Advertisement

ಸಂಪೂರ್ಣ ಲಾಕ್‌ಡೌನ್‌ ಮುಂದುವರಿಕೆ

09:20 PM May 23, 2021 | Team Udayavani |

ಬಳ್ಳಾರಿ: ಕೋವಿಡ್‌ ಸೋಂಕನ್ನು ನಿಯಂತ್ರಿಸಲು ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಸಂಪೂರ್ಣ ಲಾಕ್‌ಡೌನ್‌ ನನ್ನು ಸರ್ಕಾರದ ಆದೇಶದಂತೆ ಜೂ.7ರವರೆಗೆ ಮುಂದುವರಿಸುವುದರ ಜತೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಮೇ 24, 25 ರಂದು ಎರಡು ದಿನಗಳ ಕಾಲ ಬೆಳಗ್ಗೆ 6 ರಿಂದ ಮಧ್ಯಾಹ್ನ 12ಗಂಟೆವರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ ಹೇಳಿದರು.

Advertisement

ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್‌ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮೇ 24ರವರೆಗೆ ಬೆಳಗ್ಗೆ 6 ರಿಂದ 10ವರೆಗೆ ವಿನಾಯಿತಿ ನೀಡಿ ಲಾಕ್‌ಡೌನ್‌ ವಿಧಿ ಸಿತ್ತು. ಆದರೆ, ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮೇ 19 ರಂದು ಬೆಳಗ್ಗೆ 6ರಿಂದ 10ರವರೆಗೆ ವಿನಾಯಿತಿ ನೀಡಿ ಮೇ 24 ಬೆಳಗ್ಗೆ 6 ಗಂಟೆವರೆಗೆ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿತ್ತು.

ಪರಿಣಾಮ ಜಿಲ್ಲೆಯಲ್ಲಿ ಪಾಸಿಟಿವ್‌ ಪ್ರಕರಣಗಳು ಒಂದಷ್ಟು ಕಡಿಮೆಯಾಗಿವೆ. ಹಾಗಾಗಿ ಮೇ 24, 25 ಮತ್ತು ಮೇ 31 ರಂದು ಈ ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ 12 ಗಂಟೆವರೆಗೆ ತರಕಾರಿ, ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಿ, ನಂತರ ಪುನಃ ಮೇ 31ರವರೆಗೆ ಸಂಪೂರ್ಣ ಲಾಕ್‌ಡೌನ್‌ ಜಾರಿಗೊಳಿಸಲಾಗುವುದು ಎಂದವರು ವಿವರಿಸಿದರು. ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ಮೇ 24, 25, 31 ರಂದು ಮೂರು ದಿನಗಳು ತರಕಾರಿ ಖರೀದಿಗೆ ಬೆಳಗ್ಗೆ 6 ರಿಂದ 10ಗಂಟೆವರೆಗೆ ಇದ್ದ ಸಮಯವನ್ನು 2 ಗಂಟೆಕಾಲ ಹೆಚ್ಚುವರಿಯಾಗಿ ವಿಸ್ತರಿಸಲಾಗಿದೆ.

ತರಕಾರಿ ಕಾಲಿಯಾಗಲಿದೆಯೋ ಅಥವಾ ದಿನಸಿ ಅಂಗಡಿ ಮುಚ್ಚಲಿದೆಯೋ ಎಂದು ಗಾಬರಿಯಾಗಿ ಎಸ್‌ಎಂಎಸ್‌ ಪಾಲಿಸದೆ ಜನರು ಮುಗಿಬೀಳದಿರಲಿ ಎಂಬ ಉದ್ದೇಶದಿಂದ ಅಗತ್ಯ ವಸ್ತುಗಳ ಖರೀದಿಗೆ ನಿಗದಿತ ದಿನಗಳಂದು ಮಧ್ಯಾಹ್ನ 12 ಗಂಟೆವರೆಗೆ ವಿಸ್ತರಿಸಲಾಗಿದೆ. ಅಲ್ಲದೇ, ತರಕಾರಿಗಳನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿದ್ದು ನನ್ನ ಗಮನಕ್ಕೆ ಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಪಂ ಸಿಇಒ ಕೆ.ಆರ್‌.ನಂದಿನಿ ಮಾತನಾಡಿ, ಕೋವಿಡ್‌ ಸೋಂಕು ಗ್ರಾಮೀಣ ಭಾಗಕ್ಕೂ ವ್ಯಾಪಿಸಿದೆ. ಇದನ್ನು ನಿಯಂತ್ರಿಸುವ ಸಲುವಾಗಿ ಗ್ರಾಮ ಮಟ್ಟದಲ್ಲಿ ಕುಟುಂಬ ಆರೋಗ್ಯ ಸಂರಕ್ಷಣಾ ತಂಡವನ್ನು ರಚಿಸಿ, ಪ್ರತಿ 50 ಕುಟುಂಬಕ್ಕೆ ಒಬ್ಬ ಸ್ವಯಂ ಸೇವಕರನ್ನಾಗಿ ನೇಮಿಸಿದೆ. ಸ್ವಯಂ ಸೇವಕರು ತಮ್ಮ ವ್ಯಾಪ್ತಿಯ ಕುಟುಂಬಗಳ ಮೇಲೆ ಪ್ರತಿದಿನ ನಿಗಾ ವಹಿಸಲಿದ್ದು, ಯಾರಿಗಾದರೂ ಜ್ವರ, ಕೆಮ್ಮು, ನೆಗಡಿ ಕಂಡುಬಂದಲ್ಲಿ ಮೂರು ದಿನಗಳಿಗೆ ಜನರಲ್‌ ಕಿಟ್‌ ವಿತರಿಸಲಿದ್ದಾರೆ. ವಾಸಿಯಾಗದಿದ್ದಲ್ಲಿ ಕೋವಿಡ್‌ ಪರೀಕ್ಷಿಸಿ, ಪಾಸಿಟಿವ್‌ ಬಂದಲ್ಲಿ ಮುಂದಿನ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

Advertisement

ಬಳ್ಳಾರಿ/ವಿಜಯನಗರ ಜಿಲ್ಲೆಗಳಲ್ಲಿ ಪ್ರಸಕ್ತ ವರ್ಷ ನರೇಗಾ ಕೆಲಸ ಶೇ.50 ರಷ್ಟು ಗುರಿ ತಲುಪಿಸಲಾಗಿದೆ. ಉಭಯ ಜಿಲ್ಲೆಗಳ ಮೂರು ಗ್ರಾಪಂಗಳನ್ನು ಹೊರತುಪಡಿಸಿ ಎಲ್ಲ ಗ್ರಾಪಂಗಳಿಗೂ ಸೋಂಕು ವ್ಯಾಪಿಸಿದೆ. ಕೆಲವೊಂದು ಗ್ರಾಪಂಗಳಲ್ಲಿ 100 ರಿಂದ 150 ಜನರಿಗೆ ಸೋಂಕು ಆವರಿಸಿದೆ. ಅಂತಹ ಗ್ರಾಮಗಳ ಜನರಿಗೆ ಫಾರ್ಮ್ ನಂ.6 ಪಡೆಯಲಾಗುವುದು. ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಅವರಿಗೆ ವೈಯಕ್ತಿಕ ಕೆಲಸ ನೀಡಲಾಗುವುದು ಎಂದು ವಿವರಿಸಿದರು.

ಎಸ್‌ಪಿ ಸೈದುಲು ಅಡಾವತ್‌ ಮಾತನಾಡಿ, ಉಭಯ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಕೋವಿಡ್‌ ನಿಯಮ ಉಲ್ಲಂಘಿಸಿದ 434 ಜನರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, 9500 ವಾಹನಗಳನ್ನು ಸೀಜ್‌ ಮಾಡಲಾಗಿದೆ. 44 ಲಕ್ಷ ರೂ. ಗಳನ್ನು ದಂಡ ಸಂಗ್ರಹಿಸಲಾಗಿದೆ. ಇನ್ನು ವಾಟ್‌ Õಆ್ಯಪ್‌ಗ್ಳಲ್ಲೇ ಆರ್ಡರ್‌ ಪಡೆದು ಮನೆಮನೆಗೆ ತರಕಾರಿ ಸರಬರಾಜು ಮಾಡುವಂತೆ ವರ್ತಕರ ಸಂಘಟನೆಗಳೊಂದಿಗೆ ಚರ್ಚಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next