Advertisement
ಬಳ್ಳಾರಿ: ಸಿಂಜೆಂಟಾ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜಕ್ಕಾಗಿ ಅಲೆದಾಡುತ್ತಿರುವ ರೈತರ ಪರದಾಟ ತಾಲೂಕಿನಲ್ಲಿ ಇನ್ನು ಮುಂದುವರೆದಿದೆ. ನಗರದ ತೋಟಗಾರಿಕೆ ಇಲಾಖೆ ಬಳಿ ರೈತ ಸಂಪರ್ಕ ಕೇಂದ್ರಕ್ಕೆ ಬೀಜಕ್ಕಾಗಿ ನಿರೀಕ್ಷೆಗೂ ಮೀರಿ ಬಂದಿದ್ದ ರೈತರು ಮುಗಿಬಿದ್ದ ಹಿನ್ನೆಲೆಯಲ್ಲಿ ಬೀಜ ವಿತರಣೆಯನ್ನೇ ಸ್ಥಗಿತಗೊಂಡಿದ್ದು, ನಿರೀಕ್ಷೆಯಿಂದ ಬಂದಿದ್ದ ರೈತರು ನಿರಾಶೆಯಿಂದ ಹಿಂತಿರುವಂತಾಗಿದೆ. ಆದರೆ, ಬೇಕಾದವರಿಗೆ ಅಧಿಕ ಬೆಲೆಗೆ ಬೀಜ ದೊರೆಯಲಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
Related Articles
Advertisement
ಆದರೂ, ಇನ್ನು ನೂರಾರು ರೈತರು ಬೀಜಕ್ಕಾಗಿ ಪರದಾಡುತ್ತಿದ್ದಾರೆ. ಸದ್ಯ ಕಂಪನಿಯಿಂದ ಕೇವಲ 40 ಕೆಜಿ ಬೀಜ ಮಾತ್ರ ಸರಬರಾಜಾಗಿದೆ. 10 ಗ್ರಾಂ ಪ್ಯಾಕೆಟ್ 600 ರೂ, 10 ಪಾಕೇಟ್‌ವುಳ್ಳ ಬಾಕ್ಸ್‌ನ್ನು 6 ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಬೀಜಕ್ಕಾಗಿ ರೈತರ ಸಾಲನ್ನು ನೋಡಿದರೆ, 40 ಕೆಜಿಯನ್ನು ಯಾರಿಗೆ ಕೊಡಬೇಕೊ ಎಂಬುದೇ ಗೊತ್ತಾಗುತ್ತಿಲ್ಲ. ಸಿಂಜೆಂಟಾ ಕಂಪನಿಯ ಬೇರೆ ಬೀಜವನ್ನು ನೀಡುತ್ತೇವೆ ಎಂದರೂ ರೈತರು ಕೇಳುತ್ತಿಲ್ಲ ಎಂದು ಕಂಪನಿ ಡಿಸ್ಟ್ರಿಬ್ಯೂಟರ್ ಸಿದ್ದಪ್ಪ ತಿಳಿಸುತ್ತಾರೆ.
ಕಡಿಮೆ ನಷ್ಟ ಹೆಚ್ಚಿದ ವಿಶ್ವಾಸ: ಸಿಂಜೆಂಟಾ ಕಂಪನಿಯ ಮೆಣಸಿನಕಾಯಿ ಬಿತ್ತನೆ ಬೀಜದಿಂದ ಉತ್ತಮ ಫಸಲು ದೊರೆಯುವುದರ ಜತೆಗೆ ನಷ್ಟದ ಸುಳಿಗೆ ಸಿಲುಕಿಸುವುದಿಲ್ಲ ಎಂಬುದು ರೈತರು ಕಂಪನಿ ಮೇಲೆ ವಿಶ್ವಾಸ ಬೆಳೆಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಸಿಂಜೆಂಟಾ ಕಂಪನಿ ಬೀಜವನ್ನು ಬಿತ್ತನೆ ಮಾಡಿದರೆ ಅ ಧಿಕ ಮಳೆ ಬಂದರೂ ಫಸಲು ಕೆಡುವುದಿಲ್ಲ. ಮೆನಸಿನಕಾಯಿಗಳ ಮೇಲೆ ಕಪ್ಪುಚುಕ್ಕೆಗಳು ಜಾಸ್ತಿ ಬೀಳುವುದಿಲ್ಲ. ಬಿಸಿಲು ಬೀಳುತ್ತಿದ್ದಂತೆ ನೆಲದಲ್ಲಿ ತೇವಾಂಶ ಕಡಿಮಯಾಗುತ್ತಿದ್ದಂತೆ ಪುನಃ ಚಿಗುರೊಡೆಯಲಿದೆ. ಹಾಗಾಗಿ ಈ ಕಂಪನಿಯ ಬೀಜಕ್ಕೆ ಬೇಡಿಕೆ ಹೆಚ್ಚಾಗಿದ್ದು, ರೈತರು ಪರದಾಡುತ್ತಿದ್ದಾರೆ.
ಆದರೆ, ಬೇರೆ ಕಂಪನಿ ಬೀಜ ಹಾಗಲ್ಲ. ಜಾಸ್ತಿ ಮಳೆಯಾದರೆ ಕಾಯಿಗಳ ಮೇಲೆ ಕಪ್ಪುಚುಕ್ಕೆ ಬಂದು, ಗಿಡಗಳೆಲ್ಲವೂ ಬಾಡಲಿವೆ ಎನ್ನುತ್ತಾರೆ ಬೀಜಕ್ಕಾಗಿ ಗಂಟೆಗಟ್ಟಲೆ ಸಾಲಲ್ಲಿ ನಿಂತಿದ್ದ ಕೊಳಗಲ್ಲು, ಸಂಗನಕಲ್ಲು ಗ್ರಾಮಗಳ ರೈತರು. ಆರೋಪ: ಸಿಂಜೆಂಟಾ ಕಂಪನಿ ಮೆಣಸಿನಕಾಯಿ ಬೀಜಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಡಿಸ್ಟ್ರಿಬ್ಯೂಟರ್‌ಗಳು, ತಮಗೆ ಬೇಕಾದವರಿಗೆ, ಪರಿಚಿತರಿಗೆ ಅ ಧಿಕ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.
ಇದನ್ನು ನಿಯಂತ್ರಿಸುವ ಸಲುವಾಗಿ ಮಳಿಗೆಗಳ ಮೇಲೆ ದಾಳಿ ನಡೆಸಿದ್ದ ತೋಟಗಾರಿಕೆ, ಕೃಷಿ ಇಲಾಖೆ ಅಧಿ ಕಾರಿಗಳು, ಡಿಸ್ಟ್ರಿಬ್ಯೂಟರ್‌ಗಳ ಸಮ್ಮುಖದಲ್ಲೇ ಡೀಲರ್‌ಗಳು ರೈತರಿಗೆ ಬೀಜವನ್ನು ವಿತರಿಸಬೇಕು ಎಂದು ತಾಕೀತು ಮಾಡಿದ್ದರು. ಆದರೆ, ಬೀಜಕ್ಕಾಗಿ ರೈರು ಮುಗಿಬಿದ್ದ ಹಿನ್ನೆಲೆಯಲ್ಲಿ ಬೀಜ ವಿತರಣೆಯನ್ನೇ ಸ್ಥಗಿತಗೊಂಡಿದ್ದು, ರೈತರ ಪರದಾಟ ಯಾವಾಗ ಸ್ಥಗಿತಗೊಳ್ಳಲಿದೆ ಕಾದು ನೋಡಬೇಕಾಗಿದೆ.