Advertisement

ಮಹನೀಯರ ತ್ಯಾಗ-ಬಲಿದಾನ ಸ್ಮರಿಸೋಣ

04:43 PM Jan 27, 2021 | Team Udayavani |

ಹೊಸಪೇಟೆ: ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ-ಬಲಿದಾನ ಗೈದ ಮಹನಿಯರನ್ನು ಪ್ರತಿಯೊಬ್ಬರು ಸ್ಮರಿಸಬೇಕು ಎಂದು ಹಜ್‌ ಮತ್ತು ವಕ್ಫ್ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ಸಚಿವ ಆನಂದ ಸಿಂಗ್‌ ಹೇಳಿದರು.
72ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ರೋಟರಿ ವೃತ್ತದಲ್ಲಿ 150 ಅಡಿ ಎತ್ತರದ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನಗಳನ್ನು ಸ್ಮರಿಸಬೇಕಿದೆ. ಇಡೀ ವಿಶ್ವಕ್ಕೆ ಮಾದರಿಯಾಗಿರುವ ಡಾ| ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನದಿಂದ ನಾವೆಲ್ಲರೂ ಸಮಾನತೆಯಿಂದ ಬದುಕುತ್ತಿದ್ದೇವೆ ಎಂದರು.

Advertisement

ತಹಶೀಲ್ದಾರ್‌ ಎಚ್‌. ವಿಶ್ವನಾಥ, ಡಿವೈಎಸ್ಪಿ ರಘುಕುಮಾರ್‌, ಪೌರಾಯುಕ್ತ ಮನ್ಸೂರು ಅಲಿ, ಕ್ಷೇತ್ರ ಶಿಕ್ಷಣಾಧಿ ಕಾರಿ ಸುನಂದಮ್ಮ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ನಾಗವೇಣಿ ಬಸವರಾಜ, ಹುಡಾ ಅಧ್ಯಕ್ಷ ಆಶೋಕ್‌ ಜೀರೆ, ಅಯ್ನಾಳಿ ತಿಮ್ಮಪ್ಪ, ಕವಿತಾ ಈಶ್ವರ ಸಿಂಗ್‌, ಧಮೇಂದ್ರ ಸಿಂಗ್‌, ಸಂದೀಪ್‌ ಸಿಂಗ್‌, ಜೀವರತ್ನಂ ಇನ್ನಿತರರಿದ್ದರು.

ವಿಜಯನಗರ ಜಿಲ್ಲೆ ಘೋಷಣೆಗೆ ಶೀಘ್ರ ಅಂತಿಮ ಅಧಿ ಸೂಚನೆ: ಈಗಾಗಲೇ ವಿಜಯನಗರ ಜಿಲ್ಲೆ ಘೋಷಣೆಯಾಗಿದ್ದು, ಶೀಘ್ರದಲ್ಲಿ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಸಚಿವ ಆನಂದ ಸಿಂಗ್‌ ಹೇಳಿದರು.
ನಗರದ ರೋಟರಿ ವೃತ್ತದಲ್ಲಿ ಮಂಗಳವಾರ 72ನೇ ಗಣರಾಜ್ಯೋತ್ಸವ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ರಚನೆಯಿಂದ ಹೊಸಪೇಟೆ, ಪಶ್ಚಿಮ ತಾಲೂಕುಗಳ ಜನರ ಬಹುದಿನಗಳ ಬೇಡಿಕೆ ಈಡೇರಲಿದ್ದು, ಪಶ್ಚಿಮದ ಆರು ತಾಲೂಕುಗಳ ಜನರಿಗೆ ಅನುಕೂಲವಾಗಲಿದೆ ಎಂದರು.
ಅಂತಿಮ ಅಧಿ ಸೂಚನೆಯಾದ ನಂತರ ದೊಡ್ಡ ಸಂಭ್ರಮಾಚರಣೆ ಮಾಡೋಣ ಎಂದ ಅವರು, ಇಡೀ ರಾಜ್ಯವೇ ವಿಜಯನಗರದ ಕಡೆ ತಿರುಗಿ ನೋಡುವಂತೆ ಆಚರಣೆ ಮಾಡಲಾಗುವುದು.

ವಿಜಯನಗರ ಗತವೈಭವ ಮತ್ತೂಮ್ಮೆ ಮರುಕಳುಹಿಸುವಂತೆ ಸಂಭ್ರಮಾಚರಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಸಾರುವಂತೆ ಕಾರ್ಯಕ್ರಮ ಮಾಡಲಾಗುವುದು, ಮುಖ್ಯಮಂತ್ರಿ ಯಡಿಯೂರಪ್ಪನವರು ವೈಭವದಲ್ಲಿ ಭಾಗವಹಿಸಲು ಆಹ್ವಾನ ಮಾಡಲಾಗಿದೆ. ರಾಷೀóಯ ನಾಯಕರನ್ನೂ ಸಹ ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗುವುದು
ಎಂದರು.

ದೆಹಲಿಯಲ್ಲಿ ವಿಜಯನಗರದ ಟ್ಯಾಬ್ಲೋ ಅನಾವರಣಗೊಳ್ಳುತ್ತಿರುವುದು ನಮ್ಮ ಹೆಮ್ಮೆಯ ಪ್ರತೀಕವಾಗಿದೆ ಎಂದು ಸಂತಷ ವ್ಯಕ್ತಪಡಿಸಿದರು.

Advertisement

ಓದಿ :ಹುಣಸೋಡು ಸ್ಫೋಟ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಾಧೀಶರಿಂದ ನಡೆಯಲಿ : ಸಿದ್ದರಾಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next