ಕಾರ್ಯಕ್ರಮ ನಡೆಸಲಾಯಿತು.
Advertisement
ಕ್ಷೇತ್ರ ಅರೋಗ್ಯ ಶಿಕ್ಷಣಾ ಧಿಕಾರಿ ಎ.ಪಿ.ದೊಡಮನಿ ಮಾತನಾಡಿ, ಸಮಾಜದಲ್ಲಿ ಕುಷ್ಟರೋಗ ಕಳಂಕವಲ್ಲ ಮತ್ತು ವಾಸಿಯಾಗುವ ಕಾಯಿಲೆಯಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಇರುತ್ತದೆ. ಇದು ಸಂಪೂರ್ಣ ಗುಣಮಖವಾಗುವ ಕಾಯಿಲೆ ಆಗಿದ್ದು, ಯಾರು ಭಯಪಡುವ ಅಗತ್ಯ ಇಲ್ಲ ಎಂದರು. ಜತೆಗೆ ರೋಗಿಗಳಿಗೆ ಬ್ರೇಡ್ ವಿತರಣೆ ಮಾಡಲಾಯಿತು. ಕುಷ್ಟರೋಗದ ಕುರಿತು ಕಾರ್ಯಕ್ರಮದಲ್ಲಿ ಅರಿವು ಮೂಡಿಸಲಾಯಿತು. ಕುಷ್ಟರೋಗ ಮೇಲ್ವಿಚಾರಕ ಎಂ. ಧರ್ಮನಗೌಡ ಮತ್ತು ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.