Advertisement

ಲಾಕ್‌ಡೌನ್‌ ಸಡಿಲ; ಎಲ್ಲೆಲ್ಲೂವಾಹನ-ಜನ

09:40 PM Jun 15, 2021 | Team Udayavani |

ಬಳ್ಳಾರಿ: ಕಳೆದ ಒಂದೂವರೆ ತಿಂಗಳಿಂದ ವಿ ಧಿಸಲಾಗಿದ್ದ ಲಾಕ್‌ಡೌನ್‌ ತೆರವಾಗಿ ಸೋಮವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಅನ್‌ಲಾಕ್‌ 1 ಜಾರಿಯಾಗಿದ್ದು, ಬಳ್ಳಾರಿ ನಗರ ಸೇರಿ ಜಿಲ್ಲೆಯಾದ್ಯಂತ ಸೋಮವಾರ ಜನಜಂಗುಳಿ, ವಾಹನದಟ್ಟಣೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದ್ದು, ಜೀವಕಳೆ ಬಂದಂತಾಯಿತು.

Advertisement

ಕೋವಿಡ್‌ ಸೋಂಕು ನಿಯಂತ್ರಿಸಲು ವಿಧಿಸಲಾಗಿದ್ದ ಲಾಕ್‌ಡೌನ್‌ ನಿಮಿತ್ತ ಕಳೆದ ಒಂದೂವರೆ ತಿಂಗಳಿಂದ ಬಿಕೋ ಎನ್ನುತ್ತಿದ್ದ ನಗರದ ಪ್ರಮುಖ ರಸ್ತೆಗಳು, ಸೋಮವಾರದಿಂದ ಮಧ್ಯಾಹ್ನದವರೆಗೆ ಅನ್‌ ಲಾಕ್‌ ಆದ ಹಿನ್ನೆಲೆಯಲ್ಲಿ ರಸ್ತೆಗಳು ವಾಹನದಟ್ಟಣೆ, ಜನಜಂಗುಳಿಯಿಂದ ಕಂಗೊಳಿಸಿದವು.

ಹಲವು ವಾಣಿಜ್ಯ ಮಳಿಗೆಗಳುಳ್ಳ ಬೆಂಗಳೂರು ರಸ್ತೆ, ಕಾರ್‌ ಸ್ಟ್ರಿಟ್‌, ತೇರು ಬೀದಿ ರಸ್ತೆ, ಕೌಲ್‌ಬಜಾರ್‌ ಪ್ರಮುಖ ರಸ್ತೆಗಳು ಬೆಳಗ್ಗೆ 6 ಗಂಟೆಯಿಂದಲೇ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದವು. ಬೆಳಗ್ಗೆ 6 ಗಂಟೆಯಿಂದಲೇ ದಿನಸಿ, ಕಿರಾಣಿ ಅಂಗಡಿಗಳು, ಮಾಂಸದ ಅಂಗಡಿಗಳು, ಬೇಕರಿಗಳು ತೆರೆದಿದ್ದವು. ಹೋಟೆಲ್‌ಗ‌ಳು ಕೇವಲ ಪಾರ್ಸೆಲ್‌ ಸೇವೆ ಮುಂದುವರೆಸಿದ್ದವು.

ಕಟ್ಟಡ ನಿರ್ಮಾಣದ ಸಾಮಗ್ರಿಗಳು, ಹಾರ್ಡ್‌ವೇರ್‌ ಮಳಿಗೆಗಳು ತೆರೆದಿದ್ದು, ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಕೃಷಿ ಚಟುವಟಿಕೆಗೆ ಸಂಬಂಧಿ ಸಿದ ಬೀಜ, ರಸಗೊಬ್ಬರ ಸೇರಿ ಇನ್ನಿತರೆ ಪರಿಕರಗಳ ಮಳಿಗೆಗಳು ಸಹ ತೆರೆದು ರೈತರಿಗೆ ಅಗತ್ಯ ಸೇವೆ ನೀಡುವಲ್ಲಿ ನಿರತವಾಗಿದ್ದವು. ಇನ್ನು ಎಂದಿನಂತೆ ದಿನಸಿ ಮಳಿಗೆಗಳು, ಹಾಲು, ಹಣ್ಣುಗಳು, ರಸ್ತೆಬದಿ ವ್ಯಾಪಾರಸ್ಥರ, ತಳ್ಳುಬಂಡಿಗಳ ವಹಿವಾಟು ಎಂದಿನಂತೆ ಮುಂದುವರೆಯಿತು.

ಲಾಕ್‌ ಡೌನ್‌ ಉಲ್ಲಂಘನೆ: ಲಾಕ್‌ಡೌನ್‌ ಅನ್‌ ಲಾಕ್‌ ಆಗಿ ಅಗತ್ಯ ಸೇವೆಗಳ ಮಳಿಗೆಗಳಿಗಷ್ಟೇ ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಿದೆ. ಇದನ್ನೇ ಅವಕಾಶವನ್ನಾಗಿಸಿಕೊಂಡ ತೆರೆಯಲು ನಿರ್ಬಂಧಿ ತ ಮಳಿಗೆಗಳಾದ ಬಟ್ಟೆ, ಜವಳಿ, ಮೊಬೈಲ್‌ ಸೇರಿ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳ ಮಳಿಗೆಗಳು ಸಹ ಬಾಗಿಲನ್ನು ಅರ್ಧಕ್ಕೆ ತೆಗೆದು ವಹಿವಾಟು ನಡೆಸಿ ಲಾಕ್‌ಡೌನ್‌ ನಿಯಮ ಉಲ್ಲಂಘನೆಯಾಗಿರುವುದು ಕಂಡುಬಂತು.

Advertisement

ನಗರದ ಬೆಂಗಳೂರು ರಸ್ತೆಯಲ್ಲಿನ ಬಟ್ಟೆ, ರೆಡಿಮೇಡ್‌ ಗಾರ್ಮೆಂಟ್ಸ್‌ ಶಾಪ್‌ಗ್ಳು ಕದ್ದು ಮುಚ್ಚಿ ವಹಿವಾಟು ನಡೆಸುತ್ತಿದ್ದವು. ಕೆಲವೊಂದು ಮಳಿಗೆಗಳು ಅರ್ಧಕ್ಕೆ ಬಾಗಿಲು ತೆರೆದಿದ್ದರೆ, ಇನ್ನು ಕೆಲ ಮಳಿಗೆಗಳ ಮುಂದೆ ಸಿಬ್ಬಂದಿ, ಮಾಲೀಕರು ನಿಂತು ಬಂದ ಗ್ರಾಹಕರನ್ನು ಸದ್ದಿಲ್ಲದೇ ಬಾಗಿಲು ತೆರೆದು ಒಳಗೆ ಕಳುಹಿಸಿ ಬಾಗಿಲು ಹಾಕಿ ವ್ಯಾಪಾರ ನಡೆಸುತ್ತಿದ್ದರು. ಪೊಲೀಸರು ಬರುತ್ತಿದ್ದಂತೆ ಬಾಗಿಲು ಹಾಕಿ ಮಾಯವಾಗುತ್ತಿದ್ದ ದೃಶ್ಯ ಕಂಡುಬಂತು.

ಕಾಣದ ಸಾಮಾಜಿಕ ಅಂತರ: ಅನ್‌ಲಾಕ್‌ ಆದ ಹಿನ್ನೆಲೆಯಲ್ಲಿ ತೆರೆಯಲಾದ ಮಳಿಗೆಗಳ ಮುಂದೆ ಗುಂಪುಗುಂಪಾಗಿ ನಿಂತಿದ್ದ ಗ್ರಾಹಕರ ನಡುವೆ ಸಾಮಾಜಿಕ ಅಂತರ ಮಾಯವಾಗಿತ್ತು. ಕೋವಿಡ್‌ ಮೊದಲ ಅವಧಿ ಯಂತೆ ಅಂಗಡಿಗಳ ಮುಂದೆ ಗ್ರಾಹಕರು ನಿಲ್ಲಲು ವೃತ್ತಗಳನ್ನು ಹಾಕಲಾಗಿತ್ತಾದರೂ, ಯಾರೊಬ್ಬರೂ ಪಾಲಿಸುತ್ತಿರಲಿಲ್ಲ. ಈ ಕುರಿತು ಮಳಿಗೆಯವರು ಸಹ ಗ್ರಾಹಕರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಸೂಚನೆ ನೀಡುತ್ತಿರಲಿಲ್ಲ. ಮುಖ್ಯವಾಗಿ ಗ್ರಾಹಕರಿಗೆ ಸ್ಯಾನಿಟೈಸರ್‌ ಸಹ ವ್ಯವಸ್ಥೆ ಮಾಡಿರಲಿಲ್ಲ. ಇವ್ಯಾವನ್ನೂ ಗಮನಿಸದ ಗ್ರಾಹಕರು ಸಹ ಗುಂಪಲ್ಲೇ ನಿಂತು ಕೂಗಿ ಕೂಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next