ಎಂದು ಕಾರ್ಮಿಕ ಮುಖಂಡ ಯು. ಬಸವರಾಜ ಕಿಡಿಕಾರಿದರು.
Advertisement
ಮಹಾತ್ಮ ಹುತಾತ್ಮ ದಿನಾಚರಣೆ ಹಾಗೂ ರೈತ-ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ನಗರದ ಪಶುಸಂಗೋಪನೆ ಇಲಾಖೆ ಆವರಣದಲ್ಲಿ ನಗರದ ವಿವಿಧ ಕಾರ್ಮಿಕ ಸಂಘಟನೆಗಳ ಜಂಟಿ ಹೋರಾಟ ವೇದಿಕೆ ವತಿಯಿಂದ ಶನಿವಾರ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದಅವರು, ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿ, ಕಳೆದ 70 ದಿನಗಳಿಂದ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಹತ್ತಿಕ್ಕಲು, ಪೊಲೀಸರ ಮೂಲಕ ದೌರ್ಜನ್ಯ ನಡೆಸುತ್ತಿದೆ. ಇದೊಂದು ಕೇವಲ ರೈತ-ಕಾರ್ಮಿಕರ ಹೋರಾಟವಲ್ಲ. ಇದೊಂದು ಎರಡನೇ ಸ್ವಾತಂತ್ರ ಸಂಗ್ರಾಮವಾಗಿದ್ದು, ಬೇಡಿಕೆ ಈಡೇರುವವರಗೆ ನಿಲ್ಲುವುದಿಲ್ಲ ಎಂದರು. ಮುಖಂಡರಾದ ಆರ್. ಎಸ್. ಬಸವರಾಜ, ಎಂ.ಜಂಬಯ್ಯನಾಯಕ, ಆರ್. ಭಾಸ್ಕರರೆಡ್ಡಿ, ಎ.ಕರುಣಾನಿಧಿ , ನಾಗರತ್ನಮ್ಮ, ಯಲ್ಲಾಲಿಂಗ, ಕೆ.ಎಂ.ಸಂತೋಷ, ಗೋಪಾಲ ಇನ್ನಿತರರಿದ್ದರು.