Advertisement

ಜನಮನಸೂರೆಗೊಂಡ ಮಹಿಳಾ ಸಾಂಸ್ಕೃತಿಕ ಉತ್ಸವ

06:22 PM Jan 28, 2021 | Team Udayavani |

ಹೊಸಪೇಟೆ: ಸಂಸ್ಕತಿ-ಸಂಸ್ಕಾರವನ್ನು ಮಹಿಳೆ ಕುಟುಂಬದಲ್ಲಿ ಆಚರಣೆಗೆ ತರುವುದರ ಮೂಲಕ ಸದೃಢ ಸಮಾಜವನ್ನು ನಿರ್ಮಾಣ ಮಾಡುವ
ಆಧಾರ ಸ್ತಂಬವಾಗಿದ್ದಾಳೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ನಂದಿನಿ
ಅವರು ಹೇಳಿದರು.

Advertisement

ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ನಿಮಿತ್ತ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವತಿಯಿಂದ ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಮಹಿಳಾ
ಸಾಂಸ್ಕತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು
ಮಾತನಾಡಿದರು.

ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ತನ್ನದೆಯಾದ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿ ದ್ದಾಳೆ. ಮಹಿಳೆಯರು ತಮ್ಮ ದೌರ್ಬಲ್ಯಗಳನ್ನು
ಬದಿಗಿಟ್ಟು ಸಕಾರಾತ್ಮಕವಾಗಿ ಮುನ್ನಡೆಯಬೇಕು. ಹಿರಿಯರನ್ನು ಗೌರವದಿಂದ ಕಾಣುವ ಮೂಲಕ ಕಿರಿಯರನ್ನು ಬೆಳೆಸುವುದರೊಂದಿಗೆ ಹಳೆ ಬೇರು ಹೊಸ ಚಿಗುರುಗಳನ್ನು ಸಂರಕ್ಷಿಸಿ ಉತ್ತಮವಾದ ಸಮಾಜವನ್ನು ನಿರ್ಮಿಸುವ ಅವಶ್ಯಕತೆ ಇದೆ
ಎಂದರು.

ಸಂಸ್ಕತಿ ಹಲವಾರು ಸಂಸ್ಕಾರಗಳನ್ನು ಒಳಗೊಂಡಿರುತ್ತದೆ; ಆದ್ದರಿಂದ ನಮ್ಮ ಸಂಸ್ಕತಿಯನ್ನು ಉಳಿಸಿ ಬೆಳೆಸುವ ಅವಶ್ಯಕತೆಯೂ ಇದೆ.ಸಂಸ್ಕತಿ ಈ ನಾಡಿನ ಹಲವಾರು ಕಲೆಗಳಲ್ಲಿ ಅಡಗಿರುವುದರಿಂದ ಕಲಾವಿದರನ್ನು ಗೌರವಿಸುವ ಮೂಲಕ ಅವರ ಕಲೆ
ಅನಾವರಣಗೊಳ್ಳವುದಕ್ಕೆ ಇಂತಹ ಕಾರ್ಯಕ್ರಮಗಳ ಮತ್ತೆ ಮತ್ತೆ ಜರುಗುತ್ತಿರಬೇಕು ಎಂದು ಹೇಳಿದರು.
ಪುರುಷರು ಮಹಿಳೆಯರನ್ನು ಗೌರವಿಸಬೇಕು ಮತ್ತು ಮಹಿಳೆಯರು ಪುರುಷರನ್ನು ಗೌರವದಿಂದ ಕಾಣಬೇಕು; ಅಂದಾಗ ಮಾತ್ರವೇ ಸಮಾನತೆಯ ಸಮಾಜವನ್ನು ಕಾಣುವುದಕ್ಕೆ ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಕಲಾವಿದೆ ಕೂಡ್ಲಿಗಿ ಪದ್ಮ ಅವರು ಮಹಿಳಾ ಸಂಸ್ಕತಿಯನ್ನು ರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯಂದು ಹಮ್ಮಿಕೊಂಡು ಜಿಲ್ಲೆಯ ಎಲ್ಲಾ ಮಹಿಳಾ ಕಲಾವಿದರಿಗೆ ತಮ್ಮ ಕಲೆಯನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿದಕ್ಕೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯನ್ನು ಅಭಿನಂದಿಸಿದರು.

Advertisement

ದಿನವಿಡಿ ನಡೆದ ಉತ್ಸವದಲ್ಲಿ ಜಾನಪದ ನೃತ್ಯ, ಯಗಳ ನೃತ್ಯ, ಸಮೂಹ ನೃತ್ಯ, ಶಾಸ್ತ್ರೀಯ ನೃತ್ಯ, ಜಾನಪದ ಹಾಡು,ಕೋಲಾಟ,ಡೊಳ್ಳು ಕುಣಿತ,ಶಾಸ್ತ್ರೀಯ ಸಂಗೀತ, ರಂಗ ಗೀತೆಗಳು, ನಾಟಕ ಮುಂತಾದ ಕಾರ್ಯಕ್ರಮಗಳು ನಾಡಿನ ಸಂಸ್ಕತಿ ಬಿಂಬಿಸಿ ಜನರ ಮನಸೂರೆಗೊಳಿಸಿದವು. ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೈಶ ರಂಗಣ್ಣವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ದೊಡ್ಡಬಸವ ಗವಾಯಿಗಳು, ಕಲಾವಿದ ಮಂಜುನಾಥ ಗೊವಿಂದವಾಡ,ಹೊಸಪೇಟೆ ತಾಲ್ಲೂಕಿನ ಜನಪದ
ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರೀ ,ಭರತನಾಟ್ಯ ಕಲಾವಿದೆ ಅಂಜಲಿ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಕೆ.ಆರ್‌.ನಂದಿನಿ ಅವರು 71 ವರ್‌ಷದ ಹಿರಿಯ ಮಹಿಳೆ ಹಾಗೂ 6 ವರ್‌ಷದ ಬಾಲಕಿಯಿಂದ ಕಾರ್ಯಕ್ರಮನ್ನು ಉದ್ಘಾಟನೆ ಮಾಡಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪುಷ್ಪಾ ರಮೇಶ ಹಾಗೂ ನಾಗರತ್ನಾ ನಿರೂಪಿಸಿ ವಂದಿಸಿದರು.

 

ಓದಿ : ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ

 

Advertisement

Udayavani is now on Telegram. Click here to join our channel and stay updated with the latest news.

Next