Advertisement
ಕೋವಿಡ್ ಸಮಯದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಜನರಿಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗಿದ್ದು, 39 ವಾರ್ಡ್‌ಗಳಲ್ಲಿ ತಂಡಗಳನ್ನು ರಚಿಸಿ ಸಮೀಕ್ಷೆ ಕಾರ್ಯನಿರ್ವಹಿಸಲಾಗುತ್ತಿದೆ. ಸೋಂಕು ನಿವಾರಕ ಸಿಂಪಡಣೆ ಮಾಡುವ ಕೆಲಸ ಮಾಡಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
Related Articles
Advertisement
ಸೋಂಕು ನಿವಾರಕ ಸಿಂಪಡಣೆ: ಪಾಲಿಕೆ ಎಲ್ಲ ವಾಡ್ ìಗಳಲ್ಲಿನ ಮುಖ್ಯ ರಸ್ತೆ ಮತ್ತು ಬಡಾವಣೆಗಳಲ್ಲಿ ಪಾಲಿಕೆಯ ಜೆಟ್ಟಿಂಗ್ ಯಂತ್ರ, ನೀರಿನ ಟ್ಯಾಂಕರ್ ಗೆ ಪಂಪ್ ಅಳವಡಿಸಿ ಮತ್ತು ಅಗ್ನಿಶಾಮಕ ದಳದ ವಾಹನ, ಎನ್‌ಎಂಡಿಸಿಯ ಮಿಸ್ ಕ್ಯನಾನ್ ಯಂತ್ರಬಳಸಿ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿದೆ.
ನಗರದ ಇಕ್ಕಟ್ಟಾದ ಪ್ರದೇಶಗಳು/ ವಸತಿ ವಲಯಗಳಲ್ಲಿ, ಚಿಕ್ಕ ರಸ್ತೆಗಳಲ್ಲಿ, ಕೊಳಚೆ ಪ್ರದೇಶಗಳಲ್ಲಿ, ವಾಣಿಜ್ಯ ಪ್ರದೇಶಗಳಲ್ಲಿ, ಬಸ್ ನಿಲ್ದಾಣಗಳು, ತರಕಾರಿ ಮಾರ್ಕೆಟ್‌ಗಳು ಇತ್ಯಾದಿ ಕಡೆಗಳಲ್ಲಿ ಪೆಟ್ರೋಲ್ ಪಂಪ್ ಚಾಲಿತ ಬ್ಯಾಕ್‌ಪ್ಯಾಕ್ ಸ್ಪ್ರೆàಯರ್‌ಗಳು ಮತ್ತು ಹ್ಯಾಂಡ್ ಪಂಪ್ ಸ್ಪ್ರೆಯರ್‌ಗಳನ್ನು ಬಳಸಿ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಎಲ್ಲ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಫೂÂಮಿಗೇಷನ್ ಮಾಡಲಾಗುತ್ತಿದೆ. ಪೌರಕಾರ್ಮಿಕರಿಗೆ ಅವಶ್ಯವಿರುವ ಧರಿಸುಗಳಾದ ಮಾಸ್ಕ್, ಕೈಗವಸು, ಶೂಗಳು, ರಿಫ್ಲೆಕ್ಟರ್ ಜಾಕೆಟ್‌ಗಳನ್ನು ವಿತರಿಸಲಾಗಿದೆ.
ಎಲ್ಲ ಪೌರಕಾರ್ಮಿಕರಿಗೆ ಪ್ರತಿದಿನ ಥರ್ಮಲ್ ಸ್ಕಾÂನಿಂಗ್ ಮೂಲಕ ತಾಪಮಾನ ಪರೀಕ್ಷಿಸಿ ಮುಂಜಾಗ್ರತೆ ವಹಿಸಲಾಗುತ್ತಿದೆ. ಕೋವಿಡ್-19ರ ಬಗ್ಗೆ ವಿಶೇಷ ಜಾಗೃತಿ ಮೂಡಿಸಲಾಗುತ್ತಿದೆ. ಜತೆಗೆ ಪಾಲಿಕೆ ಎಲ್ಲ ಸಿಬ್ಬಂದಿಗೆ ಹಾಗೂ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ನಗರಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಸ್ವತ್ಛತೆ ಮತ್ತು ಭೌತಿಕ ಅಂತರಕಾಯ್ದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ನಿರ್ದೇಶನದಂತೆ ಮೇ 11ರಿಂದ ನಗರದಲ್ಲಿರುವ 5 ಇಂದಿರಾ ಕ್ಯಾಂಟೀನ್‌ಗಳಿಂದ ಮೂರು ಹೊತ್ತು ಉಚಿತ ಊಟ ಸರಬರಾಜು ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಹೋಂ ಕ್ವಾರಂಟೈನ್ ಮನೆಗಳು/ಸ್ಥಳಗಳಿಂದ ನಿರ್ದೇಶನಾನುಸಾರ ಕಸವನ್ನು ಸಂಗ್ರಹಿಸಿ ನಿಯಮಾನುಸಾರ ವಿಲೇವಾರಿ ಮಾಡಲು, ಬಯೋಮೆಡಿಕಲ್ ವೇಸ್ಟ್‌ಪೊಸಸ್ಸಿಂಗ್ ಏಜನ್ಸಿಗೆ ಜವಾಬ್ದಾರಿ ವಹಿಸಿ ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ ಸೂಕ್ತ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ವಿವರಿಸಿರುವ ಅವರು ಪ್ರತಿ ದಿನ ಕೋವಿಡ್-19ರ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿ ಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.