Advertisement

ಕಂಪ್ಲಿಯಾದ್ಯಂತ ಸರಳ ಗಣರಾಜ್ಯೋತ್ಸವ

05:09 PM Jan 27, 2021 | Team Udayavani |

ಕಂಪ್ಲಿ: 72ನೇ ಗಣರಾಜ್ಯೋತ್ಸವನ್ನು ಕಂಪ್ಲಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಸರಳ ಹಾಗೂ ಸಂಭ್ರಮದಿಂದ
ಆಚರಿಸಲಾಯಿತು.
ವಿವಿಧ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮುಖ್ಯಸ್ಥರು ಧ್ವಜಾರೋಹಣ ನೆರವೇರಿಸಿದರು. ವಿವಿಧ ಸರ್ಕಾರಿ ಕಚೇರಿ ಹಾಗೂ ಸಂಘಟನೆಗಳ ಕಚೇರಿಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮ ಸರಳವಾಗಿ ನಡೆದವು.

Advertisement

ಪುರಸಭೆ: ಪುರಸಭೆಯಲ್ಲಿ 72ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಶಾಂತಲಾ ವಿ. ವಿದ್ಯಾಧರ್‌ ಧ್ವಜಾರೋಹಣ ನೆರವೇರಿಸಿದರು.
ಪುರಸಭೆ ಉಪಾಧ್ಯಕ್ಷೆ ಕೆ.ನಿರ್ಮಲ ವಸಂತ, ಸದಸ್ಯರಾದ ಭಟ್ಟ ಪ್ರಸಾದ್‌, ಸಿ.ಆರ್‌. ಹನುಮಂತ, ಡಾ| ವಿ.ಎಲ್‌.ಬಾಬು, ಎನ್‌. ರಾಮಾಂಜಿನೇಯಲು, ಎಸ್‌.ಎಂ. ನಾಗರಾಜ, ಆಂಜಿನೇಯ್ಯ, ಉಸ್ಮಾನ್‌, ಮುಖಂಡರಾದ ವಿದ್ಯಾಧರ್‌, ಸತ್ಯಪ್ಪ, ಶ್ರೀನಿವಾಸ್‌, ಮುಖ್ಯಾಧಿಕಾರಿ ರಮೇಶ ಬಡಿಗೇರ್‌ ಇದ್ದರು.

ತಹಶೀಲ್ದಾರ್‌ ಕಚೇರಿ: ತಹಶೀಲ್ದಾರ್‌ ಕಚೇರಿಯಲ್ಲಿ ತಹಶೀಲ್ದಾರ್‌ ಗೌಸಿಯ ಬೇಗಂ ತ್ರಿವರ್ಣ ಧ್ವಜಾರೋಹಣನೆರವೇರಿಸಿ ಸಿಬ್ಬಂದಿಗಳಿಂದ ವಂದನೆ ಸ್ವೀಕರಿಸಿದರು. ಉಪತಹಶೀಲ್ದಾರ್‌ ಬಿ. ರವೀಂದ್ರಕುಮಾರ್‌, ಕಂದಾಯಾ ಧಿಕಾರಿ ಗಣೇಶ್‌, ಶಿರಸ್ತೇದಾರ ಎಸ್‌. ರೇಖಾ,
ಪಂಪಾಪತಿ ಇದ್ದರು.

ತಾಪಂ ಕಚೇರಿಯಲ್ಲಿ ಅಧ್ಯಕ್ಷೆ ಕೆ.ಉಮಾದೇವಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ತಾಪಂ ಇಒ ಬಿ. ಬಾಲಕೃಷ್ಣ ಇದ್ದರು. ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರ ಎ. ಶ್ರೀನಿವಾಸ್‌ ಧ್ವಜಾ
ರೋಹಣ ನೆರವೇರಿಸಿದರು.

ಪೊಲೀಸ್‌ ಠಾಣೆ: ಪೊಲೀಸ್‌ ಠಾಣೆಯಲ್ಲಿ ಸಿಪಿಐ ಸುರೇಶ್‌.ಎಚ್‌. ತಳವಾರ ಧ್ವಜಾರೋಹಣ ನೆರವೇರಿಸಿ ಸಿಬ್ಬಂದಿಯಿಂದ ಧ್ವಜವಂದನೆ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪಿಎಸ್‌ಐ ಟಿ.ಎಲ್‌. ಬಸಪ್ಪ ಲಮಾಣಿ, ಎಎಸ್‌ಐಗಳಾದ ಹಗರಪ್ಪ, ಮಾರೇಶ್‌, ಪರಶುರಾಮಪ್ಪ, ತ್ಯಾಗರಾಜ
ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು. ಎಪಿಎಂಸಿಯಲ್ಲಿ ನಿರ್ದೇಶಕರಾದ ಎಸ್‌.ಎಂ. ನಾಗರಾಜ ಧ್ವಜಾರೋಹಣ ನೆರವೇರಿಸಿದರು. ಪಟ್ಟಣದ ವೀರಶೈವ ಸಂಘದ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಕ್ಷರಾದ ಪಿ. ಮೂಕಯ್ಯಸ್ವಾಮಿ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕೆ.ವಿರೂಪಾಕ್ಷಪ್ಪ, ಎಸ್‌ .ಡಿ. ಬಸವರಾಜ, ಎಸ್‌.ಎಂ.ನಾಗರಾಜ, ಮುಖ್ಯಗುರುಗಳಾದ ಆರ್‌.ಬಸವರಾಜ್‌, ತಿಪ್ಪಣ್ಣ ಇದ್ದರು. ನೋಂದಣಿ ಕಚೇರಿ, ಜೆಸ್ಕಾಂ, ಕೃಷಿ ಇಲಾಖೆ, ಪೊಲೀಸ್‌ ಇಲಾಖೆಗಳಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.

Advertisement

ಓದಿ : ಸಂವಿಧಾನ ಪ್ರಾಯೋಗಿಕವಾಗಿ ಅಳವಡಿಸಿಕೊಂಡಾಗ ಯಶಸ್ಸು

Advertisement

Udayavani is now on Telegram. Click here to join our channel and stay updated with the latest news.

Next