ಸಂಡೂರು: ಜಿಲ್ಲಾಧಿಕಾರಿ ಪವನ್‌ಕುಮಾರ್ ಮಾಲಪಾಟಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯಾನಿರ್ವಾಹಕ ಅ ಧಿಕಾರಿ ಕೆ.ಆರ್. ನಂದಿನಿ ನೇತೃತ್ವದಲ್ಲಿ ಅಧಿಕಾರಿಗಳು ತಾಲೂಕಿನ ವಿವಿಧ ಕೋವಿಡ್ ಆರೈಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಮಾಲಪಾಟಿ ಮಾತನಾಡಿ, ತಾಲೂಕಿನ ಮೆಟ್ರಕಿ ಮೊರಾರ್ಜಿ ವಸತಿ ಶಾಲೆಯನ್ನು ತಾತ್ಕಾಲಿಕ ಕೋವಿಡ್ ಕೇಂದ್ರವಾಗಿ ಪರಿವರ್ತಿಸಲಾಗಿದೆ. ಅಲ್ಲಿ 80 ಬೆಡ್ ವ್ಯವಸ್ಥೆ ಇದ್ದು, ಪ್ರಸ್ತುತವಾಗಿ 30 ರೋಗಿಗಳು ದಾಖಲಾಗಿದ್ದಾರೆ.
ಅದರಲ್ಲಿ ಬುಧವಾರ 2 ರೋಗಿಗಳು ದಾಖಲಾಗಿದ್ದಾರೆ. ಅವರಲ್ಲಿ 20 ಪುರುಷರು ಮತ್ತು 10 ಮಹಿಳಾ ರೋಗಿಗಳ ಇದ್ದಾರೆ ಎಂದರು. ಬಂಡ್ರಿ ಮೊರಾರ್ಜಿ ವಸತಿ ಶಾಲೆಯ ಕೇಂದ್ರಕ್ಕೆ ಭೇಟಿ ನೀಡಿದ ತಹಶೀಲ್ದಾರ್ ರಶ್ಮಿ ಅವರು ಮಾಹಿತಿ ನೀಡಿ, ಒಟ್ಟು 80 ರೋಗಿಗಳಿಗೆ ಅವಕಾಶವಿದೆ. ಪ್ರಸ್ತುತ 59 ರೋಗಿಗಳು ದಾಖಲಾಗಿದ್ದು, ಇದರಲ್ಲಿ 41 ಪುರುಷರು ಮತ್ತು 18 ಮಹಿಳಾ ರೋಗಿಗಳಿದ್ದಾರೆ. ಬುಧವಾರ 9 ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಇಲ್ಲಿಯವರೆಗೆ ಈ ಕೇಂದ್ರದಿಂದ ಒಟ್ಟು 33 ರೋಗಿಗಳು ಗುಣಮುಖರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಚೋರುನೂರು ಮೊರಾರ್ಜಿ ವಸತಿ ಶಾಲೆಯ ಕೇಂದ್ರದಲ್ಲಿಯೂ ಸಹ 80 ರೋಗಿಗಳಿಗೆ ಬೆಡ್ ವ್ಯವಸ್ಥೆ ಇದ್ದು, ಬುಧವಾರ ಒಬ್ಬರು ದಾಖಲಾಗಿದ್ದಾರೆ. ಪ್ರಸ್ತುತ 11 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು 5 ರೋಗಿಗಳು ಗುಣಮುಖರಾಗಿದ್ದಾರೆ. ತಾಲೂಕಿನ ಭುಜಂಗನಗರ ಕೇಂದ್ರದಲ್ಲಿ 10 ಬೆಡ್‌ಗಳ ವ್ಯವಸ್ಥೆ ಇದ್ದು, ಏಳು ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ತಂಡದಲ್ಲಿ ತಾಲೂಕು ವೈದ್ಯಾ ಧಿಕಾರಿ ಡಾ| ಕುಶಾಲ, ಜಿಪಂ ಸಿಇಒ ಅ ಧಿಕಾರಿ ನಂದಿನಿ, ರಮೇಶ್ ಕೋನಾರಡ್ಡಿ, ತಾಪಂ ಇಒ, ಅ ಧಿಕಾರಿಗಳು ಇದ್ದರು.