Advertisement

ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಗೆ 2ನೇ ಸ್ಥಾನ: ಈಶ್ವರಪ್ಪ

10:25 PM Jun 08, 2021 | Team Udayavani |

ಬಳ್ಳಾರಿ: ಸ್ವತ್ಛ ಭಾರತ ಮಿಶನ್‌ (ಗ್ರಾಮೀಣ) ಯೋಜನೆ ಅಡಿ ಗ್ರಾಪಂಗಳಿಗೆ ಖರೀದಿಸಲಾದ ಕಸ ವಿಲೇವಾರಿ ವಾಹನಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಸೋಮವಾರ ವಿತರಿಸಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 50 ಗ್ರಾಪಂಗಳಿಗೆ ಕಸವಿಲೇವಾರಿ ವಾಹನಗಳನ್ನು ಸಚಿವ ಈಶ್ವರಪ್ಪ ಅವರು ವಿತರಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವತ್ಛ ಭಾರತ ಮಿಶನ್‌ ಅಡಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕಗಳು ಪ್ರಾರಂಭವಾಗಿವೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಒಟ್ಟು 237 ಗ್ರಾಮ ಪಂಚಾಯತಿಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಾ ಕ್ರಿಯಾ ಯೋಜನೆಯನ್ನು ಅನುಮೋದನೆ ಪಡೆಯಲಾಗಿದೆ. ಇಂದಿನ 50 ವಾಹನಗಳು ಸೇರಿ ಇದುವರೆಗೆ 172 ಗ್ರಾಪಂಗಳಿಗೆ ಇನ್ನುಳಿದ ಗ್ರಾಪಂಗಳಿಗೂ ಶೀಘ್ರದಲ್ಲೇ ವಿತರಿಸಲಾಗುವುದು. ಈಗ ಬಳ್ಳಾರಿ ರಾಜ್ಯದಲ್ಲಿ ಎರಡನೇ ಜಿಲ್ಲೆಯಾಗಿದ್ದು, ಕೊಡಗು ಮೊದಲ ಜಿಲ್ಲೆಯಾಗಿದೆ. ಶೀಘ್ರದಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಜಿಲ್ಲೆಯಾಗಲಿದೆ ಎಂದರು.

ಗ್ರಾಮಗಳಲ್ಲಿ ಇಳಿಕೆಯತ್ತ ಸೊಂಕು: ಕೋವಿಡ್‌ಗೆ ಸಂಬಂ ಧಿಸಿದಂತೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದ ಹಾಗೂ ಗ್ರಾಮೀಣ ಟಾಸ್ಕ್ಫೋರ್ಸ್‌ ಗಳು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರ ಪರಿಣಾಮ ಆರಂಭದಲ್ಲಿ ಅಧಿ ಕ ಪ್ರಮಾಣದಲ್ಲಿದ್ದ ಕೊರೊನಾ ಸೋಂಕು ದಿನೇದಿನೇ ಇಳಿಕೆಯಾಗುತ್ತಿದೆ. ಹೋಂ ಕ್ವಾರಂಟೈನ್‌ನಿಂದ ಸೊಂಕಿನ ಪ್ರಮಾಣ ಹೆಚ್ಚಳ ಆಗುತ್ತಿರುವುದನ್ನು ಅರಿತು ಗ್ರಾಮೀಣ ಪ್ರದೇಶದ ಜನರು ಕೂಡ ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಬರುತ್ತಿದ್ದಾರೆ ಎಂದರು.

ಶೇ.100ರಷ್ಟು ಕಸ ಸಂಗ್ರಹಣೆ: ಜಿಲ್ಲೆಯ 237 ಗ್ರಾಮ ಪಂಚಾಯತಿಗಳಲ್ಲಿ ಜೂನ್‌-2021ರ ಅಂತ್ಯದೊಳಗೆ ಒಣ ಕಸ ಸಂಗ್ರಹಣೆಗೆ ಸೂಕ್ತ ಕ್ರಮ ವಹಿಸಲಾಗುವುದು. ಈ ಮೂಲಕ ರಾಜ್ಯದಲ್ಲಿ ಶೇ.100ರಷ್ಟು ಗ್ರಾಮ ಪಂಚಾಯತಿಗಳಲ್ಲಿ ಒಣ ಕಸ ಸಂಗ್ರಹಣೆಯಲ್ಲಿ ರಾಜ್ಯದಲ್ಲಿ ಬಳ್ಳಾರಿ ಎರಡನೇ ಜಿಲ್ಲೆಯಾಗಲಿದೆ. ಮೊದಲನೆಯ ಜಿಲ್ಲೆ ಕೊಡಗು ಜಿಲ್ಲೆಯಾಗಿದೆ ಎಂದು ಜಿಪಂ ಸಿಇಒ ಕೆ.ಆರ್‌.ನಂದಿನಿ ತಿಳಿಸಿದರು.

ಸ್ವತ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯಹೊಂದಿ ಗೌರವಯುತ ಜೀವನ ನಡೆಸುವುದು ಮತ್ತು ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ವತ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನವನ್ನು ಹೊಂದಿ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಕಲ್ಪಿಸಿದರೆ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವತ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು.

Advertisement

ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕರುಣಾಕರರೆಡ್ಡಿ, ಸೋಮಶೇಖರ್‌ ರೆಡ್ಡಿ, ಕೆ.ಸಿ.ಕೊಂಡಯ್ಯ, ಬಿ.ನಾಗೇಂದ್ರ, ಜಿಪಂ ಯೋಜನಾ ಧಿಕಾರಿ ಜಾನಕಿರಾಂ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next