ಸಂಡೂರು: ಸನಾತನ ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶ್ರೀ ಶಂಕರಾಚಾರ್ಯರು ಒಬ್ಬರು ಎಂದು ಶಂಕರಮಠದ ಬಾಲಕೃಷ್ಣ ಕುಲಕರ್ಣಿ ಅಭಿಪ್ರಾಯಿಸಿದರು.
ಅವರು ಪಟ್ಟಣದ ಶಂಕರಮಠದಲ್ಲಿ ಶಂಕರಾಚಾರ್ಯ ಜಯಂತಿ ಅಂಗವಾಗಿ ಸಾಂಕೇತಿಕವಾಗಿ ಪೂಜೆ ಸಲ್ಲಿಸಿ ಮಾತನಾಡಿ, ಶಂಕರಾಚಾರ್ಯರು ಅದ್ವೈತ ತತ್ವವನ್ನು ಪ್ರತಿಪಾದಿಸುತ್ತ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು.
ಶೈವ, ವೈಷ್ಣವ, ಶಾಕ್ತ, ಗಾಣಪತ್ಯ, ಸೌರ ಹಾಗೂ ಸ್ಕಂಧ ಮತಗಳನ್ನು ಒಗ್ಗೂಡಿಸಿದರು. ಆದಿಶಂಕರರು ಭಗವದ್ಗೀತೆ, ಉಪನಿಷತ್ ಹಾಗೂ ಧರ್ಮಸೂತ್ರಗಳಿಗೆ ಭಾಷ್ಯ ಬರೆದ ಮೊದಲ ಆಚಾರ್ಯರಾದರು ಎಂದರು.
ಬ್ರಾಹ್ಮಣ ಸಮಾಜದ ವತಿಯಿಂದ ಎಲ್ಲ ಕೋಮಿನ ದೇವಸ್ಥಾನಗಳ ಕರ್ಮಚಾರಿಗಳಿಗೆ, ಮಸೀದಿ, ಚರ್ಚ್ ಹಾಗೂ ಇನ್ನಿತರ ಎಲ್ಲ ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಆಹಾರದ ಕಿಟ್ ಗಳನ್ನು ನೀಡಲಾಗುವುದು ಎಂದು ಬ್ರಾಹ್ಮಣ ಸಮಾಜದ ಕಾರ್ಯದರ್ಶಿ ಚಿದಂಬರ ನಾನಾವಟೆ ತಿಳಿಸಿದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಕುಲಕರ್ಣಿ, ಶ್ರೀಪಾದ ಕುಲಕರ್ಣಿ, ಅರುಣ್ ಕರ್ಮಾಕರ್, ಎಚ್.ಕೆ.ರಘು, ವೆಂಕಟೇಶ್ ತಾಮ್ರಫರ್ಣಿ, ಶ್ರೀಧರ್ ಭಟ್, ಗುರುರಾಜ್ ಷರಾಫ್ ಹಾಗೂ ಶ್ರೀಕುಮಾರಶಾಸ್ತ್ರಿ, ರಾಘವೇಂದ್ರ ಘೋಷಿ ಚಿದಂಬರ ನಾನಾವಟೆ ಸಂಡೂರು: ಶಂಕರ ಮಠದಲ್ಲಿ ಶಂಕರಾಚಾರ್ಯರ ಜಯಂತಿ ಆಚರಿಸಲಾಯಿತು. ಇದ್ದರು.