Advertisement

ಕೋವಿಡ್‌ ನಿಭಾಯಿಸುವಲ್ಲಿ ಡಿಎಂಎಫ್‌ ಅನುದಾನ ಬಳಕೆ

04:11 PM Jan 27, 2021 | Team Udayavani |

ಬಳ್ಳಾರಿ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವವನ್ನು ಮಂಗಳವಾರ ಆಚರಿಸಲಾಯಿತು. ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್‌ ಅವರು ಧ್ವಜಾರೋಹಣ ನೆರವೇರಿಸಿದರು. ತೆರೆದ ವಾಹನದಲ್ಲಿ ತೆರಳಿ ಗೌರವ ವಂದನೆ, ನಂತರ ನಡೆದ ಪಥಸಂಚನದಲ್ಲಿ ಧ್ವಜವಂದನೆ ಸ್ವೀಕರಿಸಿದರು.
ನಂತರ ಗಣರಾಜ್ಯೋತ್ಸವ ಭಾಷಣ ಮಾಡಿದ ಸಚಿವ ಆನಂದ್‌ಸಿಂಗ್‌ ಅವರು, ಸುಮಾರು 20 ಕೋಟಿ ರೂ. ಅನುದಾನವನ್ನು ಜಿಲ್ಲಾ ಖನಿಜ ನಿಧಿ ಯಿಂದ ಕೋವಿಡ್‌ ಸಂಬಂಧ ಭರಿಸಲಾಗಿದೆ. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಡಿಎಂಎಫ್‌ ಅನುದಾನ ಉಪಯುಕ್ತವಾಗಿದೆ. ಡಿಎಂಎಫ್‌
ಅನುದಾನದಲ್ಲಿ 11 ಕೋಟಿ ರೂಗಳನ್ನು ಅಟಲ್‌ ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ ಅಭಿವೃದ್ಧಿಗೆ ಕಾಯ್ದಿರಿಸಲಾಗಿದ್ದು, ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜಿಸಲು ಸಹಕಾರಿಯಾಗಲಿವೆ ಎಂದರು.

Advertisement

ಹಾಲಿ/ಮಾಜಿ ಯೋಧರಿಗೆ ಹಕ್ಕು ಪತ್ರ ವಿತರಣೆ:
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಯೋಧರಾದ ಕೂಡ್ಲಿಗಿ ತಾಲೂಕಿನ ಲೋಕಿಕೆರೆಯ ಶಕೀಲ್‌ ಬಾಷಾ, ಸಿಂಗೇರಿಯ ಅಲ ರ್ಡ್‌ ತ್ಯಾಗರಾಜ್‌ ಮತ್ತು ಸುಬೇದಾರ್‌ ಚೆನ್ನಪ್ಪ ಕ್ಸೇವಿಯರ್‌, ಕೊಳೂರು ಗ್ರಾಮದ ಆರ್‌. ನಾಗರಾಜ್‌, ಶಿಡಿಗಿನಮೊಳದ ಜೆ.ಕುಮಾರ್‌ಸ್ವಾಮಿ, ಕಮಲಾಪುರದ ಐ.ವಿಜಯ್‌ ಕುಮಾರ್‌ ರೆಡ್ಡಿ ಮತ್ತು ಶಶಿಕುಮಾರ್‌, ಹೊಸಪೇಟೆ ತಾಲೂಕು ನಂದಿಬಂಡೆಯ ಎಸ್‌.ವೆಂಕಟೇಶಲು, ಹೊಳಲು ಗ್ರಾಮದ ಎಂ.
ಮುದುಕಪ್ಪ, ಹಳೇಕೋಟೆಯ ಶ್ರೀನಿವಾಸ್‌, ಎಚ್‌.ಬಿ. ಹಳ್ಳಿ ತಾಲೂಕು ಹನಸಿ ಗ್ರಾಮದ ಎಂ.ಕೆ.ಸಯ್ಯದ್‌ ಅವರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದ ಹಕ್ಕು ಪತ್ರಗಳನ್ನು ವಿತರಿಸಲಾಯಿತು.

ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ: ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಡಾ| ಕೆ. ನಾಗರತ್ನ ಸುಯಜ್ಞ ಮತ್ತು ಸಮಾಜ ಸೇವೆ ಮೂಲಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಕೂಡ್ಲಿಗಿಯ ಊರಮ್ಮ ದೇವಿ ಟ್ರಸ್ಟ್‌ ಮಾಜಿ ದೇವದಾಸಿಯರು, 2020-21ನೇ ಸಾಲಿನಲ್ಲಿ ಸನ್ಮಾನ ಸ್ವೀಕರಿಸಿದ ಹಾವು ಹಾಗೂ ವನ್ಯಜೀವಿ ಸಂರಕ್ಷಕ ಬಳ್ಳಾರಿಯ ಸಮೀರ್‌ ಶೇಟ್‌, 2019-20ನೇ ಸಾಲಿನಲ್ಲಿ ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಪಡೆದ ಆಕಾಶ್‌ ಮತ್ತು ರಾಜ್ಯಮಟ್ಟದ 18 ವರ್ಷದ ಮಹಿಳೆಯರ ಗುಂಡು ಎಸೆತದಲ್ಲಿ ಬಂಗಾರದ ಪದಕ ಪಡೆದ ಪಿ. ಕೀರ್ತಿ ಅವರನ್ನು ಸನ್ಮಾನಿಸಲಾಯಿತು.

ಜತೆಗೆ ಕೋವಿಡ್‌ ಸಂದರ್ಭದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಗಮನಸೆಳೆದ ವಿಮ್ಸ್‌,ಜಿಲ್ಲಾಸ್ಪತ್ರೆ, ಹೊಸಪೇಟೆ ತಾಲೂಕು ಆಸ್ಪತ್ರೆ, ದೀಪಾಲಿ ಆಸ್ಪತ್ರೆಗಳ ಪ್ರತಿನಿಧಿ ಗಳನ್ನು ಸಹ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸದ ವೈ. ದೇವೇಂದ್ರಪ್ಪ, ರಾಜ್ಯಸಭೆ ಸದಸ್ಯ ಸೈಯದ್‌ ನಾಸೀರ್‌ ಹುಸೇನ್‌, ಶಾಸಕರಾದ ಕೆ.ಸಿ. ಕೊಂಡಯ್ಯ, ಸೋಮಶೇಖರರೆಡ್ಡಿ, ನಾಗೇಂದ್ರ, ಅಲ್ಲಂ ವೀರಭದ್ರಪ್ಪ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹನುಮಂತಪ್ಪ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌, ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜನಾಥ, ಜಿಲ್ಲಾ ಧಿಕಾರಿ ಪವನಕುಮಾರ್‌ ಮಾಲಪಾಟಿ, ಜಿಪಂ ಸಿಇಒ ಕೆ.ಆರ್‌. ನಂದಿನಿ, ಎಸ್ಪಿ ಸೈದುಲು ಅಡಾವತ್‌, ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್‌, ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಇತರರಿದ್ದರು.

ಓದಿ :    ರೈತರಿಂದ ಟ್ರ್ಯಾಕ್ಟರ್‌ ಜನತಾ ಪರೇಡ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next