ಸಂಡೂರು: ಮಡಿವಾಳ ಮಾಚಿದೇವರು 12ನೇ ಶತಮಾನದ ಶ್ರೇಷ್ಠ ಶರಣರಲ್ಲಿ ಒಬ್ಬರು. ಅವರು ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ವವನ್ನು ತಮ್ಮ ಬದುಕಿನುದ್ದಕ್ಕೂ ಅನುಸರಿಸುವ ಮೂಲಕ ಆದರ್ಶ ಪ್ರಾಯರಾಗಿದ್ದು ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಅತಿ ಅಗತ್ಯ ಎಂದು ಪುರಸಭೆ ಅಧ್ಯಕ್ಷೆ ಅನಿತಾವಸಂತಕುಮಾರ್ ತಿಳಿಸಿದರು.
ಅವರು ಪಟ್ಟಣದ ಪುರಸಭೆ ಆವರಣದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಶರಣರ ಜಯಂತಿಗಳನ್ನು ಆಚರಿಸುತ್ತೇವೆ ಎಂದರೆ ಅವರ ತತ್ವಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂಥ ಮಹತ್ತರ ಕಾರ್ಯ ನಡೆಯಬೇಕು. ಅಲ್ಲದೆ ಶರಣರು ತಮ್ಮ ಕಾರ್ಯದ ಮೂಲಕ ಜಗತ್ತಿಗೆ ದಾಸೋಹ ತತ್ವವನ್ನು ಸಾರಿದರು.
ಅವರ ಆದರ್ಶಗಳು ನಿತ್ಯ ಸತ್ಯವಾದವುಗಳು ಎಂದರು. ಮುಖ್ಯಾಧಿ ಕಾರಿ ಇಮಾಮ್ ಸಾಹೇಬ್ ಮಾತನಾಡಿ, ಮಡಿವಾಳ ಮಾಚಿದೇವರು ಕತ್ತಿಯನ್ನು «ರಿಸಿರುವುದು ಬಹು ವಿಶೇಷವಾದುದು ಕಾರಣ ಅವರು ದೇವರ ಸಂಭೂತ ಎನ್ನುವ ಅಂಶಗಳು ಕಂಡು ಬರುತ್ತವೆ. ಅವರು ಕಾಯಕದಲ್ಲಿ ಬಟ್ಟೆಗಳನ್ನು ಮಡಿ ಮಾಡುವ ಕಾಯಕದೊಂದಿಗೆ ನಿಜವಾದ ಮಡಿಯನ್ನೇ ಜಗತ್ತಿಗೆ ತೋರಿಸಿಕೊಟ್ಟವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿ ಕಾರಿ ಪ್ರಭುರಾಜ ಹಗರಿ ನಿರೂಪಿಸಿ, ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ಪರುವತಯ್ಯ- ಸುಜ್ಞಾನವ್ವ ದಂಪತಿಗಳ ಮಗನಾಗಿ ಇವರು ಜನಿಸಿ ಮುಂದೆ ಕಲ್ಯಾಣಕ್ಕೆ ಬಂದು ಬಸವಣ್ಣನವರ ಅನುಯಾಯಿಯಾಗಿ ಕಾಯಕ ತತ್ವವನ್ನು ಸಾರಿದರು. ಸಮಾಜದಲ್ಲಿ ಸಮಾನತೆಯನ್ನು ಹುಟ್ಟು ಹಾಕುವಲ್ಲಿ ಪ್ರಮುಖರು ಎಂದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿರೇಶ್ ಸಿಂಧೆ, ಸದಸ್ಯರಾದ ಎಲ್.ಎಚ್. ಶಿವಕುಮಾರ್, ಸುರೇಶ್, ಸಿ.ಕೆ.ಅಶೋಕ, ಬ್ರಹ್ಮಯ್ಯ, ಹನುಮೇಶ್, ಸಂತೋಷ್ ಕುಮ ಜೆ., ಹರೀಶ್, ಸಿರಾಜ್ ಹುಸೇನ್ ಇದ್ದರು
ಓದಿ :
“ಮಹಾ ಯಡವಟ್ಟು”: 12 ಮಕ್ಕಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್: ಮಕ್ಕಳು ಅಸ್ವಸ್ಥ