Advertisement
ಬಳ್ಳಾರಿ: ಆರ್ಥಿಕವಾಗಿ ಸದೃಢವಾಗಿದ್ದರೂ ಆದ್ಯತಾ ವಲಯದ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿರುವ ಫಲಾನುಭವಿಗಳಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸದ್ದಿಲ್ಲದೇ ಬಿಸಿ ಮುಟ್ಟಿಸುತ್ತಿದೆ.
Related Articles
Advertisement
ಜತೆಗೆ ಅನರ್ಹರು ಪಡೆದಿರುವ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಹಿಂತಿರುಗಿಸುವಂತೆ ಮತ್ತೂಮ್ಮೆ ಜೂ.30ರವರೆಗೆ ಗಡುವು ನೀಡಿದೆ. 2549 ಎಪಿಎಲ್‌ಗೆ ಪರಿವರ್ತನೆ, 35 ಬಾಕಿ: ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಬಳ್ಳಾರಿ ತಾಲೂಕು 1257, ಹಡಗಲಿ 78, ಹ.ಬೊ.ಹಳ್ಳಿ 79, ಹೊಸಪೇಟೆ 522, ಕೂಡ್ಲಿಗಿ 137, ಸಂಡೂರು 224, ಸಿರುಗುಪ್ಪ 153, ಹರಪನಹಳ್ಳಿ 134 ಸೇರಿ ಅಂತ್ಯೋದಯ 145, ಬಿಪಿಎಲ್ 2439 ಸೇರಿ ಒಟ್ಟು 2584 ಪಡಿತರ ಚೀಟಿ ಅನರ್ಹ ಎಂದು ಆಹಾರ ಇಲಾಖೆ ಗುರುತಿಸಿದೆ.
ಈ ಪೈಕಿ ಪರಿಶೀಲನೆ ನಡೆಸಿರುವ ಆಹಾರ ಇಲಾಖೆ, ಹಗರಿಬೊಮ್ಮನಹಳ್ಳಿಯ 35 ಅನ್ನು ಹೊರತುಪಡಿಸಿ ಉಳಿದಂತೆ 2549 ಪಡಿತರ ಚೀಟಿಗಳನ್ನು ಎಪಿಎಲ್ ಗೆ ಪರಿವರ್ತಿಸಿ ಮೇ ತಿಂಗಳ ಪಡಿತರ ಧಾನ್ಯ ರದ್ದುಗೊಳಿಸಿದೆ. ಹ.ಬೊ.ಹಳ್ಳಿಯ 35 ಪಡಿತರ ಕಾರ್ಡ್‌ಗಳು ಪಡಿಶೀಲನೆ ನಡೆಯುತ್ತಿದೆ. ಆದರೆ, ವಾಹನ ಖರೀದಿ, ಮನೆ ನಿರ್ಮಾಣ ಸೇರಿ ಇನ್ನಿತರೆ ಸಾಲಸೌಲಭ್ಯಕ್ಕಾಗಿ ಬ್ಯಾಂಕ್‌ನವರು ಕೇಳಿದಂತೆ ಆದಾಯ ತೆರಿಗೆ ಪಾವತಿಸಿ ದಾಖಲೆ ಪಡೆದವರಿಗೂ ಇದರ ಬಿಸಿ ತಟ್ಟಿದ್ದು, ಅವರ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳು ಎಪಿಎಲ್‌ಗೆ ಪರಿವರ್ತನೆಯಾಗಿರುವುದು ಗಮನಾರ್ಹ.
ಈ ಕುಟುಂಬಗಳಿಗಿಲ್ಲ ಅಂತ್ಯೋದಯ-ಬಿಪಿಎಲ್: ರಾಜ್ಯ ಸರ್ಕಾರ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಕೆಲವೊಂದು ಮಾನದಂಡ ವಿಧಿ ಸಿದೆ. ಸರ್ಕಾರ, ಅನುದಾನಿತ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸ್ವಾಯತ್ತ ಸಂಸ್ಥೆಗಳ ಖಾಯಂ ನೌಕರರು, ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣಭೂಮಿ, ನೀರಾವರಿ ಹೊಂದಿರುವ ಕುಟುಂಬಗಳು, ನಗರ ಪ್ರದೇಶದಲ್ಲಿ ಸಾವಿರ ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಸ್ವಂತ ಮನೆ ಹೊಂದಿರುವ ಕುಟುಂಬಗಳು, ಜೀವನೋಪಾಯಕ್ಕಾಗಿ ಸ್ವತಃ ಓಡಿಸುವ ಟ್ರಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಸೇರಿ ನಾಲ್ಕು ಚಕ್ರ ಹೊಂದಿರುವ ಎಲ್ಲ ಕುಟುಂಬಗಳು, ಪ್ರತಿ ತಿಂಗಳು 150 ಯೂನಿಟ್‌ಗಿಂತಲೂ ಹೆಚ್ಚು ವಿದ್ಯುತ್ ಬಳಕೆ ಮಾಡುವ ಕುಟುಂಬಗಳು, ವಾರ್ಷಿಕ 1.20 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೋಂದಿರುವ ಕುಟುಂಬಗಳಿಗೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಅನರ್ಹ.
ಈ ಕುಟುಂಬಗಳನ್ನು ಆದ್ಯತೇತರ ವಲಯವೆಂದು ಪರಿಗಣಿಸಿರುವ ಸರ್ಕಾರ ಇಂತಹ ಕುಟುಂಬಗಳಿಗೆ ಎಪಿಎಲ್ ಪಡಿತರ ಕಾರ್ಡ್‌ಗಳನ್ನು ನೀಡುತ್ತಿದೆ. ಈ ಸೌಲಭ್ಯಗಳಿಗಿಂತಲೂ ಕಡಿಮೆಯುಳ್ಳ ಕುಟುಂಬಗಳನ್ನು ಆದ್ಯತಾ ವಲಯವೆಂದು ಗುರುತಿಸಿ, ಅಂತಹ ಕುಟುಂಬಗಳಿಗೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಿ, ಪಡಿತರ ಧಾನ್ಯ ವಿತರಿಸಲಾಗುತ್ತಿದೆ ಎಂದು ಆಹಾರ ಇಲಾಖೆಯ ಅ ಕಾರಿಗಳು ತಿಳಿಸಿದ್ದಾರೆ.
1500 ಪಡಿತರ ಚೀಟಿ ವಾಪಸ್: ಆಹಾರ ಇಲಾಖೆ ಈ ಹಿಂದೆಯೇ ಒಮ್ಮೆ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದಿದ್ದ ಅನರ್ಹರು ಹಿಂತಿರುಗಿಸುವಂತೆ ಕೋರಿತ್ತು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿತ್ತು. ಆಗ ಅಂತ್ಯೋದಯ, ಬಿಪಿಎಲ್ ಪಡಿತರ ಚೀಟಿ ಪಡೆದಿದ್ದ ಸರ್ಕಾರಿ ನೌಕರರು, ಆರ್ಥಿಕ ಸದೃಢರು ಇತರರು ಸ್ವಯಂ ಪ್ರೇರಣೆಯಿಂದ ಒಟ್ಟು 1500 ಪಡಿತರ ಚೀಟಿ ಹಿಂದುರುಗಿಸಿದ್ದರು.
ಅದರಂತೆ ಇದೀಗ ಪುನಃ ಮತ್ತೂಮ್ಮೆ ಹಿಂದುರುಗಿಸುವಂತೆ ಪ್ರಕಟಣೆ ಹೊರಡಿಸಿದ್ದು, ಅವ ಧಿಯನ್ನು ಜೂ.30ರ ವರೆಗೆ ವಿಸ್ತರಿಸಲಾಗಿದೆ.