ಹೊಸಪೇಟೆ: ದೆಹಲಿ ರೈತರ ಹೋರಾಟ ಬೆಂಬಲಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ರಾಜ್ಯ ರೈತ ಸಂ (ಹುಚ್ಚನಳ್ಳಿ ಮಂಜುನಾಥ ಬಣ) ಹಾಗೂ ಸಿಐಟಿಯು ನೇತೃತ್ವದಲ್ಲಿ ನಗರದಲ್ಲಿ ಬೈಕ್, ಆಟೋ, ಎತ್ತಿನ ಗಾಡಿ ರ್ಯಾಲಿ ನಡೆಯಿತು.
ಇಲ್ಲಿನ ಸಣ್ಣಿಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ರ್ಯಾಲಿಯಲ್ಲಿ ನೂರಾರು ರೈತರು, ನಗರದ ವಿವಿಧ ಬೀದಿಗಳಲ್ಲಿ ಸಂಚಾರ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ನಗರದ ಅಂಬೇಡ್ಕರ್ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮುಖಂಡರಾದ ದೇವರಮನೆ ವೆಂಕಟೇಶ್, ಜಾಹಿರುದ್ಧಿನ್, ಗಂಟೆ ಸೋಮಶೇಖರ್, ಷಣ್ಮುಖ, ಪ್ರಕಾಶ, ಜಡಿಯಪ್ಪ, ಹನುಮಂತಪ್ಪ ಹಾಗೂ
ಸಿಐಟಿಯುನ ಮುಖಂಡರಾದ ಎಂ. ಜಂಬಯ್ಯನಾಯಕ. ಆರ್.ಭಾಸ್ಕರ್ ರೆಡ್ಡಿ, ತಾಯಪ್ಪ ನಾಯಕ, ನಾಗರತ್ನಮ್ಮ, ಗೋಪಾಲ. ಕಲ್ಯಾಣಯ್ಯ, ಕೆ.ರಮೇಶ್, ಎಂ.ಕರುಣಾನಿ ಹಾಗೂ ಬಿ.ಮಹೇಶ್ ಇನ್ನಿತರರಿದ್ದರು.
ಓದಿ : ಹುಣಸೋಡು ಸ್ಫೋಟ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಲಿ : ಸಿದ್ದರಾಮಯ್ಯ