Advertisement

ಅಪೌಷ್ಟಿಕ ಮಕ್ಕಳಿಗೆ ಬಾಲಚೈತನ್ಯ ಸಹಕಾರಿ

09:40 PM Jun 11, 2021 | Team Udayavani |

ಸಿರುಗುಪ್ಪ: ಸರ್ಕಾರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅಂತಹ ಮಕ್ಕಳ ಸರ್ವತೋಮುಖ ಆರೋಗ್ಯ ಬೆಳವಣಿಗೆಗೆ ಅಪೌಷ್ಟಿಕ ಮಕ್ಕಳ ಆರೈಕೆ ಬಾಲಚೈತನ್ಯ ಕೇಂದ್ರದಂತಹ ಮಹತ್ವ ಪೂರ್ಣ ಯೋಜನೆ ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಂಡು ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಬೇಕು ಎಂದು ಶಾಸಕ ಎಂ.ಎಸ್‌. ಸೋಮಲಿಂಗಪ್ಪ ತಿಳಿಸಿದರು.

Advertisement

ನಗರದ ಕೃಷ್ಣ ನಗರದಲ್ಲಿರುವ ಮೆಟ್ರಿಕ್‌ ನಂತರದ ಬಾಲಕೀಯರ ವಸತಿ ನಿಯಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಶಿಶು ವೈದ್ಯತಜ್ಞ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಪೌಷ್ಟಿಕ ಮಕ್ಕಳ ಆರೈಕೆ ಬಾಲಚೈತನ್ಯ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯವಂತ ಮಕ್ಕಳೇ ದೇಶದ ಸಂಪತ್ತಾಗಿದ್ದು, ದೇಶದಲ್ಲಿನ ಪ್ರತಿಯೊಂದು ಮಗುವು ಆರೋಗ್ಯವಾಗಿರಬೇಕು ಎನ್ನುವ ಉದ್ದೇಶದಿಂದ ಸರ್ಕಾರ ಬಾಲಚೈತನ್ಯ ಕೇಂದ್ರವನ್ನು ಪ್ರಾರಂಭಿಸಿ ಕೇಂದ್ರದಲ್ಲಿಯೇ 14ದಿನಗಳ ವರೆಗೆ ಮಕ್ಕಳಿಗೆ ಹಾಲು, ಹಣ್ಣು, ಮೊಟ್ಟೆ ಇನ್ನಿತರೆ ಪೌಷ್ಟಿಕ ಆಹಾರ ನೀಡುವುದರ ಜತೆಗೆ ವಿವಿಧ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರೆ ಅಂತಹ ಮಕ್ಕಳಿಗೆ ನುರಿತ ತಜ್ಞ ವೈದ್ಯರಿಂದ ತಪಾಸಣೆ ಅವಶ್ಯಕತೆ ಇದ್ದಲ್ಲಿ ಚಿಕಿತ್ಸೆಯನ್ನೂ ನೀಡುವ ವ್ಯವಸ್ಥೆ ಮಾಡಲಾಗಿದೆ.

ಅಪೌಷ್ಟಿಕ ಮಕ್ಕಳ ಜತೆಯಲ್ಲಿರುವ ತಾಯಂದಿರಿಗೆ ಉಪಹಾರ, ಊಟ ವಸತಿಯ ಜತೆಗೆ ಒಂದು ದಿನಕ್ಕೆ 289 ರೂ. ಗಳನ್ನು ನೀಡಲಾಗುವುದು ಎಂದು ಹೇಳಿದರು. ತಾಲೂಕಿನಲ್ಲಿ ವಿವಿಧ ಕಾರಣಗಳಿಂದ ಒಂದು ವರ್ಷದಿಂದ 6ವರ್ಷದ ಮಕ್ಕಳಲ್ಲಿ ವಯೋಮಿತಿಗೆ ತಕ್ಕಂತೆ ತೂಕ, ಎತ್ತರ ಮತ್ತು ಆರೋಗ್ಯವಾಗಿಲ್ಲದ ಒಟ್ಟು 83 ಅಪೌಷ್ಟಿಕ ಮಕ್ಕಳನ್ನು ಗುರುತಿಸಿದ್ದು, ಬಾಲಚೈತನ್ಯ ಕೇಂದ್ರಕ್ಕೆ 62 ಮಕ್ಕಳನ್ನು ತಾಯಂದಿರು ಕರೆತಂದಿದ್ದಾರೆ.

ಕಾರಣಾಂತರಗಳಿಂದ ಕೇಂದ್ರಕ್ಕೆ ಬಾರದ 21 ಮಕ್ಕಳ ತಾಯಂದಿರ ಕುಟುಂಬವನ್ನು ಸಂಪರ್ಕಿಸಿ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಸಿಡಿಪಿಒ ಜಲಾಲಪ್ಪ ಮಾಹಿತಿ ನೀಡಿದರು.

Advertisement

ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿ, ತಾಪಂ ಇ.ಒ ಶಿವಪ್ಪಸುಬೇದಾರ್‌, ನಗರಸಭೆ ಅಧ್ಯಕ್ಷ ಡಿ.ನಾಗರಾಜ, ಟಿಎಚ್‌ಒ ಡಾ| ವಿದ್ಯಾಶ್ರೀ, ಸಾರ್ವಜನಿಕ ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ|ದೇವರಾಜ, ಕೃಷಿ ಅಧಿಕಾರಿ ನಜೀರ್‌ ಅಹ್ಮದ್‌, ಬಿಸಿಎಂ ಇಲಾಖೆಯ ಅಧಿಕಾರಿ ಎ.ಗಾದಿಲಿಂಗಪ್ಪ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಎಂ.ಸಿದ್ದಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು ಹಾಗೂ ಆರೋಗ್ಯ ಸಿಬ್ಬಂದಿ ಮತ್ತು ಅಂಗನವಾಡಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next