ಶನಿವಾರ ಭೇಟಿ ನೀಡಿ ಪಾದಯಾತ್ರೆ ನಡೆಸುವಮೂಲಕ ಜಾತಿ ಸಾಮರಸ್ಯ ಮೆರೆದರು.
Advertisement
ಶ್ರೀಗಳ ಸ್ವಾಗತಕ್ಕಾಗಿ ಸುಮಾರು·ಒಂದು ಕಿಮೀ ವರೆಗಿನ ರಸ್ತೆಯ ಎರಡೂ·ಬದಿ ತಳಿರು ತೋರಣಗಳನ್ನು ಕಟ್ಟಿಸಿಂಗರಿಸಲಾಗಿತ್ತು. ಮನೆಗಳ ಅಂಗಳದಲ್ಲಿ·ಸ್ವತ್ಛಗೊಳಿಸಿ ಚಿತ್ತಚಿತ್ತಾರದ ರಂಗೋಲಿ ಹಾಕಿ·ಅಲಂಕರಿಸಲಾಗಿತ್ತು. ಸ್ವಲ್ಪ ತಡವೆನಿಸಿದರೂ·ದಲಿತ ಕೇರಿ ಹರಿಶ್ಚಂದ್ರನಗರಕ್ಕೆ ಆಗಮಿಸಿ·ಶ್ರೀಗಳನ್ನು ಸ್ಥಳೀಯ ಮಹಿಳೆಯರು ಕುಂಭ·ಕಳಸವನ್ನು ಹಿಡಿದು ಸ್ವಾಗತಿಸಿದರು. ಕೇರಿಯಲ್ಲಿ·ಸುಮಾರು 1 ಕಿಮೀವರೆಗೆ ಪಾದಯಾತ್ರೆ·ನಡೆಸಿದ ಶ್ರೀಗಳಿಗೆ ಹೂವು ಹಾಕಿ, ಕಾಲಿಗೆ·ನಮಸ್ಕರಿಸುತ್ತಲೇ ಸ್ವಾಗತಿಸಿದರು.
ಬಳಿಕ ಕೇರಿಯ ರಾಮು, ಉಮೇಶ್,·ಎರ್ರಿಸ್ವಾಮಿ, ನಾಗರಾಜ್, ಹೊನ್ನೂರಪ್ಪ·ಅವರು ತಮ್ಮ ತಮ್ಮ ಮನೆಗಳಲ್ಲಿ ದಂಪತಿ·ಸಮೇತ ಶ್ರೀಗಳಿಗೆ ಪಾದಪೂಜೆ ಮಾಡಿದರು.
ಸಲ್ಲಿಸಿದ ಭಕ್ತರಿಗೆ ಶ್ರೀಗಳು ಮಂತ್ರಾಕ್ಷತೆ ಹಾಕಿ·ಆಶೀರ್ವಚನ ನೀಡಿದರು. ಬಳಿಕ ನಡೆದ·ವೇದಿಕೆ ಕಾರ್ಯಕ್ರಮದಲ್ಲಿ ಆಶೀರ್ವಚನ·ನೀಡಿದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದ ಶ್ರೀಗಳು,·ಭರತ ಭೂಮಿ ಸಾಮಾನ್ಯವಾದುದಲ್ಲ. ಮೋಕ್ಷ·ಪ್ರದವಾಗಿರುವಂತಹ ಅನೇಕ ಕ್ಷೇತ್ರಗಳು·ಇಲ್ಲಿವೆ. ಅದರಲ್ಲಿ ಅಯೋಧ್ಯಾವನ್ನು·ಪ್ರಥಮವಾಗಿ ಪರಿಗಣಿಸಲಾಗುತ್ತದೆ.·ಭಗವಂತನೇ ಶ್ರೀರಾಮನ ರೂಪದಲ್ಲಿ·ಅವತರಿಸಿರುವ ಅಯೋಧ್ಯೆಯಲ್ಲಿ ಭವ್ಯವಾದಶ್ರೀರಾಮ ಮಂದಿರ ಇತ್ತು. ವಿದೇಶಿಯರ·ಆಕ್ರಮಣದಿಂದ ಅದು ಹಾಳಾಗಿತ್ತು. ಸನಾತನ·ಹಿಂದೂ ಧರ್ಮಿಯರ ಶಾಂತಿಯುತ
ಹೋರಾಟದಿಂದಾಗಿ ಸುಪ್ರೀಂಕೋರ್ಟ್·ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಇತ್ತು·ಎಂದು ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ·ಹಿಂದೂಗಳ ಶತಮಾನಗಳ ಕನಸು ಈಗ·ನನಸಾಗುವ ಸಮಯ ಬಂದಿದೆ ಎಂದರು. ರಾಮ ಮಂದಿರ ನಿರ್ಮಿಸುವುದಾಗಿ ಹಲವು ಶ್ರೀಮಂತರು ಮುಂದ ಬಂದಿದ್ದರಾದರೂ ಮಂದಿರವನ್ನು ಒಬ್ಬರಿಂದ ನಿರ್ಮಿಸುವುದು ಸರಿಯಲ್ಲ. ಎಲ್ಲರೂ ಸೇರಿ ನಿರ್ಮಿಸಬೇಕು. ಹಾಗಾಗಿ ಮಂದಿರ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸಬೇಕು. ನಮ್ಮೆಲ್ಲರ ಮೇಲೂ ರಾಮದೇವರ ಅನುಗ್ರಹ
ಇರಲಿದೆ. ಟಿವಿ, ರೇಡಿಯೋಗಳಿಂದ ಬದುಕಲ್ಲಿ ಶಾಂತಿ ನೆಮ್ಮದಿ ಕೊಡಲಾಗುವುದಿಲ್ಲ. ಸಂಸ್ಕೃತಿಯ ಪುನರುತ್ಥಾನದಿಂದ ಮಾತ್ರ
ಬದುಕಲ್ಲಿ ಶಾಂತಿ ನೆಮ್ಮದಿ ಸಿಗಲಿದೆ. ಎಲ್ಲರ ಮನೆಯಲ್ಲಿ ನಿತ್ಯ ರಾಮನಾಮ ಜಪ ಮಾಡಬೇಕು. ಮನೆಯಲ್ಲಿ ಏನೇ ಒಳ್ಳೆಯ
ಕೆಟ್ಟ ಕೆಲಸಗಳನ್ನು ಮಾಡಿದಾಗಲೂ ರಾಮ ರಾಮ ಎಂದು ರಾಮನಾಮ ಸ್ಮರಿಸಬೇಕು. ಅದು ನಮ್ಮ ಬದುಕಿನ ಮಂತ್ರವಾಗಬೇಕು.
ರಾಮ ಮಂದಿರ ಶತ ಶತಮಾನಗಳ ಕಾಲ ಶಾಶ್ವತವಾಗಿ ಹಿಂದೂ ಧರ್ಮಿಯರ ಕೈಯಲ್ಲೇ ಉಳಿಯಬೇಕು. ನಮ್ಮ ಸಂಸ್ಕೃತಿ, ನಮ್ಮ ಸಂತತಿಯನ್ನು ಸಹ ಹಾಗೆ ಬೆಳೆಸಬೇಕು. ಇಲ್ಲದಿದ್ದಲ್ಲಿ ಇನ್ನೆರಡು ಶತಮಾನಗಳಲ್ಲಿ
ಇನ್ನೊಬ್ಬರ ಪಾಲಾಗಲಿದೆ ಎಂದು ಆಶೀರ್ವಚನ ನೀಡಿದರು.
Related Articles
Advertisement
ಓದಿ : ಟೊಯೋಟಾ ಬಿಕ್ಕಟ್ಟು ಶಮನಕ್ಕೆ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಬೇಕು: ಸಿದ್ದರಾಮಯ್ಯ