Advertisement

ಕೇಂದ್ರ-ರಾಜ್ಯ ಸರ್ಕಾರಗಳಿಂದ ರೈತರ ಶೋಷಣೆ: ಚನ್ನಬಸಯ್ಯ

05:35 PM Jan 27, 2021 | Team Udayavani |

ಸಂಡೂರು: ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಇರುವುದುಜನತೆಯನ್ನು ರಕ್ಷಿಸಲೇ ಹೊರತುಜನರನ್ನು ಶೋಷಿಸಲು ಅಲ್ಲ, ಅದರೆಕೇಂದ್ರ ಮತ್ತು ರಾಜ್ಯ ಸರ್ಕಾರರೈತರನ್ನು ಬೀದಿಗೆ ಬೀಳುವಂತೆಮಾಡಿದ್ದಾರೆ.

Advertisement

ಅದರ ಪರಿಣಾಮವನ್ನುಅನುಭವಿಸುತ್ತಾರೆ, ಎಲ್ಲಿಯವರೆಗೆಕಾಯಿದೆ ಹಿಂಪಡೆಯುವುದಿಲ್ಲವೋಅಲ್ಲಿಯವರೆಗೆ ಹೋರಾಟ ನಿಲ್ಲದುಎಂದು ತಾಲೂಕು ರೈತ ಸಂಘದಮುಖಂಡ ಜೆ.ಎಂ. ಚನ್ನಬಸಯ್ಯಕರೆನೀಡಿದರು.

ಅವರು ಮಂಗಳವಾರ ತಾಲೂಕಿನತೋರಣಗಲ್ಲಿನಿಂದ ಸಂಡೂರಿನವಿಜಯ ವೃತ್ತದವರೆಗೆ ರೈತ ವಿರೋಧಿ ನೀತಿಯನ್ನು ಖಂಡಿಸಿ ಬೃಹತ್‌ ಟ್ಯಾಕ್ಟರ್‌ಮೆರವಣಿಗೆಯಲ್ಲಿ ಮಾತನಾಡಿ,ಇಂದಿನ ಸರ್ಕಾರಗಳು ರೈತ, ಕಾರ್ಮಿಕವಿರೋ ಧಿ ನೀತಿಗಳನ್ನು ಜಾರಿಗೆ ತಂದುಬಂಡವಾಳ ಶಾಹಿಗಳಿಗೆ ದೇಶವನ್ನುಮಾರಾಟ ಮಾಡಲು ಹೊರಟಿದ್ದಾರೆ.ಆದ್ದರಿಂದ ಇಂತಹ ಐತಿಹಾಸಿಕಗಣರಾಜ್ಯೋತ್ಸವದ ದಿನದಂದೇರೈತರುಕೆಂಪುಕೋಟೆಯ ಮೇಲೆ ತಮ್ಮಧ್ವಜವನ್ನು ಹಾರಿಸಿದ್ದಾರೆ.ಮುಂದೆಹೀಗೆ ಮುಂದುವರೆದರೆ ಸರ್ಕಾರಮೂಲೆಗುಂಪಾಗುತ್ತದೆ, ಶಾಸಕಾಂಗಇರುವುದು ದೇಶದ ಪ್ರಜೆಗಳ ರಕ್ಷಣೆಗೆ

ಹಿತವಾದ ಕಾಯಿದೆ ತರುವುದು,ಅದರೆ ರೈತರನ್ನೇ ಭಿಕ್ಷುಕರನ್ನಾಗಿಸುವಕಾನೂನು ತರುವುದಲ್ಲ, ಅದ್ದರಿಂದತಕ್ಷಣ ಕಾಯಿದೆ ಹಿಂಪಡೆಯಲಿ ಎಂದುಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷಬಿ.ಎಂ. ಉಜ್ಜಿನಯ್ಯ ಮಾತನಾಡಿ,ರೈತರು ಬೀದಿಗೆ ಬೀಳುತ್ತಿದ್ದಾರೆ ಎಂದರೆಜಾರಿಗೆ ತಂದಿರುವ ವಿದ್ಯುತ್‌ ಕಾಯಿದೆ,ಎ.ಪಿ.ಎಂ.ಸಿ. ಕಾಯಿದೆ, ಭೂಸುಧಾರಣಾ ಕಾಯಿದೆ, ಇವುಗಳಿಂದರೈತರು ಮೂಲೆಗುಂಪಾಗುತ್ತಿದ್ದಾರೆ.ತಮ್ಮ ಕೃಷಿ ಭೂಮಿಯನ್ನು
ಬಿಟ್ಟು ಬಂಡವಾಳಶಾಹಿಗಳಲ್ಲಿಜೀತದಾಳುಗಳಾಗುತ್ತಿದ್ದಾರೆ, ಇಂತಹಜೀತಪದ್ಧತಿ ತರುವ ಕಾಯಿದೆಗಳನ್ನುತಕ್ಷಣ ಕೈಬಿಡಬೇಕು ಎಂದು
ಒತ್ತಾಯಿಸಿದರು.

Advertisement

ಜಿಲ್ಲಾ ರೈತ ಮುಖಂಡ ಎಂ.ಎಲ್‌.ಕೆ. ನಾಯ್ಡು ಮಾತನಾಡಿ, ರೈತಮತ್ತು ದೇಶದ ಜನತೆ ನಿತ್ಯದಜೀವನಾವಶ್ಯಕ ವಸ್ತುಗಳ ಬೆಲೆ
ಗಗನಕ್ಕೆ ಏರಿದೆ, ಸಿಲೆಂಡರ್‌,ಪೆಟ್ರೋಲ್‌, ಆಹಾರಧಾನ್ಯಗಳು,ವಿದ್ಯುತ್‌, ವಿಮೆ, ಹೀಗೆ ಹತ್ತು ಹಲವುಅಂಶಗಳು ಕೈಗೆಟುಕದಾಗಿದೆ ಕಾರಣ
ಬಂಡವಾಳ ಶಾಹಿಗೆ ರತ್ನಗಂಬಳಿ ಹಾಸಿರೈತರನ್ನು ಜೀತದಾಳುಗಳನ್ನಾಗಿಸುವಕಾನೂನು ಆದ್ದರಿಂದ ತಕ್ಷಣ ಕೇಂದ್ರರೈತ ವಿರೋಧಿ  ನೀತಿ ಕೈಬಿಟ್ಟುರೈತರನ್ನು ರಕ್ಷಿಸಿ ಇಲ್ಲವಾದಲ್ಲಿಉಗ್ರ ಹೋರಾಟಮಾಡುವುದಾಗಿಎಚ್ಚರಿಸಿದರು.

ಪ್ರತಿಭಟನೆಯಲ್ಲಿ ತಾಲೂಕಿನ ಎಲ್ಲರೈತ ಸಂಘಟನೆಗಳು, ಕನ್ನಡ ಪರಸಂಘಟನೆಗಳು ಉಪಸ್ಥಿತರಿದ್ದು ಬೃಹತ್‌ಪ್ರತಿಭಟನೆ ನಡೆಸಿದರು.

ಓದಿ : ದೆಹಲಿ ರೈತರ ಹೋರಾಟಕ್ಕೆ ಬೆಂಬಲ

Advertisement

Udayavani is now on Telegram. Click here to join our channel and stay updated with the latest news.

Next