ಸಿರುಗುಪ್ಪ: ಭಾರತ ದೇಶಕ್ಕೆ ಸ್ವಾತಂತ್ರ್ಯ··ದೊರಕಿಸಿಕೊಡುವಲ್ಲಿ ಬ್ರಿಟಿಷರ·ವಿರುದ್ಧ ಸೈನ್ಯವನ್ನು ಕಟ್ಟಿ ಹೋರಾಟ·ಮಾಡಿದ ನೇತಾಜಿ ಸುಭಾಷ್
ಚಂದ್ರಬೋಸ್‌ರವರ ಕಾರ್ಯ·ಶ್ಲಾಘನೀಯವಾಗಿದೆ ಎಂದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಾರ್ಟಿ ತಾಲೂಕು ಅಧ್ಯಕ್ಷ ಎಂ.ಎಚ್. ವೀರೇಶಪ್ಪ ತಿಳಿಸಿದರು.
ಓದಿ : ಮಕ್ಕಳಿಗೆ ಭಯ ರಹಿತ ವಾತಾವರಣ ಸೃಷ್ಟಿಸಿ
ನಗರದ ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಪಾರ್ಟಿ ಕಚೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಜನ್ಮದಿನ ಆಚರಣೆಯಲ್ಲಿ ಮಾತನಾಡಿ, 1897ರ ಜನವರಿ 23ರಂದು ಓಡಿಸ್ಸಾದ ಕಟಕ್‌ನಲ್ಲಿ ಜನಿಸಿದ ಸುಭಾಷ್ ಚಂದ್ರಬೋಸ್‌ರವರ ಜನ್ಮದಿನಾಚರಣೆಯನ್ನು ಈ ವರ್ಷವಿಡೀ ವಿಶೇಷವಾಗಿ ಪರಾಕ್ರಮ ದಿನವನ್ನಾಗಿ ಕೇಂದ್ರ ಸರ್ಕಾರ ಆಚರಿಸಲು ನಿರ್ಧರಿಸಿರುವುದು ಸಂತಸದ ಸಂಗತಿಯಾಗಿದೆ.
ವೀರ ಸ್ವಾತಂತ್ರ್ಯ ಯೋಧರಾದ ಸುಭಾಷ್ ಚಂದ್ರಬೋಸ್‌ರವರ ಜೀವನ ಮತ್ತು ಅವರ ಜೀವನ ಸಾಧನೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿಸುವ ಅನೇಕ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಹಮ್ಮಿಕೊಳ್ಳಬೇಕು. ಇದರಿಂದ ದೇಶದಲ್ಲಿರುವ ಯುವ ಕರಿಗೆ ಇವರ ಕಾರ್ಯಗಳು ಸ್ಫೂರ್ತಿಯಾಗಲಿವೆ ಎಂದು ಹೇಳಿದರು.
ಮಲ್ಲಿಕಾರ್ಜುನ, ಮರಿಸ್ವಾಮಿ, ಗಣೇಶ, ಸಿದ್ದರಾಮ, ತಿಪ್ಪಣ್ಣ, ಮಾರುತಿ, ರುದ್ರ, ದರಗಪ್ಪ, ರಾಘವೇಂದ್ರ, ವೀರೇಶ, ಬಿ.ಬಸವರಾಜ, ದೇವರಾಜ,
ಪಿ.ವೀರೇಶ, ದ್ಯಾವಣ್ಣ ಇದ್ದರು.
ಓದಿ : 33 ಗ್ರಾಪಂ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕಟ