Advertisement

ಕನ್ನಡ ಭಾಷಾಭಿವೃದ್ಧಿಗೆ ಸಾಹಿತ್ಯ ಸಮ್ಮೇಳನ ಅಗತ್ಯ: ಕೊಟ್ರಪ್ಪ

05:45 PM Jan 29, 2021 | Team Udayavani |

ಹಗರಿಬೊಮ್ಮನಹಳ್ಳಿ: ಕನ್ನಡ ಭಾಷಾಭಿವೃದ್ಧಿ  ಹಾಗೂ ಕನ್ನಡ ಏಳ್ಗೆಗೆ ನಿರಂತರವಾಗಿ ಕಾರ್ಯ ಕ್ರಮಗಳು ನಡೆಯಬೇಕು. ತಂಬ್ರಹಳ್ಳಿಯಲ್ಲಿ ಸಮ್ಮೇಳನ ನಡೆಸಲು ಗ್ರಾಮದ ಯುವಕರು ಉತ್ಸುಹಕರಾಗಿದ್ದಾರೆ ಎಂದು ದಾನಿ ಅಕ್ಕಿ ಕೊಟ್ರಪ್ಪ ಹೇಳಿದರು.
ತಾಲೂಕಿನ ತಂಬ್ರಹಳ್ಳಿ ಗ್ರಂಥಾಲಯದಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ವಿವಿಧ ಸಂಘ-ಸಂಸ್ಥೆಗಳ ಯುವ ಪಡೆಯೊಂದಿಗೆ ಸಮ್ಮೇಳನ ಯಶಸ್ವಿಯಾಗುತ್ತದೆ. ತಂಬ್ರಹಳ್ಳಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಮಾಡಲಿಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಪುಸ್ತಕಗಳನ್ನು ನಿರಂತರವಾಗಿ ಓದುವುದರಿಂದ ಜ್ಞಾನಾರ್ಜನೆ ವೃದ್ಧಿಸುತ್ತದೆ ಎಂದು ಹೇಳಿದರು.
ಕಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎಂಪಿಎಂ ಮಂಜುನಾಥ ಮಾತನಾಡಿ, ತಾಲೂಕಿನ ತಂಬ್ರಹಳ್ಳಿಯಲ್ಲಿ 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುವುದು. ಸಭೆಯಲ್ಲಿ ಸ್ಥಳ ನಿಗದಿ ಕುರಿತಂತೆ ಹಾಜರಿದ್ದ ಸರ್ವಸದಸ್ಯರ ಒಕ್ಕೊರಲಿನ ನಿರ್ಧಾರದಂತೆ ತಂಬ್ರಹಳ್ಳಿಯಲ್ಲಿ ಸಮ್ಮೇಳನ ಹಮ್ಮಿಕೊಂಡು ಯಶಸ್ವಿಗೊಳಿಸಲು ನಿರ್ಧರಿಸಲಾಗಿದೆ. ಜ.31ರಂದು ನಡೆಯುವ ಸಭೆಯಲ್ಲಿ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಮತ್ತು ವಿವಿಧ ಸಮಿತಿಗಳಿಗೆ ಸದಸ್ಯರ ನೇಮಕ ಕುರಿತಂತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಸಿ.ಶಿವಾನಂದ ಮಾತನಾಡಿ, ಸಮ್ಮೇಳನ ಯಶಸ್ವಿಗೆ ಗ್ರಾಮಸ್ಥರ ಸಹಕಾರ ಮುಖ್ಯ. ಗ್ರಾಮದಲ್ಲಿ ಇದುವರೆಗೂ ಹಮ್ಮಿಕೊಂಡಿರುವ ಎಲ್ಲ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ದೊರಕಿದೆಎಂದರು. ಕಸಾಪ ಹೋಬಳಿ ಘಟಕದ ಅಧ್ಯಕ್ಷರಾದ ಉಗ್ಗಣ್ಣನವರ ಮಧುಸೂಧನ, ಲಿಂಗದಹಳ್ಳಿ ಬಸವರಾಜಪ್ಪ, ಗ್ರಾಮ ಪಂಚಾಯ್ತಿ ಸದಸ್ಯರಾದ ಮೈಲಾರ ಶಿವಕುಮಾರಗೌಡ, ಎಂ.ಎನ್‌. ಮಂಜುನಾಥ, ಮುಖಂಡರಾದ ಬಣಕಾರ ತೋಟಪ್ಪ, ಸುಣಗಾರ ರಾಮು, ಮಂಜುನಾಥ ಪಾಟೀಲ್‌, ಗ್ರಂಥಾಲಯ ಮೇಲ್ವಿಚಾರಕ ಟಿ.ಪಾಂಡುರಂಗ, ಬಾರಿಕರ ನಿಂಗಪ್ಪ, ಬರಹಗಾರ ಹಿ.ಮ.ಕೊಟ್ರಯ್ಯ, ಮುಖ್ಯಗುರು ರೇಣುಕಮ್ಮ, ಸೊಬಟಿ ಹರೀಶ್‌, ಎಂ.ಯಂಕಾರಡ್ಡಿ, ಹ್ಯಾಟಿ ಲೋಕಪ್ಪ, ಎಲ್‌.ರೆಡ್ಡಿನಾಯ್ಕ, ಮಡಿವಾಳ ಕೊಟ್ರೇಶ, ಗಂಗಾಧರ ಗೌಡ, ಎಸ್‌.ಕೊಟ್ರೇಶ್‌, ಅಜ್ಜೆಶ್‌, ಶ್ರೀನಿವಾಸ, ಯಲ್ಲಪ್ಪಗೌಡ ಪೂಜಾರ್‌,
ಆನೇಕಲ್‌ ಕೊಟ್ರೇಶ ಇತರರಿದ್ದರು.

ಓದಿ : ಗ್ರಾಮೀಣ ಭಾಗದಲ್ಲಿ ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಿ

Advertisement

Udayavani is now on Telegram. Click here to join our channel and stay updated with the latest news.

Next