೇವರ ಪಾತ್ರ ಪ್ರಮುಖ

02:18 PM Feb 02, 2021 | Team Udayavani |

ಕಂಪ್ಲಿ: 12ನೇ ಶತಮಾನದಲ್ಲಿ ಶಿವ ಶರಣರು ತಮ್ಮ ಕಾಯಕದ ಜೊತೆಗೆ ಬರೆಯುತ್ತಿದ್ದ ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ತ್ಯಾಗ ಸ್ಮರಣೀಯ ಎಂದು ತಹಶೀಲ್ದಾರ್‌ ಗೌಸಿಯಾಬೇಗಂ ಹೇಳಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ಕಂಪ್ಲಿ ತಾಲೂಕು ಮಡಿವಾಳರ ಸಂಘದ ಸಹಯೋಗದಲ್ಲಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿದ ಅವರು, ಸಮಾನತೆ, ಜಾತಿಯತೆ ನಿರ್ಮೂಲನೆ, ಸೀ÷ ಸ್ವಾತಂತ್ರ ಹನ್ನೆರಡನೆಯ ಶತಮಾನದಲ್ಲಿ ನಡೆದ ಕಲ್ಯಾಣ
ಕ್ರಾಂತಿಯ ಮೂಲ ಉದ್ದೇಶವಾಗಿತ್ತು. ಅಂದಿನ ಸಾಮಾಜಿಕ ಕ್ರಾಂತಿಯಲ್ಲಿ ಮಡಿವಾಳ ಮಾಚಿದೇವರು ವಚನ ಗ್ರಂಥಗಳನ್ನು ಸಂರಕ್ಷಿಸುವ ಮೂಲಕ ಶರಣರ ಗೌರವಕ್ಕೆ ಪಾತ್ರರಾಗಿದ್ದರಲ್ಲದೆ, ಸಮಾಜದ ಕೊಳೆಯನ್ನು ತೊಳೆಯುವಲ್ಲಿ ವಿಶೇಷ ಪಾತ್ರವನ್ನು ವಹಿಸಿದ್ದರು.

ಸಮಾಜಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು, ಸಮಾಜದವರು ಅವರ ವಿಚಾರಧಾರೆಗಳನ್ನು ಪಾಲಿಸುವ ಜತೆಗೆ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ, ತಾಲೂಕು ಮಡಿವಾಳರ ಸಂಘದ ಅಧ್ಯಕ್ಷ ಎಂ. ಹುಲುಗಪ್ಪ ಮಾತನಾಡಿದರು. ನಂತರ ಪರಿಶಿಷ್ಟ ಜಾತಿಗೆ ಮಡಿವಾಳ ಜನಾಂಗವನ್ನು ಸೇರಿಸುವಂತೆ ಆಗ್ರಹಿಸಿ ಮಡಿವಾಳ ಸಮಾಜದವರು ತಹಶೀಲ್ದಾರ್‌ ಗೌಸಿಯಾಬೇಗಂಗೆ
ಮನವಿ ಸಲ್ಲಿಸಿದರು.

ಉಪ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಕಂದಾಯ ಅ ಧಿಕಾರಿ ಎ. ಗಣೇಶ, ಮುಖಂಡರಾದ ವಿ. ವಿದ್ಯಾಧರ, ಕೆ.ವಸಂತಕುಮಾರ, ಮರಿಯಪ್ಪನಾಯಕ, ವಿರುಪಣ್ಣ, ಕಂಪ್ಲಿ ತಾಲೂಕು ಮಡಿವಾಳ ಮಾಚಿದೇವರ ಸಂಘದ ಗೌರವಾಧ್ಯಕ್ಷ ಯಂಕಪ್ಪ, ಕಾರ್ಯದರ್ಶಿ ಎಂ. ರಾಜ, ಖಜಾಂಚಿ ರವಿಕುಮಾರ್‌, ವಿರುಪಾಕ್ಷಿ, ಈರಣ್ಣ, ಹನುಮಂತ, ರಮೇಶ, ವಿರೇಶ, ಬಸವರಾಜ, ನಾಗರಾಜ, ಹನುಮಂತಪ್ಪ, ಆನಂದಪ್ಪ, ತಾಯಣ್ಣ ಇದ್ದರು.

ಓದಿ : ಮಾಚಿದೇವರ ಕಾಯಕ-ವಚನ ಮಾದರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next