Advertisement

ಪಂಚ ಲಕ್ಷ ಹೆಜ್ಜೆ ಪಾದಯಾತ್ರೆಗೆ ಸ್ವಾಗತ

05:21 PM Jan 26, 2021 | Team Udayavani |

ಹರಪನಹಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗಾಗಿ ಒತ್ತಾಯಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ
ಪೀಠಾಧ್ಯಕ್ಷರಾದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಸೋಮವಾರ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮಕ್ಕೆ ಆಗಮಿಸಿದ ವೇಳೆ ಅದ್ಧೂರಿಯಾಗಿ
ಸ್ವಾಗತಿಸಲಾಯಿತು.

Advertisement

ನಂದಿಬೇವೂರು ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ ಮಧ್ಯಾಹ್ನದ ವೇಳೆ ಕಣವಿಹಳ್ಳಿ ಗ್ರಾಮಕ್ಕೆ ಆಗಮಿಸಿದ ಪಾದಯಾತ್ರೆಯು ಗ್ರಾಮದಲ್ಲಿ ಬಹಿರಂಗ ಸಭೆ ನಡೆಸಿ ಮಧ್ಯಾಹ್ನದ ಭೋಜನ ಸವಿದು ವಿಶ್ರಾಂತಿ ಪಡೆದರು.

ಸಂಜೆ ವೇಳೆ ಪಾದಯಾತ್ರೆ ಪುನಃ ಶುರುವಾಯಿತು. ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್‌, ಪ್ರಗತಿಪರ ಚಿಂತಕರಾದ ಕೋಡಿಹಳ್ಳಿ ಭೀಮಪ್ಪ, ಎನ್‌.ಅನಂತನಾಯ್ಕ ಅಲಗಿಲವಾಡ ಎ.ಎಂ.ವಿಶ್ವನಾಥ ಸೇರಿದಂತೆ ವಿವಿಧ ಗಣ್ಯರು ಶ್ರೀಗಳನ್ನು ಸ್ವಾಗತಿಅವರೊಂದಿಗೆ ಹೆಜ್ಜೆ ಹಾಕಿದರು.

ನಂದಿಬೇವೂರು ಮತ್ತು ಕಣವಿಹಳ್ಳಿ ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಶ್ರೀಗಳು ಪಂಚಮಸಾಲಿ ಸಾಮಾಜಕ್ಕೆ 2ಎ
ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಶಾಂತಿ-ಸಹನೆ ಮೀರಿದೆ. ಇನ್ನೇನಿದ್ದರೂ ಕಿತ್ತೂರು ರಾಣಿ ಚೆನ್ನಮ್ಮನಂತೆ ಹೋರಾಟ ನಿವಾರ್ಯ ಎಂದು ಪ್ರತಿಪಾದಿಸಿದರು.

ಮಾಜಿ ಶಾಸಕರಾದ ವಿಜಯನಂದ ಕಾಶಪ್ಪನವರ್‌, ನಂದಿಹಳ್ಳಿ ಹಾಲಪ್ಪ, ಕೆಪಿಸಿಸಿ ಸದಸ್ಯ ಎಸ್‌.ಪಿ.ಪ್ರಭಾಕರಗೌಡ, ಮುಖಂಡರಾದ ಅರಸೀಕೆರೆ ಎನ್‌. ಕೊಟ್ರೇಶ್‌, ಪಾಟೀಲ್‌ ಬೆಟ್ಟನಗೌಡ, ಶಶಿಧರ್‌ ಪೂಜಾರ್‌, ಓಂಕಾರಗೌಡ, ಈಶ್ವರನಾಯ್ಕ, ಪುಣಬಗಟ್ಟಿ
ನಿಂಗಪ್ಪ, ಕೋಡಿಹಳ್ಳಿ ಗುರುಬಸವರಾಜ್‌, ಎನ್‌. ಮಂಜುನಾಥ, ಇಮ್ರಾನ್‌ಸಾಬ್‌, ಇರ್ಫಾನ್‌ ಮುದಗಲ್‌ ಮತ್ತಿತರರು ಭಾಗವಹಿಸಿದ್ದರು.

Advertisement

ಓದಿ : ಸಮಾಜಕ್ಕೆ ಸಿಎಂ ಸ್ಥಾನ ಕೊಟ್ಟರೂ ಪಾದಯಾತ್ರೆ ನಿಲ್ಲಲ್ಲ

Advertisement

Udayavani is now on Telegram. Click here to join our channel and stay updated with the latest news.

Next