Advertisement

ತಗ್ಗಿದ ಬೇಡಿಕೆ; ಬಿಟಿಪಿಎಸ್‌ ಮೂರು ಘಟಕ ಸ್ಥಗಿತ

09:49 PM May 31, 2021 | Team Udayavani |

„ವೆಂಕೋಬಿ ಸಂಗನಕಲ್ಲು

Advertisement

ಬಳ್ಳಾರಿ: ತಾಲೂಕಿನ ಕುಡತಿನಿ ಬಳಿಯ ಬಳ್ಳಾರಿ ವಿದ್ಯುತ್‌ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್‌ ಉತ್ಪಾದಿಸುವ ಮೂರು ಘಟಕಗಳು ಕಳೆದ 10 ದಿನಗಳಿಂದ ಸ್ಥಗಿತಗೊಂಡಿವೆ. ವಿದ್ಯುತ್‌ ಪೂರೈಕೆಗೆ ಸಂಬಂಧಿ ಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ಬೇಡಿಕೆ ನೀಡದ ಹಿನ್ನೆಲೆಯಲ್ಲಿ ಕೇಂದ್ರದ ಘಟಕಗಳು ಸದ್ಯಕ್ಕೆ ವಿದ್ಯುತ್‌ ಉತ್ಪಾದನೆ ಸ್ಥಗಿತಗೊಳಿಸಿವೆ.

ಬಳ್ಳಾರಿ ವಿದ್ಯುತ್‌ ಶಾಖೋತ್ಪನ್ನ ಕೇಂದ್ರದಲ್ಲಿ ಹಿಂದಿನ ಎರಡು ವರ್ಷಗಳು ಬೇಸಿಗೆಯಲ್ಲಿ ಕಲ್ಲಿದ್ದಲು ಮತ್ತು ನೀರಿನ ಕೊರತೆ ಎದುರಾಗಿತ್ತು. ಆದರೂ, ರಾಜ್ಯ ಸರ್ಕಾರ ಬೇಸಿಗೆ ದಿನಗಳಲ್ಲಿ ವಿದ್ಯುತ್‌ ಪೂರೈಕೆಗೆ ಸಂಬಂಧಿ ಸಿದಂತೆ ಕೇಂದ್ರಕ್ಕೆ ಬೇಡಿಕೆ ನೀಡುತ್ತಿತ್ತು. ಅದರಂತೆ ಕೇಂದ್ರದಲ್ಲೂ ಮೂರು ಘಟಕಗಳಿಂದ ವಿದ್ಯುತ್‌ ಉತ್ಪಾದಿಸಿ ಪೂರೈಸಲಾಗುತ್ತಿತ್ತು. ಈ ಬಾರಿಯೂ ಬೇಸಿಗೆ ದಿನಗಳಲ್ಲಿ ಸರ್ಕಾರ ಕೇಳಿದಷ್ಟು ವಿದ್ಯುತ್‌ ಉತ್ಪಾದಿಸಿ ಪೂರೈಸಲಾಗಿದೆ.

ಆದರೆ, ಬೇಸಿಗೆ ಕೊನೆ ದಿನಗಳಲ್ಲಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದು, ಜಲಮೂಲಗಳಿಂದ ವಿದ್ಯುತ್‌ ಉತ್ಪಾದನೆ ಆರಂಭವಾಗಿದೆ. ಜತೆಗೆ ಪವನ, ಸೋಲಾರ್‌ ವಿದ್ಯುತ್‌ ಅಗತ್ಯಕ್ಕೆ ತಕ್ಕಷ್ಟು ಲಭಿಸಿದ್ದರಿಂದ ರಾಜ್ಯ ಸರ್ಕಾರದಿಂದ ಬಿಟಿಪಿಎಸ್‌ಗೆ ಯಾವುದೇ ಬೇಡಿಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ 10 ದಿನಗಳಿಂದ ಕೇಂದ್ರದಲ್ಲಿನ ಮೂರು ಘಟಕಗಳು ಸ್ಥಗಿತಗೊಂಡಿದ್ದು ವಿದ್ಯುತ್‌ ಉತ್ಪಾದನೆಯನ್ನು ನಿಲ್ಲಿಸಿವೆ.

ಬಳ್ಳಾರಿ ವಿದ್ಯುತ್‌ ಶಾಖೋತ್ಪನ್ನ ಕೇಂದ್ರದಲ್ಲಿ 2,700 ಮೆಗಾವ್ಯಾಟ್‌ ಸಾಮರ್ಥ್ಯದ 1 ಘಟಕ ಸೇರಿ ಒಟ್ಟು ಮೂರು ಘಟಕಗಳಲ್ಲಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇದರಲ್ಲಿ 500 ಮೆಗಾವ್ಯಾಟ್‌ ಸಾಮರ್ಥ್ಯದ 1ನೇ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದು, ದುರಸ್ತಿ ಕಾರ್ಯ ನಡೆಯುತ್ತಿದೆ. ಘಟಕವನ್ನು ಪರೀûಾರ್ಥ ಎರಡು ದಿನಗಳ ಕಾಲ ಚಾಲನೆ ನೀಡಲಾಗುತ್ತಿದೆ.

Advertisement

ಯಶಸ್ವಿಯಾದಲ್ಲಿ ಮೂರು ಘಟಕಗಳು ವಿದ್ಯುತ್‌ ಉತ್ಪಾದಿಸಲು ಸಿದ್ಧವಾಗಿರಲಿವೆ. ರಾಜ್ಯ ಸರ್ಕಾರದಿಂದ ಬೇಡಿಕೆ ನೀಡುವುದೊಂದೆ ಬಾಕಿ ಇದೆ. ಆದರೆ, ರಾಜ್ಯದಲ್ಲಿ ಸೋಲಾರ್‌, ಪವನ ಶಕ್ತಿಯಂತಹ ಪರ್ಯಾಯ ಮೂಲಗಳಿಂದ ವಿದ್ಯುತ್‌ ಉತ್ಪಾದನೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಪರಿಣಾಮ ರಾಜ್ಯ ಸರ್ಕಾರ ವಿದ್ಯುತ್‌ ಪೂರೈಸುವಂತೆ ಬಿಟಿಪಿಎಸ್‌ಗೆ ನೀಡುವ ಬೇಡಿಕೆಯೂ ಕಡಿಮೆಯಾಗುತ್ತಿದೆ.

ಆದರೂ, ಮೂರು ಘಟಕಗಳನ್ನು ಸದಾ ಸಿದ್ಧವಾಗಿರಲಿವೆ. ಸರ್ಕಾರದಿಂದ ಬೇಡಿಕೆ ಬಂದಾಕ್ಷಣ ವಿದ್ಯುತ್‌ ಉತ್ಪಾದಿಸಿ ಪೂರೈಸಲಾಗುವುದು ಎಂದು ಬಿಟಿಪಿಎಸ್‌ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

3ನೇ ಘಟಕ ಚಾಲನೆ: ಬಿಟಿಪಿಎಸ್‌ನಲ್ಲಿ ಮೂರು ಘಟಕಗಳಲ್ಲಿ ಎರಡು ಮತ್ತು ಮೂರನೇ ಘಟಕಗಳು ಸದ್ಯ ವಿದ್ಯುತ್‌ ಉತ್ಪಾದನೆಗೆ ಸಿದ್ಧ ಇವೆ. ಕೆಪಿಟಿಸಿಎಲ್‌ ನವರು 700 ಮೆಗಾವ್ಯಾಟ್‌ ಸಾಮರ್ಥ್ಯದ ಮೂರನೇ ಘಟಕವನ್ನು ಆರಂಭಿಸಿ ವಿದ್ಯುತ್‌ ಉತ್ಪಾದಿಸುವಂತೆ ಸೂಚಿಸಿದ್ದಾರೆ.

ಆದರೆ, ಎಷ್ಟು ವಿದ್ಯುತ್‌ ಉತ್ಪಾದಿಸಿ ಪೂರೈಸಬೇಕು ಎಂಬುದು ತಿಳಿದಿಲ್ಲ. ಅವರ ಸೂಚನೆಯಂತೆ ಘಟಕ ಆರಂಭಿಸಿ ಕಾರ್ಯಾರಂಭ ಮಾಡಲಾಗುವುದು ಎಂದು ಬಿಟಿಪಿಎಸ್‌ನ ಕಾರ್ಯನಿರ್ವಾಹಕ ಅಧಿ ಕಾರಿ ಪ್ರೇಮನಾಥ್‌ ತಿಳಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next