ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ತನಿಖೆಗೆ ಯಾವುದೇ ಅಡ್ಡಿ ಆತಂಕಗಳು ಎದುರಾಗದಂತೆ ಸುಸೂತ್ರವಾಗಿ ನಡೆಯಲು ಸಿಎಂ ಯಡಿಯೂರಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕೂಡಲೇ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಜೆಲಿಟಿನ್ ಸ್ಫೋಟಕ ವಸ್ತುವುಳ್ಳ ವಾಹನ ಸ್ಫೋಟಗೊಂಡು ಐವರು ಮೃತಪಟ್ಟಿದ್ದಾರೆ. ನೂರಾರು ಕಟ್ಟಡಗಳು ಶಿಥಿಲಗೊಂಡಿವೆ. ಘಟನೆಯಲ್ಲಿ ಮೃತರಿಗೆ ತಲಾ ಐದು ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಆದರೆ ಅದು ಸಾಲದು. ಘಟನೆ ನೈತಿಕ ಹೊಣೆ ಹೊರುವವರು ಯಾರು? ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪರಿಗೆ ಮನುಷ್ಯತ್ವ ಇದ್ದರೆ ಕೂಡಲೇ ಘಟನೆಯ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
Advertisement
ಓದಿ :·ಕೇಂದ್ರದ ಧೋರಣೆ ಖಂಡಿಸಿ ಬೃಹತ್ ರ್ಯಾಲಿ
ಒತ್ತಾಯಿಸಿದರು. ತಪ್ಪು ಒಪ್ಪಿಕೊಂಡಂತೆ: ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ದಾಳಿ ಮಾಡುವ ಕುರಿತು ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಗೆ ಮಾಹಿತಿ ನೀಡಿದ್ದು ಯಾರು? ಎಂದು ಪ್ರಶ್ನಿಸಿದ್ದ ಉಗ್ರಪ್ಪ, ದೇಶದ ರಕ್ಷಣೆಗೆ ಸಂಬಂಧಿಸಿದ ಗೌಪ್ಯ ಮಾಹಿತಿಯನ್ನು ಪ್ರಧಾನಿ, ಗೃಹಮಂತ್ರಿ ಅಥವಾ ರಕ್ಷಣಾ ಸಚಿವರು ನೀಡಬೇಕು. ಆದರೆ ಬಾಲಾಕೋಟ್ ದಾಳಿ ನಡೆಯುವ ಬಗ್ಗೆ ಮಾಹಿತಿ ಹೇಗೆ ಸೋರಿಕೆಯಾಯಿತು. ಪ್ರಧಾನಿ ನರೇಂದ್ರ ಮೋದಿಯವರು ಈ ಕುರಿತು ಸ್ಪಷ್ಟನೆ ನೀಡಬೇಕು.ಇಲ್ಲದಿದ್ದರೆ ಈ ತಪ್ಪನ್ನು ಒಪ್ಪಿಕೊಂಡಂತೆ. ದೇಶ ರಕ್ಷಣೆಯಲ್ಲಿ ಕೇಂದ್ರ ಸರಕಾರ ವಿಫಲವಾಗಿದೆಎಂದರು.
Related Articles
Advertisement
ಓದಿ :··ಇಂದು 89ನೇ ವಾರ್ಷಿಕ ಸಂಸ್ಥಾಪನ ದಿನಾಚರಣೆ