Advertisement

ಡಾ|ಸಿದ್ದಲಿಂಗಯ್ಯ ಅಗಲಿಕೆ ತುಂಬಲಾರದ ನಷ್ಟ

09:21 PM Jun 13, 2021 | Team Udayavani

ಬಳ್ಳಾರಿ: ಕನ್ನಡದ ಖ್ಯಾತ ಕವಿ ಬಂಡಾಯ ಸಾಹಿತಿ ಡಾ| ಸಿದ್ದಲಿಂಗಯ್ಯ ಅವರ ನಿಧನಕ್ಕೆ ನಗರದ ಅಂಬೇಡ್ಕರ್‌ ಭವನದ ಆವರಣದಲ್ಲಿರುವ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಬಳಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಪದಾಧಿಕಾರಿಗಳು ಶನಿವಾರ ಶ್ರದ್ಧಾಂಜಲಿ ಸಲ್ಲಿಸಿದರು.

Advertisement

ಇದೇ ವೇಳೆ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿ ರಾಜ್ಯ ಸಂಘಟನಾ ಸಂಚಾಲಕ, ಜಿಪಂ ಸದಸ್ಯ ಎ. ಮಾನಯ್ಯ ಮಾತನಾಡಿ, ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ನಿವಾಸಿಗಳಾದ ಡಾ| ಸಿದ್ಧಲಿಂಗಯ್ಯ ಅವರು ದಲಿತ ಮತ್ತು ಬಂಡಾಯ ಸಾಹಿತ್ಯದ ಮೂಲಕ ಇಡೀ ರಾಜ್ಯಕ್ಕೆ ಹೆಸರು ಮಾಡಿದ್ದರು.

ಅವರ ಬಂಡಾಯ ಸಾಹಿತ್ಯದಿಂದ ದಲಿತ ಲೋಕಕ್ಕೆ ಒಂದು ಹೊಸ ಚೈತನ್ಯ ಮತ್ತು ಹೊಸ ಹುರುಪು ತುಂಬಿದ್ದರು. ಡಾ| ಸಿದ್ದಲಿಂಗಯ್ಯ ಅವರ ಅಗಲಿಕೆಯಿಂದ ಇಡೀ ದಲಿತ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಚ್‌. ಸಿದ್ದೇಶ್‌, ಪತ್ರಕರ್ತ ಕಾಡೂರು ಮಧುಸೂದನ್‌, ಮುಖಂಡರಾದ ಡಿ.ಸೂರಿ, ಆಂಜಿನೇಯ, ಕೆ.ಗಾದಿಲಿಂಗ, ಎಚ್‌. ರಮೇಶ್‌, ಟಿ.ಎಂ.ಎರ್ರಿಸ್ವಾಮಿ, ಶಂಕರ್‌, ಮಲ್ಲಯ್ಯ, ಭೀಮಾ ಸೇರಿದಂತೆ ಮತ್ತಿತರರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next