Advertisement

ಇಂದು ಉಪನ್ಯಾಸ- ನುಡಿನಮನ ಕಾರ್ಯಕ್ರಮ

03:55 PM Jan 31, 2021 | Team Udayavani |

ಸಿರುಗುಪ್ಪ: ಕಸಾಪ ತಾಲೂಕು ಘಟಕದ ವತಿಯಿಂದ ಹಿರಿಯ ಸಂಗೀತ ಕಲಾವಿದ ಮಲ್ಕಪುರ ಹಿರೇಮಠ ದೊಡ್ಡಬಸವಾರ್ಯ ಗವಾಯಿಗಳ ಬದುಕು, ಸಂಗೀತ ಮತ್ತು ಸಾಧನೆ ಕುರಿತು ಉಪನ್ಯಾಸ ಮತ್ತು ನುಡಿನಮನ ಸಂಗೀತ ಕಾರ್ಯಕ್ರಮ ಜ. 31ರಂದು ಹಮ್ಮಿಕೊಳ್ಳ
ಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಸ್‌.ಎಂ.ನಾಗರಾಜಸ್ವಾಮಿ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ನಿಧನರಾದ ದೊಡ್ಡಬಸವಾರ್ಯ ಗವಾಯಿಗಳ ಬದುಕು, ಸಂಗೀತ ಮತ್ತು ಸಾಧನೆ ಕುರಿತು ವೀರೇಶ್ವರ ಶಾಸ್ತ್ರಿ ಉಪನ್ಯಾಸ ನೀಡಲಿದ್ದು,
ಕಾರ್ಯಕ್ರಮದಲ್ಲಿ ಗುರುಬಸವ ಮಠದ ಬಸವಭೂಷಣ ಸ್ವಾಮೀಜಿ, ಕ.ಸಾ.ಪ. ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ, ಜಿಲ್ಲಾ ಸಂಚಾಲಕ ಎಂ ಪಂಪಾಪತಿ, ವಿರುಪಾಕ್ಷಿಗೌಡ, ವಿನಯ್‌ ಕುಮಾರ್‌, ದಿವಾಕರ್‌ ನಾರಾಯಣ, ಮಾಜಿ ಶಾಶಕ ಟಿ.ಎಂ.ಚಂದ್ರ ಶೇಖರಯ್ಯಸ್ವಾಮಿ, ಬೀರಳ್ಳಿ ರಾಮರೆಡ್ಡಿ, ಹಾರ್ಮೋನಿಯಂ ವಾದಕ ಮದಿರೆ ಮರಿಸ್ವಾಮಿ, ಕಲಾವಿದ ಮಹಾದೇವಯ್ಯಸ್ವಾಮಿ ಗವಾಯಿ, ಹಿರಿಯ ವಕೀಲ ಎಚ್‌.ಕೆ. ಮಲ್ಲಿಕಾರ್ಜುನಸ್ವಾಮಿ, ಮಾಜಿ ತಾಪಂ ಅಧ್ಯಕ್ಷ ಎಂ.ಗೋಪಾಲರೆಡ್ಡಿ, ನಾ.ಮ.ಬಸವರಾಜಶಾಸ್ತ್ರಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಪಿ.ಡಿ. ಭಜಂತ್ರಿ, ಬಳ್ಳಾರಿ ತಾಪಂ ಇಒ ಎಂ. ಬಸಪ್ಪ ಭಾಗವಹಿಸಲಿದ್ದಾರೆ. ಮಹಾದೇವಸ್ವಾಮಿ, ಬಸವರಾಜ್‌ಮೋತಿ, ಪುಟ್ಟರಾಜ ಮೋತಿ, ನಾ.ಮ. ಜಗ ದೀಶ, ಎಂ.ಎಂ. ಶಾಂತಯ್ಯ, ಎಸ್‌.ಎಂ.ಹಿರೇಮಠ, ವೆಂಕಟೇಶ್‌ ಯಾದವ್‌, ಎಚ್‌.ಎಸ್‌. ನಾಗರಾಜ, ಗಿರಿಜಾ ಹಿರೇಮಠ…, ಸಂದೀಪ್‌ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆಂದು ಮಾಹಿತಿ ನೀಡಿದರು.

Advertisement

ಓದಿ : ಲಿಂಗ ಅಸಮಾನತೆ ತೊಲಗಿಸಲು ಶ್ರಮಿಸಿ

Advertisement

Udayavani is now on Telegram. Click here to join our channel and stay updated with the latest news.

Next