ಹೊಸಪೇಟೆ: ವಿಶ್ವದಲ್ಲಿ ಸರ್ವ ಶ್ರೇಷ್ಠವಾದ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳು ನಿತ್ಯ ಪ್ರಾರ್ಥನೆಯಲ್ಲಿ ಪಠಿಸುವುದು
ಅಗತ್ಯವಾಗಿದೆ ಎಂದು ಉಪವಿಭಾಗಾಧಿ ಕಾರಿ ಸಿದ್ರಾಮೇಶ್ವರ ಮಠದ್ ಅಭಿಪ್ರಾಯ ಪಟ್ಟರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ವಿಶ್ವದಲ್ಲಿ ಭಾರತದ ಸಂವಿಧಾನ ಸರ್ವ ಶ್ರೇಷ್ಠ ಹಾಗೂ ಅತಿ ದೊಡ್ಡ ಲಿಖೀತ ಸಂವಿಧಾನವಾಗಿದೆ.
ಇಡೀ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಜತ್ಯಾತೀತತೆಯ ಮಹತ್ವವನ್ನು ಸಾರಿದೆ. ಸಂವಿಧಾನ ಹೃದಯದ ಭಾಗವಾಗಿರುವ ಸಂವಿಧಾನದ ಪಿಠಿಕೆಯನ್ನು ವಿದ್ಯಾರ್ಥಿಗಳು ನಿತ್ಯ ಪ್ರಾರ್ಥನೆಯಲ್ಲಿ ಪಠಿಸುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆರಂಭದಲ್ಲಿ ಡಾ| ಅಂಬೇಡ್ಕರ್ ಹಾಗೂ ಮಹಾತ್ಮಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪೊಲೀಸ್, ಹೋಮ್ ಗಾರ್ಡ್, ಎನ್ ಸಿಸಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಸೇವಾದಳ ಹಾಗೂ ವಿವಿಧ ಶಾಲಾ ತಂಡಗಳಿಂದ ಧ್ವಜವಂದನೆ ನಡೆಯಿತು. ಜಿಪಂ ಸದಸ್ಯೆ ಜಯಕುಮಾರಿ ಈಶ್ವರ್, ತಾಪಂ ಅಧ್ಯಕ್ಷ ನಾಗವೇಣಿ ಬಸವರಾಜ, ಹುಡಾ ಅಧ್ಯಕ್ಷ ಅಶೋಕ್ ಜೀರೆ, ತಹಶೀಲ್ದಾರ ಎಚ್. ವಿಶ್ವನಾಥ, ಪೌರಾಯುಕ್ತ ಮನ್ಸೂರು ಅಲಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಪಿ.ಸುನಂದ ಇನ್ನಿತರರಿದ್ದರು.
ಓದಿ : ಸಂಗೊಳ್ಳಿ ರಾಯಣ್ಣ ಮಹಾನ್ ದೇಶಭಕ್ತ