Advertisement

ಪೌಷ್ಠಿಕ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ

09:46 PM Jun 09, 2021 | Team Udayavani |

ಹಗರಿಬೊಮ್ಮನಹಳ್ಳಿ: ಮಕ್ಕಳಿಗೆ ಪೌಷ್ಠಿಕ ಆಹಾರದಿಂದ ಆರೋಗ್ಯ ಸುಧಾರಿಸುತ್ತದೆ ಎಂದು ಶಾಸಕ ಎಸ್‌. ಭೀಮಾನಾಯ್ಕ ನುಡಿದರು. ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ತಾಲೂಕು ಆಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬಾಲ ಚೈತನ್ಯ ಯೋಜನೆ ಅಡಿಯಲ್ಲಿ ಅಪೌಷ್ಠಿಕತೆ ಮಕ್ಕಳ ಸುಧಾರಣೆಗಾಗಿ ಆರೈಕೆ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಕೊರೊನಾ 3ನೇ ಅಲೆ ಹೆಚ್ಚಾಗಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಗ್ಯ ತಜ್ಞರು ಮುನ್ಸೂಚನೆ ನೀಡಿದ್ದು, ಇದನ್ನು ತಡೆಯಲು ತಾಲೂಕ ಆಡಳಿತ ಸಜ್ಜುಗೊಂಡಿದ್ದು ಮುಂಜಾಗ್ರತಾ ಕ್ರಮವಾಗಿ ಆರೈಕೆ ಕೇಂದ್ರವನ್ನು ತೆರೆಯಲಾಗಿದೆ. ತಾಲೂಕಿನಲ್ಲಿ ಹೀಗಾಗಲೇ ಅಪೌಷ್ಠಿಕತೆಯ 136 ಮಕ್ಕಳನ್ನು ಗುರುತಿಸಿದ್ದು, ತಲಾ 50 ಮಕ್ಕಳಂತೆ ಹಂತ ಹಂತವಾಗಿ ವಸತಿ ಕೇಂದ್ರದಲ್ಲಿ ತಪಾಸಣೆ ಮಾಡಿ ಪೌಷ್ಠಿಕಾಂಶದ ಆಹಾರ ಮತ್ತು ಔಷ ಧ ನೀಡಲಾಗುತ್ತದೆ.

ಮಗುವಿನ ಜೊತೆಗಿರುವ ತಾಯಿಗೂ ವಸತಿ ಮತ್ತು ಆಹಾರ ನೀಡಲಾಗುತ್ತಿದ್ದು, ತಾಯಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ 14 ದಿನಗಳ ಕೂಲಿ ಹಣ ಸಂದಾಯ ಮಾಡಲಾಗುತ್ತದೆ ಎಂದು ತಿಳಿಸಿದರು. ತಹಶೀಲ್ದಾರ್‌ ಶರಣಮ್ಮ, ತಾಲೂಕು ವೈದ್ಯಾಧಿ ಕಾರಿ ಡಾ| ಶಿವರಾಜ, ಮಕ್ಕಳ ತಜ್ಞ ಡಾ| ತಿಪ್ಪೇಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಕವಿತಾ ಹಾಲ್ದಾಳ್‌ ವಿಜಯಕುಮಾರ್‌, ತಾಪಂ ಕಾರ್ಯನಿರ್ವಾಹಕ ಅಧಿ ಕಾರಿ ಹಾಲಸಿದ್ದಪ್ಪ ಪೂಜೇರಿ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್‌, ಪವಾಡಿ ಹನುಮಂತಪ್ಪ, ಮುಟುಗನಹಳ್ಳಿ ಕೊಟ್ರೇಶ, ಕನ್ನಿಹಳ್ಳಿ ಚಂದ್ರಶೇಖರ, ಡಿಶ್‌ ಮಂಜುನಾಥ, ಲೋಕೋಪಯೋಗಿ ಇಲಾಖೆಯ ಎಡಿ ಪ್ರಭಾಕರಶೆಟ್ರಾ, ಸಿಡಿಪಿಒ ಚನ್ನಪ್ಪ, ತೋಟಗಾರಿಕೆ ಇಲಾಖೆಯ ಎಡಿ ಪರಮೇಶ್ವರಪ್ಪ, ಬಿಸಿಎಂ ಇಲಾಖೆ ರಮೇಶ್‌, ಸಮಾಜ ಕಲ್ಯಾಣ ಇಲಾಖೆಯ ಡಾ| ಬಿ.ಎಂ ದಿನೇಶ್‌, ಪುರಸಭೆ ಮುಖ್ಯಾಧಿ ಕಾರಿ ಕೃಷ್ಣನಾಯ್ಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next