Advertisement

ಇಂದಿನಿಂದ ಲಾಕ್‌ ಡೌನ್‌ ಸಡಿಲ

10:10 PM Jun 14, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ಮಹಮ್ಮಾರಿ ಕೋವಿಡ್‌ ಸೋಂಕು ಎರಡನೇ ಅಲೆ ನಿಯಂತ್ರಿಸಲು ಕಳೆದ ಒಂದೂವರೆ ತಿಂಗಳಿಂದ ರಾಜ್ಯ ಸರ್ಕಾರ ವಿಧಿ ಸಿದ್ದ ಲಾಕ್‌ಡೌನ್‌ ಮುಕ್ತಾಯವಾಗಿದ್ದು, ಸೋಮವಾರ ಬೆಳಗಿನ ಜಾವ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮೊದಲ ಅನ್‌ಲಾಕ್‌ 1 ಆರಂಭವಾಗಲಿದೆ.

ಉತ್ಪಾದನೆ ಘಟಕಗಳು, ಕೈಗಾರಿಕೆಗಳ ಚಾಲನೆಗೆ, ಪ್ರಯಾಣಿಕ ವಾಹನಗಳ ಸಂಚಾರಕ್ಕೆ ಶರತ್ತುಬದ್ಧ ಅವಕಾಶ ಕಲ್ಪಿಸಲಾಗಿದೆ. ಕೋವಿಡ್‌ ಸೋಂಕು ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದ್ದು, ಹೆಚ್ಚು ಸಾವು-ನೋವುಗಳು ಸಂಭವಿಸಿದೆ. ನಗರ ಸೇರಿ ಗ್ರಾಮೀಣ ಭಾಗದ ಜನರು ಸೋಂಕಿಗೆ ತತ್ತರಿಸಿದ್ದಾರೆ. ಮೊದಲ ಅವಧಿ  ಯಲ್ಲಿ ಒಂದು ವರ್ಷದಲ್ಲಿ 597 ಜನರು ಸೋಂಕಿಗೆ ಬಲಿಯಾದರೆ, ಎರಡನೇ ಅಲೆಯಲ್ಲಿ ಕೇವಲ ಎರಡೂರು ತಿಂಗಳಲ್ಲಿ 860 ಜನರು ಬಲಿಯಾಗಿದ್ದು, ಸುಮಾರು 28 ಸಾವಿರಕ್ಕೂ ಅಧಿ ಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಗ್ರಾಮೀಣ ಭಾಗದಲ್ಲಿ ಹೆಚ್ಚು ಆವರಿಸಿದ್ದು, ಹಲವರು ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕನ್ನು ನಿಯಂತ್ರಿಸಲು ಕಳೆದ ಮೇ 10 ರಿಂದ 24ರ ವರೆಗೆ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಿಸಿದರೂ ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮೇ 19ರಿಂದ 24 ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿದರು.

ಬಳಿಕ ಮೇ 24, 25ರಂದು ಎರಡು ದಿನಗಳ ಕಾಲ ಬೆಳಗ್ಗೆ 6ರಿಂದ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿ ನಂತರ ಮೇ 31ರವರೆಗೆ ಹೀಗೆ ಜೂನ್‌ 14ರ ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್‌ ವಿ ಧಿಸಿತ್ತು. ಪರಿಣಾಮ ಉಭಯ ಜಿಲ್ಲೆಗಳಲ್ಲಿ ನಿಧಾನವಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಇದೀಗ ಪಾಸಿಟಿವಿಟಿ ಬಹುತೇಕ ಕಡಿಮೆಯಾಗಿದ್ದು, ಸಕ್ರಿಯ ಪ್ರಕರಣಗಳು ಸಹ ಕಡಿಮೆಯಾಗುತ್ತಿವೆ. ಇದರಿಂದ ಎರಡನೇ ಅಲೆಗೆ ವಿಧಿ ಸಿದ್ದ ಲಾಕ್‌ಡೌನ್‌ನ ಮೊದಲ ಅನ್‌ಲಾಕ್‌ 1 ಜೂ. 14ರಂದು ಸೋಮವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಓಪನ್‌ ಆಗಲಿದೆ.

Advertisement

ಏನೇನು ಇರಲಿವೆ: ಅನ್‌ಲಾಕ್‌ 1ರಲ್ಲಿ ಉತ್ಪಾದನೆ ಘಟಕ, ವಾಣಿಜ್ಯ ಮಳಿಗೆಗಳು, ಕೈಗಾರಿಕೆಗಳ ಚಾಲನೆಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರ ಕೇವಲ ಶೇ. 50ರಷ್ಟು ಸಿಬ್ಬಂದಿ ಬಳಸಿಕೊಳ್ಳಬೇಕು ಎಂದು ಸೂಚಿಸಿದೆ. ಅದೇ ರೀತಿ ಗಾರ್ಮೆಂಟ್ಸ್‌ ಉತ್ಪಾದನಾ ಘಕಟಗಳು ಕೇವಲ ಶೇ. 30ರಷ್ಟು ಸಿಬ್ಬಂದಿಗಳನ್ನು ಬಳಸಿಕೊಂಡು ಘಟಕಗಳಿಗೆ ಚಾಲನೆ ನೀಡಬಹುದಾಗಿದೆ.

ಆಹಾರ, ದಿನಸಿ, ಹಣ್ಣುಗಳು ಮತ್ತು ವೆಜಿಟೇಬಲ್‌ಗ‌ಳು, ಮಾಂಸ ಮತ್ತು ಮೀನು, ಡೈರಿ ಮತ್ತು ಹಾಲಿನ ಬೂತ್‌ಗಳು ಮತ್ತು ಪ್ರಾಣಿಗಳ ಮೇವಿನೊಂದಿಗೆ ವ್ಯವಹರಿಸುವ ಅಂಗಡಿಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2 ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿರುತ್ತದೆ. ರಸ್ತೆ, ಬೀದಿಬದಿ ವ್ಯಾಪಾರಿಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಂಗಡಿಗಳಿಗೂ ಸಹ ಅನುಮತಿಸಲಾಗಿದೆ. ಮದ್ಯದಂಗಡಿಗಳು ಮತ್ತು ಮಳಿಗೆಗಳು, ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮಾತ್ರ ಅನುಮತಿಸಿ. ಎಲ್ಲ ವಸ್ತುಗಳ ಮನೆ ವಿತರಣೆಯು 24/7 ಅನ್ನು ತಮ್ಮ ಮನೆಗಳ ಹೊರಗಿನ ನಿವಾಸಿಗಳ ಚಲನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಅನುಮತಿ ನೀಡಲಾಗಿದೆ.

ಅಲ್ಲದೇ, ಕಟ್ಟಡ ಸೇರಿ ಎಲ್ಲ ನಿರ್ಮಾಣ ಚಟುವಟಿಕೆಗಳು/ದುರಸ್ತಿ ಕಾರ್ಯಗಳು ಅಂಗಡಿಗಳು/ಸಂಸ್ಥೆಗಳು ಸೇರಿದಂತೆ ನಿರ್ಮಾಣ ಮೆಟೀರಿಯಲ್‌, ವಿಶೇಷವಾಗಿ ಸಿಮೆಂಟ್‌ ಮತ್ತು ಸ್ಟೀಲ್‌ ಘಟಕಕ್ಕೆ ಅನುಮತಿ ನೀಡಲಾಗಿದ್ದು, ಅಗತ್ಯ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಉದ್ಯಾನವನಕ್ಕೆ ಅವಕಾಶ: ಅನ್‌ಲಾಕ್‌ 1ರಲ್ಲಿ ಉದ್ಯಾನವನಗಳಿಗೂ ಬೆಳಗಿನ ಜಾವ 5 ಗಂಟೆಯಿಂದ 10 ಗಂಟೆವರೆಗೆ ತೆರೆಯಲು ಅವಕಾಶ ಕಲ್ಪಿಸಿದೆ. ಈ ಅವ ಧಿಯಲ್ಲಿ ವಾಯುವಿವಾರ, ವಾಕಿಂಗ್‌, ಜಾಗಿಂಗ್‌ ಮಾಡುವವರಿಗೆ ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಗುಂಪು ಚಟುವಟಿಕೆಗಳನ್ನು ನಿಷೇಧಿ  ಸಿದ್ದು ನಡೆಸುವಂತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next