Advertisement
ಸಿರುಗುಪ್ಪ: ತಾಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆದ ರೈತರ ಭವಿಷ್ಯ ದಲ್ಲಾಳಿಗಳ ಕೈಯಲ್ಲಿದ್ದು, ದಲ್ಲಾಳಿಗಳು ನಿಗದಿ ಮಾಡಿದ ದರದಲ್ಲಿಯೇ ಭತ್ತ ಮಾರಾಟವಾಗುತ್ತಿದ್ದು ಭತ್ತ ಬೆಳೆದ ರೈತರಿಗೆ ಉತ್ತಮ ಬೆಲೆ ದೊರೆಯದೆ ಭತ್ತವನ್ನು ಯಾಕಾದರು ಬೆಳೆದೇವೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
Related Articles
Advertisement
ಖರೀದಿ ಕೇಂದ್ರದಲ್ಲಿ ಈ ವರ್ಷ ಬೇಸಿಗೆ ಹಂಗಾಮಿನ ಭತ್ತ ಖರೀದಿ ಮಾಡಲಾಗುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಯಾವುದೇ ಅಧಿ ಕಾರಿಗಳು ಸ್ಪಷ್ಟವಾದ ಮಾಹಿತಿಯನ್ನು ನೀಡದೇ ಇರುವುದರಿಂದ ನೋಂದಣಿ ಮಾಡಿಸಿದ ರೈತರು ಭತ್ತ ಖರೀದಿ ಕೇಂದ್ರಕ್ಕೆ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ, ತಹಶೀಲ್ದಾರ್ ಕಚೇರಿಗೆ ಅಲೆಯುವಂತಾಗಿದೆ.
ಕಳೆದ ಮುಂಗಾರು ಹಂಗಾಮಿನಲ್ಲಿ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ಆರಂಭಿಸಿದ್ದರಿಂದ ಮುಕ್ತ ಮಾರುಕಟ್ಟೆಯಲ್ಲಿ, ಖರೀದಿ ಕೇಂದ್ರದಲ್ಲಿ ದೊರೆಯುವ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ಭತ್ತ ಮಾರಾಟವಾಗಿತ್ತು. ಬೇಸಿಗೆ ಹಂಗಾಮಿನ ಭತ್ತ ಖರೀದಿಗೆ ನೋಂದಣಿ ಮಾಡಿಸಿದ್ದೇವೆ, ಆದರೆ ಖರೀದಿ ಇನ್ನೂ ಪ್ರಾರಂಭವಾಗಿಲ್ಲ.
ಭತ್ತ ಖರೀದಿ ಮಾಡುತ್ತೀರಾ ಇಲ್ಲವೆ ಎಂದು ಸಂಬಂ ಧಿಸಿದ ಇಲಾಖೆಗಳ ಅಧಿ ಕಾರಿಗಳನ್ನು ಕೇಳಿದರೆ ಯಾರು ಸರಿಯಾದ ಮಾಹಿತಿ ನೀಡುತ್ತಿಲ್ಲವೆಂದು ಭತ್ತ ಖರೀದಿಗೆ ನೋಂದಣಿ ಮಾಡಿಸಿದ ಅನೇಕ ರೈತರು ದೂರುತ್ತಾರೆ.