Advertisement

ಸಹಾಯಹಸ್ತ ಅಭಿಯಾನ ಯಶಸ್ವಿಗೊಳಿಸಿ

06:15 PM Jul 21, 2021 | Team Udayavani |

ಹೊಸಪೇಟೆ: ಕೆಪಿಸಿಸಿ ರಾಜ್ಯಾದ್ಯಾಂತ ಹಮ್ಮಿಕೊಂಡಿರುವ ಕೋವಿಡ್‌-19 ಸಹಾಯಹಸ್ತ ಅಭಿಯಾನವನ್ನು ಕಾರ್ಯಕರ್ತರು ಯಶ್ವಸಿಗೊಳಿಸುವ ಮೂಲಕ ಕೋವಿಡ್‌ ಸಂಕಷ್ಟಕ್ಕೆ ಒಳಗಾದ ಕ್ಷೇತ್ರದ ಜನರಿಗೆ ನೆರವಾಗಬೇಕು ಎಂದು ಮಾಜಿ ಸಚಿವ ಸಂತೋಷ್‌ ಲಾಡ್‌ ಹೇಳಿದರು.

Advertisement

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕೋವಿಡ್‌-19 ಸಹಾಯ ಹಸ್ತ ಅಭಿಯಾನ ಅನುಷ್ಠಾನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಾಮಾರಿ ಕೋವಿಡ್‌ನಿಂದ ಅನೇಕರು ಮೃತಪಟ್ಟರೆ, ಕೆಲವರು ಸೋಂಕಿಗೆ ಒಳಗಾಗಿ ಪರದಾಡುತ್ತಿದ್ದಾರೆ.

ಅವರಿಗೆ ನೆರವು ನೀಡಲು ಕೆಪಿಸಿಸಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಮಾಮ್‌ ನಿಯಾಜಿ ಅವರ ನೇತತ್ವದಲ್ಲಿ ಕ್ಷೇತ್ರದಲ್ಲಿ ಕೊವೀಡ್‌ನಿಂದ ಮೃತಪಟ್ಟ ಹಾಗೂ ಸೋಂಕಿಗೆ ಒಳಗಾದ ಕುಟುಂಬದ ಸದಸ್ಯರನ್ನು ಭೇಟಿ ಅವರ ಸಮಸ್ಯೆಗಳನ್ನು ಆಲಿಸಿ, ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದರು.

ಬ್ಲಾಕ್‌ ಅಧ್ಯಕ್ಷರಾದ ಎಚ್‌.ಎನ್‌. ಮಹಮ್ಮದ್‌ ಇಮಾಮ್‌ ನಿಯಾಜಿ ವಿ.ಸೋಮಪ್ಪ, ಮಾಜಿ ಶಾಸಕ ಎಂ.ಡಿ. ಲಕ್ಷೀನಾರಾಯಣ, ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಕೆಪಿಸಿಸಿ ಪದಾಧಿಕಾರಿಗಳಾದ ಗುಜ್ಜಲ್‌ ರಾಘವೇಂದ್ರ, ಬಿ.ಎಂ. ಪಾಟೀಲ್‌, ಕೆ.ಶಿವಮೂರ್ತಿ, ಮುಖಂಡರಾದ ವೆಂಕೋಬಣ್ಣ, ಚಿದಾನಂದ, ರಾಮನಗೌಡ, ತೇಜನಾಯ್ಕ, ಬಸವರಾಜ ಮೇಟಿ, ಕೆ.ಗೌಸ್‌, ಎಸ್‌.ಬಿ. ಮಂಜುನಾಥ, ಜಿ. ರಘು, ಸತ್ಯನಾರಾಯಣ, ವಿಜಯಕುಮಾರ್‌, ಮುನ್ನಿ ಖಾಸಿಂ, ಇಂದುಮತಿ, ರಜೀಯಾ, ಭರತ್‌ ಕುಮಾರ್‌, ನವಾಜ್‌, ಬುಡೇನ್‌, ಗೀತಾ ತಿಮ್ಮಪ್ಪ, ನನ್ಮೆàಬೀ, ಗಂಗಮ್ಮ, ಗೀತಾ, ಅಣಾಮಲೈ ಹಾಗೂ ತಿಮ್ಮಪ್ಪ ಯಾದವ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next