Advertisement

ರೈಸ್‌ಮಿಲ್‌ ಮಾಲೀಕರ ಸಂಘದಿಂದ ಔಷಧ ಕಿಟ್‌ ದೇಣಿಗೆ

10:04 PM May 17, 2021 | Team Udayavani |

ಸಿರುಗುಪ್ಪ: ಕೋವಿಡ್‌ ಸೋಂಕಿತರಿಗೆ ಒದಗಿಸಲು ಬೇಕಾದ ಮಾತ್ರೆ, ಚುಚ್ಚುಮದ್ದು, ಇತರೆ ವೈದ್ಯಕೀಯ ಪರಿಕರಗಳನ್ನು ದಾನಿಗಳು ನೀಡಲು ಮುಂದಾಗುತ್ತಿರುವುದು ಪ್ರಸಂಶನೀಯ ಕಾರ್ಯವಾಗಿದೆ ಎಂದು ಶಾಸಕ ಎಂ.ಎಸ್‌. ಸೋಮಲಿಂಗಪ್ಪ ತಿಳಿಸಿದರು.

Advertisement

ನಗರದ ತಾಲೂಕು ಕಚೇರಿಯಲ್ಲಿ ನಗರದ ರೈಸ್‌ಮಿಲ್‌ ಮಾಲೀಕರ ಸಂಘದವರು ದಾನವಾಗಿ ನೀಡಿದ ಸುಮಾರು 50 ಆಕ್ಸಿಮೀಟರ್‌ಗಳನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಕೋವಿಡ್‌ ಸೋಂಕಿತರ ಪಲ್ಸ್‌ ರೇಟ್‌ನ್ನು ಪರೀಕ್ಷಿಸಲು ಆಕ್ಸಿಮೀಟರ್‌ ಅಗತ್ಯವಾಗಿ ಬೇಕಾಗಿರುತ್ತದೆ. ಆಕ್ಸಿಮೀಟರನ್ನು ಪ್ರತಿಯೊಬ್ಬ ಆಶಾಕಾರ್ಯಕರ್ತೆಯರಿಗೆ ಒದಗಿಸುವುದರಿಂದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರ ಆರೋಗ್ಯದ ಬಗ್ಗೆ ನಿಗಾ ಇಡಲು ವೈದ್ಯಕೀಯ ಸಿಬ್ಬಂದಿಗೆ ಅನುಕೂಲವಾಗಲಿದೆ.

ಕೋವಿಡ್‌ ಸೋಂಕಿನ ಮೂರನೇ ಅಲೆ ಆರಂಭವಾಗುತ್ತಿದೆ ಎನ್ನುವ ಸೂಚನೆಯನ್ನು ವಿಜ್ಞಾನಿಗಳು ನೀಡಿರುವುದರಿಂದ ಪ್ರತಿಯೊಬ್ಬರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕೋವಿಡ್‌ ಸೋಂಕನ್ನು ತಡೆಯಲು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕು. ಮೂರನೇ ಅಲೆ ತಡೆಯಲು ಬೇಕಾದ ಅಗತ್ಯ ಕ್ರಮಗಳಿಗಾಗಿ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ, ಕೋವಿಡ್‌ ಸೋಂಕು ತಡೆಯಲು ಸರ್ಕಾರದೊಂದಿಗೆ ಸಾರ್ವಜನಿಕರು, ಸಂಘಸಂಸ್ಥೆಗಳು ಕೈಜೋಡಿಸಬೇಕೆಂದು ಕರೆ ನೀಡಿದರು.

ತಹಶೀಲ್ದಾರ್‌ ಎಸ್‌.ಬಿ. ಕೂಡಲಗಿ, ವೈದ್ಯೆ ವಿದ್ಯಾಶ್ರೀ, ಡಾ| ಚನ್ನಬಸವ, ರೈಸ್‌ಮಿಲ್‌ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎನ್‌.ಜಿ.ಬಸವರಾಜಪ್ಪ, ಉಪಾಧ್ಯಕ್ಷ ಚಾಗಿ ಸುಬ್ಬಯ್ಯ, ಪದಾಧಿ ಕಾರಿಗಳಾದ ಮಾಣಿಕ್ಯರೆಡ್ಡಿ, ಚಾಗಿರಘು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next