Advertisement

ಹೆಣ್ಣುಮಕ್ಕಳಿಗೆ ಆಡಳಿತ ವ್ಯವಸ್ಥೆಯ ಅರಿವು ಬೇಕು

04:07 PM Jan 31, 2021 | Team Udayavani |

ಬಳ್ಳಾರಿ: ಆಡಳಿತ ವ್ಯವಸ್ಥೆ ಬಗ್ಗೆ ಹೆಣ್ಣು ಮಕ್ಕಳಿಗೆ ಅರಿವು ಮೂಡಿಸುವ ಉದ್ದೇಶದಿಂದ ಇಂಥ ನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಲವಾರು ವಿಷಯಗಳು ಇಂದಿನ ಕಾರ್ಯಕ್ರಮದ ಮೂಲಕ ನಮ್ಮ ಗಮನಕ್ಕೆ ಬಂದಿವೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅ ಧಿಕಾರಿ ಕೆ.ಆರ್‌. ನಂದಿನಿ ಹೇಳಿದರು.

Advertisement

ನಗರದ ಜಿಪಂ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಿಮಿತ್ತ ಜಿಪಂ ವತಿಯಿಂದ ಶನಿವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದೊಂದು ವಿಶೇಷ ಪ್ರಯತ್ನ, ಜಿಲ್ಲೆಯ ಎಲ್ಲ ಅಧಿ
ಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಿಂದ ವಿದ್ಯಾರ್ಥಿನಿಯರು ಬಂದಿದ್ದಾರೆ. ಇಂದು ಹೆಣ್ಣುಮಕ್ಕಳು ಮಾಡಿದ ಕಾರ್ಯಗಳು ನಮಗೆ ಪ್ರೇರಣೆ ನೀಡಿವೆ ಎಂದರು.

ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಯನ್ನು ತಡೆಯುವ ಕೆಲಸ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಈಗಾಗಲೇ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಪಂ ನಡೆ ಮಹಿಳಾ ಮತ್ತು ಮಕ್ಕಳ ಕಡೆ ಕಾರ್ಯಕ್ರಮ ಮತ್ತು ಓದುವ ಬೆಳಕು ಕಾರ್ಯಕ್ರಮದ ಮೂಲಕ ಬಾಲ್ಯ ವಿವಾಹ, ಬಾಲಕಾರ್ಮಿಕ
ಮತ್ತು ವರದಕ್ಷಿಣೆಯಂತಹ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಯಾದಗಿರಿ ನಗರಸಭೆ ಆಯುಕ್ತೆ ಬಳ್ಳಾರಿಯ ಬಿ.ವಿ.ಅಶ್ವಿ‌ಜಾ ಮಾತನಾಡಿ, ನಿಮಗಿಷ್ಟವಾದ ಗುರಿಯೊಂದಿಗೆ ಮುಂದೆ ಸಾಗಿ. ನಿಮ್ಮದೇ ಹಾದಿಯಲ್ಲಿ ನಡೆಯರಿ, ಸಮಾಜಕ್ಕೆ ಮಾದರಿಯಾಗುವಂಥ ರೀತಿಯಲ್ಲಿ ಕಾರ್ಯನಿರ್ವಹಿಸಿ ಎಂದರು.

ಕಾರ್ಯಕ್ರಮದಲ್ಲಿ ಒಂದು ದಿನದ ಜಿಪಂ ಯೋಜನಾ ನಿರ್ದೇಶಕಿ ಆದರ್ಶ ವಿದ್ಯಾಲಯದ ರುಕ್ಸಾನಾ, ಒಂದು ದಿನದ ಜಿಲ್ಲಾ ಧಿಕಾರಿ ಡಿ. ಕೃಷ್ಣವೇಣಿ, ಅಪರ ಜಿಲ್ಲಾಧಿಕಾರಿ ಕೆ.ಕವನ, ಜಿಪಂ ಮುಖ್ಯ ಯೋಜನಾಧಿಕಾರಿ ಚೇತನ್‌, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
ರಮೀಜಾ, ಕೃಷಿ ಜಂಟಿ ನಿರ್ದೇಶಕಿ ಮಾಣಿಕ್ಯ ಸೇರಿದಂತೆ ಅನೇಕರು ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಪಿ. ದೀನಾ ಮಂಜುನಾಥ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಿದ್ದಲಿಂಗೇಶ್‌ ರಂಗಣ್ಣನವರು, ಜಿಲ್ಲಾ ಕ್ಷಯರೋಗ ನಿಯಂತ್ರಣಾ ಧಿಕಾರಿ ಡಾ| ಇಂದ್ರಾಣಿ ಇದ್ದರು. ಇದಕ್ಕೂ ಮುಂಚೆ ನಡೆದ ಮಹಿಳಾ ಸಂಬಂ ಧಿತ ಸಂವಾದದಲ್ಲಿ ಹೆಣ್ಮಕ್ಕಳ ಸಂಬಂ ಧಿತ ಅನೇಕ ಸವಾಲು ಮತ್ತು ಸಮಸ್ಯೆಗಳು ಅನಾವರಣವಾದವು. ಅವುಗಳನ್ನು ಕ್ರೊಢೀಕರಿಸಿ ಜಿಪಂ ಸಿಇಒ ಕೆ.ಆರ್‌. ನಂದಿನಿ ಅವರಿಗೆ ಸಲ್ಲಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳ್ಳಾರಿ, ಹಡಗಲಿ, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಹರಪನಳ್ಳಿ, ಸಂಡೂರು, ಸಿರಗುಪ್ಪದಿಂದ ವಿದ್ಯಾರ್ಥಿನಿಯರು ಆಗಮಿಸಿದ್ದರು.

 

Advertisement

ಓದಿ : ಹುತಾತ್ಮರ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ

Advertisement

Udayavani is now on Telegram. Click here to join our channel and stay updated with the latest news.

Next