Advertisement

ಪೋಲಿಯೋ ಮುಕ್ತ ರಾಷ್ಟ್ರ ವಾಗಿಸಲು ಸಹಕರಿಸಿ

05:38 PM Feb 01, 2021 | Team Udayavani |

ಕಂಪ್ಲಿ: ದೇಶವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸುವ ಮೂಲಕ ಪ್ರತಿಯೊಬ್ಬರೂ ಸಹಕರಿಸಬೇಕೆಂದು ಚೌಡೇಶ್ವರಿ ನೇಕಾರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್‌ನ ಕಂಪ್ಲಿ ಫಿರ್ಕಾ ಪ್ರಧಾನ ಕಾರ್ಯದರ್ಶಿ ಜಿ. ಸುಧಾಕರ್‌ ಹೇಳಿದರು. ಪಟ್ಟಣದ ಹೊಸ ಬಸ್‌ ನಿಲ್ದಾಣದಲ್ಲಿ ಪರಮ ಪೂಜ್ಯ ದಿವ್ಯಜ್ಞಾನಾನಂದಗಿರಿ ಸ್ವಾಮೀಜಿಯವರ 35ನೇ ಜನ್ಮದಿನದ ಅಂಗವಾಗಿ ಶ್ರೀಚೌಡೇಶ್ವರಿ ನೇಕಾರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್‌ ಕಂಪ್ಲಿ  ಫಿರ್ಕಾದಿಂದ ಹಮ್ಮಿಕೊಂಡ ಹಾಲು, ಹಣ್ಣು ಮತ್ತು ಬ್ರೆಡ್‌ ವಿತರಿಸುವ ಜತೆಗೆ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಭಾನುವಾರ ಜರುಗಿತು.
ಪೊಲೀಸ್‌ ಠಾಣೆ ಪಿಎಸ್‌ಐ ಟಿ.ಎಲ್‌.ಬಸಪ್ಪ ಲಮಾಣಿ ಅವರು ಮಗುವಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಚೌಡೇಶ್ವರಿ ನೇಕಾರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್‌ ಕಂಪ್ಲಿ ಫಿರ್ಕಾದ ಪ್ರಧಾನ ಕಾರ್ಯದರ್ಶಿ ಜಿ. ಸುಧಾಕರ, ಪುರಸಭೆ ಸದಸ್ಯೆ ಪಾರ್ವತಿ ಮರಿಯಪ್ಪ ನಾಯ್ಕ, ಚೌಡೇಶ್ವರಿ ನೇಕಾರ ಕಲ್ಯಾಣ ಅಭಿವೃದ್ಧಿ ಟ್ರಸ್ಟ್‌ ಕಂಪ್ಲಿ ಫಿರ್ಕಾ ಖಜಾಂಚಿ ಸಪ್ಪರದ ರಾಘವೇಂದ್ರ, ಸದಸ್ಯ ಡಾ| ಸುಧಾಕರ, ನೇಕಾರ ಕ್ಷತ್ರಿಯ ತೊಗಟವೀರ ಸಂಘದ ಅಧ್ಯಕ್ಷ ಎಂ. ವೆಂಕಟಕೊಂಡಯ್ಯ, ಶಿಕ್ಷಕರಾದ ವೀರಕುಮಾರ್‌, ಈರಪ್ಪ ಸೊರಟೂರು, ಮುಖಂಡರಾದ ಮರಿಯಪ್ಪ ನಾಯಕ, ನಾಗರಾಜ, ಈಶ್ವರ, ಶಿವನಾರಾಯಣ, ಶಿವಯ್ಯ, ನರಸಿಂಹರಾವ್‌, ಕೃಷ್ಣ, ಕಂಪ್ಲಿ ಸರ್ಕಾರಿ ಆಸ್ಪತ್ರೆ ಗ್ರೂಪ್‌ ಡಿ ರಾಮಣ್ಣ, ಗೃಹ ರಕ್ಷಕದಳದ ಸಿಬ್ಬಂದಿ ಕೆ. ಸುರೇಶ್‌, ಕೆ. ಹೊನ್ನೂರವಲಿ ಇದ್ದರು.

Advertisement

ಓದಿ:ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಿ

Advertisement

Udayavani is now on Telegram. Click here to join our channel and stay updated with the latest news.

Next