Advertisement

ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿ

04:58 PM Jan 29, 2021 | Team Udayavani |

ಬಳ್ಳಾರಿ: ಕೃಷಿ ಸಚಿವ ಬಿ.ಸಿ. ಪಾಟೀಲ್‌ ಅವರನ್ನು ಭೇಟಿ ಮಾಡಿರುವ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ
ಅವರು ರೈತರ ವಿವಿಧ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು. ಸರ್ಕಾರ ಸೂಚಿಸಿದ್ದ ಬೆಂಬಲ ಬೆಲೆಯಂತೆ ಒಬ್ಬ ರೈತರಿಂದ
ಕೇವಲ 15 ಕ್ವಿಂಟಲ್‌ ಜೋಳವನ್ನು ಖರೀದಿಸಲಾಗುತ್ತದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬೆಳೆದ ರೈತರಿಗೆ ಅನ್ಯಾಯವಾಗಲಿದೆ. ಪಹಣಿ ಪತ್ರದಲ್ಲಿ ಜೋಳ ಎಂದು ನಮೂದಿಸಿರಬೇಕು ಎಂದು ಕೃಷಿ ಇಲಾಖೆ ತಿಳಿಸುತ್ತದೆ. ಆದರೆ, ಕಂದಾಯ ಇಲಾಖೆಯವರು ಸಮೀಕ್ಷೆ ಮಾಡಿ ಪಹಣಿಯಲ್ಲಿ ನೋಂದಾಯಿಸುವಲ್ಲಿ ವಿಳಂಬ ಮಾಡಿದಾಗ ರೈತರ ಪರಿಸ್ಥಿತಿ ಹೇಗೆ? ಎಂದು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನ ಸೆಳೆದರು.

Advertisement

ಪ್ರಸಕ್ತ ವರ್ಷ ಭತ್ತ, ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳ ಬೆಳೆಗಳು ಅತಿವೃಷ್ಟಿಯಿಂದಾಗಿ ನಷ್ಟಕ್ಕೊಳಗಾಗಿದೆ. ಇದರಿಂದ
ರೈತರು ಸಂಕಷ್ಟ  ‌  ಎದುರಿಸುತ್ತಿದ್ದಾರೆ. ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ಸಚಿವ ಬಿ.ಸಿ.ಪಾಟೀಲ್‌, ರೈತರಿಗೆ ಹೆಚ್ಚುವರಿಯಾಗಿ ಜೋಳವನ್ನು ಖರೀದಿಸಲು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಂದಿಗೆ ಮಾತನಾಡುತ್ತೇನೆ. ಅತಿವೃಷ್ಟಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸುವ ವಿಷಯ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಕೃಷಿ ಜಂಟಿ ನಿರ್ದೇಶಕರನ್ನು ಕರೆಸಿ ಯಾವುದೇ ಕಾರಣಕ್ಕೂ ಜೋಳ ಖರೀದಿಯಲ್ಲಿ ಪಹಣಿಗಳಜಿಲ್ಲಿ ಜೋಳ ಎಂಬ ವಿಷಯದ ಕುರಿತು ರೈತರನ್ನು ಕೇಳಬಾರದು. ಜಮೀನು ಸಮೀಕ್ಷೆ ನಡೆಸಿ ಖರೀದಿಸುವಂತೆ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಈ ವೇಳೆ ಸಂಗನಕಲ್ಲು ವಿಶ್ವನಾಥ್‌ ಇದ್ದರು.

ಓದಿ : ಹುಡಾದಿಂದ ಅನಧಿಕೃತ ಲೇಔಟ್‌ ತೆರವು

Advertisement

 

Advertisement

Udayavani is now on Telegram. Click here to join our channel and stay updated with the latest news.

Next