Advertisement

ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ: ಶಾಸಕ ಗಣೇಶ್‌

05:21 PM Jan 27, 2021 | Team Udayavani |

ಕಂಪ್ಲಿ: ಇಂದು ಅಪಘಾತಗಳು ಅಧಿ ಕ·ಸಂಖ್ಯೆಯಲ್ಲಿ ಜರುಗುತ್ತಿದ್ದು, ರಕ್ತದ ಅವಶ್ಯಕತೆ·ಅಕವಾಗಿರುವುದರಿಂದ ಯುವಕರು·ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲುಮುಂದಾಗಬೇಕು ಎಂದು ಶಾಸಕ ಜೆ.ಎನ್‌.
ಗಣೇಶ್‌ ಹೇಳಿದರು.

Advertisement

ಅವರು ಪಟ್ಟಣದ ಸಕ್ಕರೆಕಾರ್ಖಾನೆ ಬಳಿಯ ಮುಕ್ತಿನಾಥೇಶ್ವರದೇವಸ್ಥಾನ ಕಲ್ಯಾಣ ಮಂಟಪದಲ್ಲಿಗಣರಾಜ್ಯೋತ್ಸವ ಅಂಗವಾಗಿ ಸ್ನೇಹ ಬಳಗನೇತೃತ್ವದಲ್ಲಿ ಬಳ್ಳಾರಿ ಸ್ವಾಮಿ ವಿವೇಕಾನಂದ ರಕ್ತಭಂಡಾರ, ಗಂಗಾವತಿ ಗೋಪಿ ರಕ್ತ ಭಂಡಾರ,ಕಂಪ್ಲಿ ಸರ್ಕಾರ ಆಸ್ಪತ್ರೆಯ ಸಹಯೋಗದಲ್ಲಿಹಮ್ಮಿಕೊಂಡ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆಚಾಲನೆ ನೀಡಿ ಮಾತನಾಡಿ, ಜೀವ ಉಳಿಸಲುರಕ್ತದ ಅವಶ್ಯಕತೆ ಇದೆ.ಆದ್ದರಿಂದ ಯುವಕರುರಕ್ತದಾನ ಮಾಡಬೇಕು. ರಕ್ತದಾನದಿಂದಯಾವುದೇ ಅಡ್ಡ ಪರಿಣಾಮಗಳಿಲ್ಲ,ಉತ್ತಮವಾಗಿ ಆರೋಗ್ಯವನ್ನು
ಕಾಪಾಡಿಕೊಳ್ಳಲು ನಿಯಮಿತವಾಗಿ ರಕ್ತದಾನಮಾಡುವಲ್ಲಿ ಯುವಜನತೆ ಜಾಗ್ರತೆ
ವಹಿಸಬೇಕೆಂದರು.

ದೇಶಕ್ಕೆ ಸಂವಿಧಾನಕೊಟ್ಟಂತಹ ದಿನ ಗಣರಾಜ್ಯೋತ್ಸವವಾಗಿದೆ.ಸಂಘ-ಸಂಸ್ಥೆಗಳು ಇನ್ನಿತರರು ಸಮಾಜಸೇವೆಗೆ ಮುಂದಾಗಬೇಕು ಎಂದರು. ಇದೇಸಂದರ್ಭದಲ್ಲಿ ಸಾಕಷ್ಟು ಯುವಕರು ಹಾಗೂವಿವಾಹಿತ ಮಹಿಳೆಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.ಈ ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ಕೆ.ಶ್ರೀನಿವಾಸರಾವ್‌, ಪುರಸಭೆ ಸದಸ್ಯರಾದಕೆ.ಎಸ್‌.ಚಾಂದ್‌ಭಾಷಾ, ಲೊಡ್ಡುಹೊನ್ನೂರವಲಿ, ವೀರಾಂಜಿನೀಯಲು,ಎಂ.ಉಸ್ಮಾನ್‌, ಗ್ರಾಪಂ ಸದಸ್ಯ ತಿಮ್ಮಪ್ಪ,ಮುಖಂಡರಾದ ಬಿ.ಲಕ್ಷ¾ಣ, ರಂಗಸ್ವಾಮಿ,ವೆಂಕಟೇಶ, ರವಿಶೇಖರ್‌, ಅಪ್ಪಿರೆಡ್ಡಿ,ರುದ್ರಯ್ಯಸ್ವಾಮಿ, ಕೊಟ್ರೇಶ್‌, ಶೇಖರ್‌ರೆಡ್ಡಿ,ವೆಂಕಟಸ್ವಾಮಿ, ಬಳ್ಳಾರಿ ಸ್ವಾಮಿ ವಿವೇಕಾನಂದರಕ್ತ ಭಂಡಾರದ ಮುಖ್ಯಸ್ಥ ಗೋಪಾಲರೆಡ್ಡಿ,ಗಂಗಾವತಿ ಗೋಪಿ ರಕ್ತ ಭಂಡಾರದ ವ್ಯವಸ್ಥಾಪಕ, ಸಿಬ್ಬಂದಿಗಳಾದ ಮೇಘರಾಜ,ಮಾರುತಿ, ಬಸವರಾಜ, ಅಮರೇಶ, ಪಂಪಣ್ಣ,ಹಬೀಬ್‌ ರೆಹಮಾನ್‌, ಜಾಫರ್‌, ಎಸ್‌.ಆರ್‌.ಖಾಜಾವಲಿ, ಪ್ರಸಾದ್‌, ಆಟೋ ರಾಘವೆಂದ್ರ,ಶ್ರೀನಿವಾಸ ಇದ್ದರು.

ಓದಿ :·ಶಿವಪುರದಲ್ಲಿ ಟ್ರ್ಯಾಕ್ಟರ್‌ ರ್ಯಾಲಿಗೆ ಪೊಲೀಸರು ತಡೆ

Advertisement

Udayavani is now on Telegram. Click here to join our channel and stay updated with the latest news.

Next