Advertisement

ಕೃಷಿ ಕಾಯ್ದೆ ಹಿಂಪಡೆಯದಿದ್ದ ರೆ ಸಂಸತ್‌ ಬಜೆಟ್‌ ಕಲಾಪಕ್ಕೆ ಅಡ್ಡಿ

05:40 PM Jan 28, 2021 | Team Udayavani |

ಬಳ್ಳಾರಿ: ರೈತ-ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯದಿದ್ದಲ್ಲಿ ಜ. 29ರಿಂದ ಆರಂಭವಾಗಲಿರುವ ಸಂಸತ್‌ ಬಜೆಟ್‌ ಅಧಿವೇಶನ ನಡೆಯಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ|ಸೈಯದ್‌ ನಾಸೀರ್‌ ಹುಸೇನ್‌ ಎಚ್ಚರಿಸಿದರು.
ನಗರದ ಬುಧವಾರ ರೈತ ಮುಖಂಡರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕೃಷಿ-ಕಾರ್ಮಿಕ ತಿದ್ದುಪಡಿ ಕಾಯ್ದೆಗಳನ್ನು
ಸಂಸತ್‌ನಲ್ಲಿ ಪಾಸ್‌ ಮಾಡುವಾಗಲೂ ಕಾಂಗ್ರೆಸ್‌, ಟಿಆರ್‌ಎಸ್‌, ವೈಎಸ್‌ಆರ್‌, ಅಕಾಲಿದಳ, ಬಿಜು ಜನತಾದಳ ಸೇರಿ ಎನ್‌ಡಿಎ ಮೈತ್ರಿಕೂಟದ
ಪಕ್ಷಗಳ ಸಂಸದರು ವಿರೋಧ ವ್ಯಕ್ತಪಡಿಸಿದ್ದರು.

Advertisement

ಈ ಕಾಯ್ದೆಗಳನ್ನು ಮತದಾನದ ಮೂಲಕ ಪಾಸ್‌ ಮಾಡುವಂತೆ ಒತ್ತಾಯಿಸಿದರೂ ಕೇಳದ ಆಡಳಿತ ಪಕ್ಷದವರು, ತಮ್ಮನ್ನು ಸೇರಿ ಎಂಟು ಜನ ಸಂಸದರನ್ನು ಸಂಸತ್‌ನಿಂದ ಅಮಾನತುಗೊಳಿಸಿ ಅಸಂವಿಧಾನಿಕವಾಗಿ ಬಿಲ್‌ಗ‌ಳನ್ನು ಪಾಸ್‌ ಮಾಡಿದರು ಎಂದು ದೂರಿದರು.
ನಾವೆಲ್ಲರೂ ಸಂಸತ್‌ ಎದುರು ಪ್ರತಿಭಟನೆ ನಡೆಸಿದ್ದು, ಇದೀಗ ರೈತ ಸಂಘಟನೆಗಳು ನಿರಂತರವಾಗಿ ಹೋರಾಟ ನಡೆಸುತ್ತಿವೆ. ಆದರೂ,
ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುತ್ತಿಲ್ಲ ಎಂದರೆ ಅದು ಬಂಡವಾಳಶಾಹಿಗಳ ಪರವಾಗಿದೆ. ಜ. 29ರಿಂದ ಸಂಸತ್‌ನಲ್ಲಿ ಬಜೆಟ್‌ ಅ ಧಿವೇಶನ ಆರಂಭವಾಗಲಿದೆ. ಈ ಅ ಧಿವೇಶನದಲ್ಲಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯದಿದ್ದಲ್ಲಿ ಬಜೆಟ್‌ ಮಂಡನೆಗೆ ಮಾತ್ರ ಅವಕಾಶ ನೀಡಿ ಅ ಧಿವೇಶನ ನಡೆಯಲು ಅವಕಾಶ ಕೊಡುವುದಿಲ್ಲ ಎಂದರು. ದೆಹಲಿಯಲ್ಲಿ ರೈತರ ಟ್ರಾಕ್ಟರ್‌ ಜಾಥಾ ವೇಳೆ ನಡೆದ ಹಿಂಸಾಚಾರವನ್ನು
ನಾನು ಸೇರಿ ನಮ್ಮ ಕಾಂಗ್ರೆಸ್‌ ಪಕ್ಷ ಖಂಡಿಸುತ್ತದೆ ಎಂದರು.

ಬಳ್ಳಾರಿ ಜಿಲ್ಲೆಯ ವಿಭಜನೆಗೆ ಸಂಬಂಧಿಸಿದಂತೆ 30 ಸಾವಿರಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ. ಜಿಲ್ಲೆ ವಿಭಜನೆ ಬಗ್ಗೆ ಕೇವಲ ವಿರೋಧಿ ಸಿದರೆ ಸಾಲದು, ನಮ್ಮ ಜೊತೆ ಹೋರಾಟಕ್ಕೆ ಬನ್ನಿ ಎಂದು ಬಿಜೆಪಿ ಶಾಸಕರಿಗೆ ಸವಾಲು ಹಾಕಿದರು.
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಸಿರೆಗೇರಿ ಪನ್ನರಾಜ್‌, ಸಮಿತಿ ಮುಖಂಡ ಟಿ.ಜಿ. ವಿಠಲ್‌, ರೈತ ಮುಖಂಡ ಆರ್‌. ಮಾಧವರೆಡ್ಡಿ
ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಸದಸ್ಯರಾದ ಮುಂಡ್ರಿಗಿ ನಾಗರಾಜ, ಎ.ಮಾನಯ್ಯ, ಕಾಂಗ್ರೆಸ್‌ ಯುವಮುಖಂಡ ವೆಂಕಟೇಶ್‌ ಹೆಗಡೆ, ಸಮಿತಿಯ ಕೆ.ಎರ್ರಿಸ್ವಾಮಿ ಸೇರಿ ಹಲವರು ಇದ್ದರು.

ಓದಿ : ಬೇಂದ್ರೆ ಕನ್ನಡ ಸಾಹಿತ್ಯದ ಮೇರು ಶಿಖರ

Advertisement

Udayavani is now on Telegram. Click here to join our channel and stay updated with the latest news.

Next