Advertisement

ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

09:16 PM Jun 13, 2021 | Team Udayavani

ಹೂವಿನಹಡಗಲಿ: ದೇಶದ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ರಾಮ ರಾಜ್ಯ ಮಾಡುತ್ತೇವೆ ಎಂದು ಹೇಳಿದವರು. ರಾಮನ ರಾಜ್ಯದಲ್ಲಿ 100 ರೂ ಪೆಟ್ರೋಲ್‌ ದರ ಆಗಿದೆ. ಇದು ಮೋದಿಯವರ ರಾಮರಾಜ್ಯವೇ ಎಂದು ಮಾಜಿ ಸಚಿವ, ಕ್ಷೇತ್ರದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಪ್ರಶ್ನೆ ಮಾಡಿದರು.

Advertisement

ರಾಜ್ಯದಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಟ್ಟಿರುವ ವೆಂಟಿಲೇಟರ್‌ ಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿಲ್ಲ ಎಂದು ಬಿಜೆಪಿ ಪಕ್ಷದವರೇ ಹೇಳಿರುವುದು ಅವರ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ದೇಶಕ್ಕೆ ನಮ್ಮ ಕಾಂಗ್ರೆಸ್‌ ಸಾಕಷ್ಟು ಕೊಡುಗೆ ಕೊಟ್ಟಿದೆ. ದೇಶದಲ್ಲಿ ಐಟಿಬಿಟಿ ತಂದು ವಿಶ್ವದ ಗಮನ ಸೆಳೆದಿದೆ. ದೇಶದಲ್ಲಿನ ಕೊಟ್ಯಾಂತರ ಜನರಿಗೆ ಉದ್ಯೋಗ ನೀಡಿದೆ. ಒಟ್ಟಾರೆಯಾಗಿ ಸ್ವಾತಂತ್ರಾÂನಂತರದ ದೇಶ ಕಟ್ಟುವ ಕೆಲಸವನ್ನು ಕಾಂಗ್ರೆಸ್‌ ಮಾಡಿದೆ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹಡಗಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಪರಮೇಶ್ವರಪ್ಪ, ಇಟಗಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಐಗೊಳ್‌ ಚಿದಾನಂದ್‌ ಪ್ರತಿಭಟನೆ ಕುರಿತು ಮಾತನಾಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಮುಖಂಡರಾದ ಪುರಸಭೆ ಅಧ್ಯಕ್ಷ ವಾರದ ಗೌಸುಮೊಹದ್ದಿನ್‌, ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಅಟವಾಳಗಿ ಕೊಟ್ರೇಶ್‌, ಜ್ಯೋತಿ ಮಲ್ಲಣ್ಣ, ಜಿಲ್ಲಾ ಕಾಂಗ್ರೆಸ್‌ ವಕ್ತಾರ ಬಿ.ಎಲ್‌. ಶ್ರೀಧರ್‌, ಬ್ಯಾಲಹುಣಸಿ ಬಸವನಗೌಡ್‌, ಎಲ್‌. ಚಂದ್ರನಾಯ್ಕ, ಕೆ. ರಾಘವೇಂದ್ರ ಶೆಟ್ಟಿ, ಬಿ. ಹನುಮಂತಪ್ಪ ಇದ್ದರು.

ಪಟ್ಟಣದ ಲಾಲ್‌ಬಹದ್ದೂರು ಶಾಸ್ತ್ರಿ ವೃತ್ತದಿಂದ ಹರಪನಹಳ್ಳಿ ರಸ್ತೆಯಲ್ಲಿರುವ ಎಸ್‌.ಎಂ.ಎನ್‌ ಪೆಟ್ರೋಲ್‌ ಬಂಕ್‌ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಬಂಕ್‌ ಹತ್ತಿರ ಪೆಟ್ರೋಲ್‌ ದರ ಹೆಚ್ಚಳ ಕುರಿತು ಪ್ರತಿಭಟಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next