Advertisement

20 ಬೆಡ್‌ಗಳಿಗೆ ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ

09:01 PM May 18, 2021 | Team Udayavani |

ಹಗರಿಬೊಮ್ಮನಹಳ್ಳಿ: ಪಟ್ಟಣದ ನೂರು ಹಾಸಿಗೆಯ ಆಸ್ಪತ್ರೆಯ 20ಬೆಡ್‌ಗಳಿಗೆ ಆಕ್ಸಿಜನ್‌ ಸಿಲಿಂಡರ್‌ ಗಳನ್ನು ವೈಯಕ್ತಿಕವಾಗಿ ನೀಡಿದ್ದೇನೆ ಎಂದು ಶಾಸಕ ಎಸ್‌.ಭೀಮಾನಾಯ್ಕ ತಿಳಿಸಿದರು.

Advertisement

ಪಟ್ಟಣದ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಲಿಂಡರ್‌ ಜೊತೆಗೆ ಶೀಘ್ರದಲ್ಲಿ ಪೊÉàಮೀಟರ್‌ನ್ನು ನೀಡಲಾಗುವುದು. ಪೊÉàಮೀಟರ್‌ಗೆ ಬಹಳ ಡಿಮ್ಯಾಂಡ್‌ ಇರುವುದರಿಂದ ಸದ್ಯಕ್ಕೆ ಸಿಕ್ಕಿಲ್ಲ, ಮುಂದಿನ ದಿನಗಳಲ್ಲಿ ಅಗತ್ಯವಾಗಿ 50ಪೊ ಮೀಟರ್‌ಗಳನ್ನು ವೈಯಕ್ತಿಕವಾಗಿ ನೀಡಲಾಗುವುದು. ವರಲಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 50 ಆಕ್ಸಿಜನ್‌ ಬೆಡ್‌ ಗಳನ್ನು ಕೊಡಲೇ ರೋಗಿಗಳಿಗೆ ಒದಗಿಸಲಾಗುವುದು. ಕೊರೊನಾ ಟೆಸ್ಟ್‌ ಕಡಿಮೆಯಾದಂತೆ ಕೊರೊನಾ ಸಂಖ್ಯೆ ಕಡಿಮೆಯಾಗುತ್ತದೆ. ಆರ್‌ಟಿಪಿಸಿಆರ್‌ ಮೆಸೇಜ್‌ ಕೂಡಲೇ ಬರದಿರುವುದರಿಂದ ಕೊರೊನಾ ಸಂಖ್ಯೆ ಹೆಚ್ಚಾಗುವುದಕ್ಕೆ ಕಾರಣವಾಗಿದೆ.

ವೈರಸ್‌ನ್ನು ನಿರ್ಲಕ್ಷ ಮಾಡದೆ ಧೈರ್ಯದಿಂದ ಎದುರಿಸೋಣ. ತಂಬ್ರಹಳ್ಳಿ ಸೀಲ್‌ಡೌನ್‌ ಆಗಿರುವುದು ಬೇಸರ ತರಿಸಿದೆ. ಎರಡು ದಿನದೊಳಗೆ ತಂಬ್ರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು. ತಂಬ್ರಹಳ್ಳಿಯನ್ನು ಕೊರೊನಾ ಮುಕ್ತ ಮಾಡುವುದಕ್ಕೆ ಪ್ರಯತ್ನ ಮಾಡಲಾಗುವುದು. 20 ಕೋಟಿ ರೂ. ಮೊತ್ತದಲ್ಲಿ ಪಟ್ಟಣದ ಹೊರವಲಯದಲ್ಲಿ 200 ಹಾಸಿಗೆಯ ನೂತನ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು.

ಎಲ್ಲ ಹಳ್ಳಿಯ ಜನರು ನಿಮ್ಮ ನಿಮ್ಮ ಗ್ರಾಮಗಳನ್ನು ಸ್ವಇಚ್ಛೆಯಿಂದ ಸೀಲ್‌ಡೌನ್‌ ಮಾಡಿಕೊಳ್ಳಿ. ಮನೆಯಿಂದ ಯಾರು ಹೊರಗಡೆ ಬರಬೇಡಿ, ಲಾಕ್‌ ಡೌನ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿರಿ. ನಮ್ಮ ಪ್ರಾಣವನ್ನು ನಾವೇ ರಕ್ಷಣೆ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಪೊಲೀಸ್‌ ವ್ಯವಸ್ಥೆ ಸಂಪೂರ್ಣ ಫೇಲ್‌ ಆಗಿದೆ ಎಂದು ದೂರಿದರು. ತಾಲೂಕಿನಲ್ಲಿ ಆಕ್ಸಿಜನ್‌ ಕೊರತೆಯಾಗದಂತೆ ಸಿಲಿಂಡರ್‌ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಕವಿತಾ ವಿಜಯಕುಮಾರ ಹಾಲ್ದಾಳ್‌, ತಹಶೀಲ್ದಾರ್‌ ಶರಣಮ್ಮ, ತಾಲೂಕು ವೈದ್ಯಾಧಿ ಕಾರಿಗಳಾದ ಡಾ| ಶಿವರಾಜ್‌, ಡಾ| ಶಂಕ್ರನಾಯ್ಕ, ಇಒ ಹಾಲಸಿದ್ದಪ್ಪ ಪೂಜಾರ್‌, ಬಿಇಒ ಶೇಖರಪ್ಪ, ಪಿಡಬ್ಲೂಡಿ ಎಇಇ ಪ್ರಭಾಕರಶೆಟ್ರಾ, ತೋಟಗಾರಿಕೆ ಇಲಾಖೆಯ ಎಇಇ ಪರಮೇಶ್ವರಪ್ಪ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ, ಗುಂಡ್ರು ಹನುಮಂತ, ಕೆಜಿಎನ್‌ ದಾದು, ಪವಾಡಿ ಹನುಮಂತಪ್ಪ, ಬಾಲಕೃಷ್ಣಬಾಬು ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next