Advertisement

ನೀರಾವರಿಗೆ ಆದ್ಯತೆ: ಭೀಮಾನಾಯ್ಕ

04:25 PM Jan 27, 2021 | Team Udayavani |

ಹಗರಿಬೊಮ್ಮನಹಳ್ಳಿ: ರೈತರ ಬದುಕು ಹಸನಾಗಿಸುವ ಮೂಲ ಉದ್ದೇಶದಿಂದ ತಾಲೂಕಿನ ಮಾಲವಿ ಜಲಾಶಯ ಹಾಗೂ ಚಿಲವಾರು ಬಂಡಿ ಏತನೀರಾವರಿ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು ಆಗಸ್ಟ್‌ ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಶಾಸಕ ಭೀಮಾನಾಯ್ಕ ಹೇಳಿದರು.

Advertisement

ಪಟ್ಟಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಜಗತ್ತಿಗೆ ಅತ್ಯಂತ ಶ್ರೇಷ್ಠ ಸಂವಿಧಾನ ನೀಡಿದ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ಆಶಯಗಳನ್ನು ಕೇಂದ್ರ ಸರಕಾರ ಗಾಳಿಗೆ ತೂರಿದೆ. ಇಂದಿಗೂ ರೈತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಆಳುವ ಸರಕಾರಗಳು ನಿರ್ಲಕ್ಷ ನಿರ್ವಹಿಸಿರುವುದು ದುರಂತದ ಸಂಗತಿ. ರಾಜ್ಯ ಸರಕಾರ ಕ್ಷೇತ್ರವಾರು ಅನುದಾನ ಒದಗಿಸುವಲ್ಲಿ ಪಕ್ಷಪಾತ
ನಡೆಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಪೆಟ್ಟು ನೀಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಹಶೀಲ್ದಾರ್‌ ಶರಣಮ್ಮ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ತಾಪಂ ಇಒ ಹಾಲಸಿದ್ದಪ್ಪ ಸಿ. ಪೂಜೇರಿ, ಮುಖ್ಯವೈದ್ಯಾಧಿಕಾರಿ ಡಾ|ಶಂಕರನಾಯ್ಕ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ| ಜಿ. ಪರಮೇಶ್ವರ್‌, ಗ್ರಾಮಲೆಕ್ಕಾಧಿಕಾರಿ ಚನ್ನಬಸಪ್ಪ ಗಡಾದ್‌, ಪೊಲೀಸ್‌ ಪೇದೆ ಪ್ರಕಾಶ ನಾಯಕ ಇವರನ್ನು ಸನ್ಮಾನಿಸಲಾಯಿತು.

ತಾಪಂ ಅಧ್ಯಕ್ಷೆ ನಾಗಮ್ಮ, ಉಪಾಧ್ಯಕ್ಷೆ ಬಿಕ್ಯಾಮುನಿಬಾಯಿ, ಪುರಸಭೆ ಅಧ್ಯಕ್ಷೆ ಕವಿತಾ ಹಾಲ್ದಾಳ್‌ ವಿಜಯಕುಮಾರ್‌, ಉಪಾಧ್ಯಕ್ಷ ಹುಳ್ಳಿ ಮಂಜುನಾಥ, ಸದಸ್ಯರಾದ ಅಲ್ಲಾಭಕ್ಷಿ, ಜಾಹಿದಾ ರಹೇಮಾನ್‌, ಶಿಕ್ಷಕರ ಸಂಘದ ಅಧ್ಯಕ್ಷ ಲೋಕಪ್ಪ, ಮುಖಂಡರಾದ ಅಕ್ಕಿ ತೋಟೇಶ್‌, ಚಿಂತ್ರಪಳ್ಳಿ ದೇವೆಂದ್ರ, ಕನ್ನಿಹಳ್ಳಿ ಚಂದ್ರಶೇಖರ, ಹೆಗಾಳ್‌ ರಾಮಣ್ಣ ಇತರರಿದ್ದರು. ಬಿಇಒ ಶೇಖರಪ್ಪ ಹೊರಪೇಟೆ, ಬರಹಗಾರ ಪರಮೇಶ್ವರಯ್ಯ ಸೊಪ್ಪಿಮಠ, ಶಿಕ್ಷಕ ಎಸ್‌.ಕೊಟ್ರೇಶ್‌ ನಿರೂಪಿಸಿದರು.

ಓದಿ :    ಸ್ವೇಚ್ಛಾಚಾರಕ್ಕೆ ಸಂವಿಧಾನ ಬಳಕೆ ಬೇಡ

Advertisement

Udayavani is now on Telegram. Click here to join our channel and stay updated with the latest news.

Next