Advertisement

ಕೋವಿಡ್‌ ತಡೆಗೆ ಡಿಎಂಎಫ್‌ ಹಣ ಬಳಕೆ

09:29 PM May 11, 2021 | Team Udayavani |

ಬಳ್ಳಾರಿ: ಜಿಲ್ಲೆಯಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನಮ್ಮಲ್ಲಿ ಹಣದ ಕೊರತೆ ಇಲ್ಲ ಮತ್ತು ಸರ್ಕಾರದ ಬಳಿ ಕೈಚಾಚುವ ಪ್ರಶ್ನೆಯೇ ಇಲ್ಲ; ನಮ್ಮಲ್ಲಿ ಜಿಲ್ಲಾ ಖನಿಜ ನಿಧಿ  ಅಡಿ ಅಪಾರ ಪ್ರಮಾಣದ ಹಣವಿದ್ದು, ಅದನ್ನು ಬಳಸಿಕೊಂಡು ಕೋವಿಡ್‌ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು ಮತ್ತು ಜೀವ ಉಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್‌ ಹೇಳಿದರು. ನಗರದ ಬಿಡಿಎಎ ಫುಟ್ಬಾಲ್‌ ಮೈದಾನದ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಕೋವಿಡ್‌ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Advertisement

ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿ ಸಿದಂತೆ ಜನಪ್ರತಿನಿಧಿ  ಗಳು ನೀಡುವ ಸಲಹೆ-ಸೂಚನೆ ಸ್ವೀಕರಿಸಿ ಅವುಗಳ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು. ಈಗಾಗಲೇ ಪ್ರತಿ ತಾಲೂಕುಗಳಲ್ಲಿ ಕೋವಿಡ್‌ ಸಂಬಂ ಧಿಸಿದಂತೆ ಸಭೆ ನಡೆಸಿ ಕೋವಿಡ್‌ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಮತ್ತು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗಿದೆ ಎಂದರು.

ಸೋಂಕಿನ ಪ್ರಕರಣಗಳು ವರದಿಯಾದ ಕಡೆ ಈ ಮುಂಚೆ ಮಾಡಿದಂತೆ ಅತ್ಯಂತ ಆ್ಯಕ್ಟಿವ್‌ ಆಗಿ ಸ್ಯಾನಿಟೈಸೇಶನ್‌ ಮಾಡುವಂತೆ ಜಿಲ್ಲಾ ಧಿಕಾರಿಗಳಿಗೆ ಸೂಚಿಸಿದರು. 3ನೇ ಅಲೆ ಬರದಂತೆ ತಡೆಗಟ್ಟುವ ಹಾಗೂ ಅಗತ್ಯ ಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 10 ವೆಂಟಿಲೇಟರ್‌ ವ್ಯವಸ್ಥೆ ಹಾಗೂ 10 ಬ್ಯೂರೋ ಸಿಲಿಂಡರ್‌ಗಳ ವ್ಯವಸ್ಥೆ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದಿಂದ 40 ವೆಂಟಿಲೇಟರ್‌ಗಳು ಬಳ್ಳಾರಿಗೆ ಬಂದಿವೆ ಎಂದರು.

ಹೆಚ್ಚಿನ ಚಿಕಿತ್ಸೆ; ನೇಮಕಕ್ಕೆ ಕ್ರಮ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ವಿಮ್ಸ್‌, ಜಿಲ್ಲಾಸ್ಪತ್ರೆ ಹಾಗೂ ಎಲ್ಲ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್‌ ಬೆಡ್‌ಗಳನ್ನು ಹೆಚ್ಚಿಸಿ ಹೆಚ್ಚಿನ ಸಂಖ್ಯೆಯ ಕೋಏಡ್‌-19 ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾಗಿರುವ ತಜ್ಞ ವೈದ್ಯರು, ವೈದ್ಯರು, ಹಾಗೂ ಇತರೆ ಆರೋಗ್ಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ಡಿಎಂಎಫ್‌ ಅನುದಾನದಡಿ ನೇಮಕಕ್ಕೆ ಕ್ರಮವಹಿಸಲಾಗಿದೆ. ಹೆಚ್ಚುವರಿಯಾಗಿ 50 ವೆಂಟಿಲೇಟರ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, 40 ವೆಂಟಿಲೇಟರ್‌ಗಳನ್ನು ಸರ್ಕಾರದಿಂದ ಜಿಲ್ಲೆಗೆ ಹಂಚಿಕೆ ಮಾಡಿ ಪೂರೈಕೆ ಮಾಡಲು ಅನುಮತಿ ದೊರೆತಿದೆ.

ಜಿಲ್ಲೆಯ ವಿಮ್ಸ್‌, ಜಿಲ್ಲಾಸ್ಪತ್ರೆ ಹಾಗೂ ತಾಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಕೋವಿಡ್‌ ಪ್ರಕರಣಗಳ ಆರೈಕೆಗಾಗಿ ಐಸಿಯು ಬೆಡ್‌ ಗಳನ್ನು ಹೆಚ್ಚಿಸಲಾಗಿದೆ ಎಂದರು.

Advertisement

ಜಿಂದಾಲ್‌ ಎದುರುಗಡೆ ಸಾವಿರ ಆಕ್ಸಿಜನ್‌ ಬೆಡ್‌ ತಾತ್ಕಾಲಿಕ ಆಸ್ಪತ್ರೆ: ಜೆಎಸ್‌ಡಬ್ಲೂ ಸಹಯೋಗದೊಂದಿಗೆ ತೋರಣಗಲ್ಲುನಲ್ಲಿ 40 ಐಸಿಯು ಸೇರಿದಂತೆ ಒಟ್ಟು 1 ಸಾವಿರ ಆಮ್ಲಜನಕಯುಕ್ತ ಹಾಸಿಗೆಗಳ ಕೋವಿಡ್‌ ಆಸ್ಪತ್ರೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ತಜ್ಞ ವೈದ್ಯರ ಹಾಗೂ ಸಿಬ್ಬಂದಿಯವರ ನೇಮಕಾತಿಗಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಾಗಿದೆ. ಅಲ್ಲದೆ ಸಿದ್ಧತೆಯ ಭರದಿಂದ ಸಾಗಿದ್ದು, ಶಿಘ್ರದಲ್ಲಿ ಸಂಪೂರ್ಣವಾಗಿ ಸಿದ್ಧವಾಗಿ ಕಾರ್ಯಾರಂಭ ಮಾಡಲಿದೆ. ಜಿಲ್ಲೆಯಲ್ಲಿ 109 ಆಂಬ್ಯುಲೆನ್ಸ್‌ಗಳಿದ್ದು ಇನ್ನೂ ಹೆಚ್ಚುವರಿಯಾಗಿ ಆಂಬುಲೆನ್ಸ್‌ಗಳನ್ನು ಖರೀದಿಸಲಾಗುತ್ತಿದೆ ಎಂದರು.

ಹಡಗಲಿ, ಹೊಸಪೇಟೆಯಲ್ಲಿ ವಿಆರ್‌ಡಿಎಲ್‌ ಲ್ಯಾಬ್‌  ಕೇಂದ್ರ: ಹೊಸದಾಗಿ ವಿಆರ್‌ಡಿಎಲ್‌ ಲ್ಯಾಬ್‌ ಪರೀûಾ ಕೇಂದ್ರಗಳನ್ನು ಹೊಸಪೇಟೆ ಮತ್ತು ಹೂವಿನಹಡಗಲಿ ತಾಲೂಕುಗಳಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ ಎಂದ ಸಚಿವ ಆನಂದಸಿಂಗ್‌, ಎಲ್ಲ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಸೋಂಕಿತರು ಚಿಕಿತ್ಸೆಯ ವೇಳೆ ಮರಣ ಹೊಂದಿದಲ್ಲಿ ಗೌರವಯುತವಾಗಿ ಶವ ಸಾಗಿಸಲು (ಶವ ಸಂಸ್ಕಾರಕ್ಕಾಗಿ) ಡಿಸಿಎಚ್‌/ಡಿಸಿಎಚ್‌ಸಿಗಳಿಂದ ವಾಹನ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದರು.

48 ಆರ್‌ಆರ್‌ಟಿ ತಂಡಗಳ ನೇಮಕ: ಸೋಂಕಿತರನ್ನು ಹೋಮ್‌ ಐಶೋಲೇಷನ್‌ನಲ್ಲಿ ಇರುವಾಗ ನಿರಂತರ ಆರೋಗ್ಯ ಕಾಳಜಿಗಾಗಿ 48 ಆರ್‌ಆರ್‌ಟಿ ತಂಡಗಳನ್ನು ರಚಿಸಲಾಗಿದೆ. ಅಲ್ಲದೆ ಪ್ರತಿದಿನ ವೈದ್ಯರು, ಆರೋಗ್ಯ ಸಿಬ್ಬಂದಿ ವರ್ಗದವರು ಮನೆ ಭೇಟಿ ಮೂಲಕ ಸೋಂಕಿತರ ಆರೋಗ್ಯವನ್ನು ವಿಚಾರಿಸಿ ಸೂಕ್ತ ಸಲಹೆ ಮಾರ್ಗದರ್ಶನ ಹಾಗೂ ವ್ಯಾಪಕ ಜಾಗೃತಿ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಸಚಿವ ಸಿಂಗ್‌ ವಿವರಿಸಿದರು. ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಕೊರತೆ ಉಂಟಾಗದಂತೆ ಕ್ರಮವಹಿಸಲು ಹೆಚ್ಚುವರಿಯಾಗಿ 200 ಸಿಂಡರ್‌ ಗಳನ್ನು ಖಲೀದಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 45ರಿಂದ 59 ವರ್ಷದೊಳಗಿನ 601191 ಜನರಿಗೆ ಕೋವಿಡ್‌ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು; ಇದುವರೆಗೆ 322879 ಜನರು ಮೊದಲ ಡೋಸ್‌ ಪಡೆದರೇ 2ನೇ ಡೋಸ್‌ ಅನ್ನು 31573 ಜನರು ಪಡೆದುಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟ 174345 ಜನರಲ್ಲಿ 137546 ಜನರು ಮೊದಲ ಡೋಸ್‌ ಪಡೆದುಕೊಂಡರೇ 33733 ಜನರು ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ ಎಂದರು.

ಶಾಸಕರಾದ ಬಿ.ನಾಗೇಂದ್ರ, ಪಿ.ಟಿ. ಪರಮೇಶ್ವರ ನಾಯ್ಕ, ವಿಧಾನ ಪರಿಷತ್‌ ಸದಸ್ಯ ಕೆ.ಸಿ. ಕೊಂಡಯ್ಯ, ಕೊಪ್ಪಳ ಸಂಸದ ಸಂಗಣ್ಣ ಕರಡಿ ಮಾತನಾಡಿದರು. ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಕರುಣಾಕರರೆಡ್ಡಿ, ಸೋಮಶೇಖರ್‌ ರೆಡ್ಡಿ, ಸೋಮಲಿಂಗಪ್ಪ, ಅಲ್ಲಂ ವೀರಭದ್ರಪ್ಲ, ಗಣೇಶ ಮತ್ತಿತರರು ಮಾತನಾಡಿದರು.

ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲುಮ, ಎಸ್ಪಿ ಸೈದುಲು ಅಡಾವತ್‌, ಜಿಪಂ ಸಿಇಒ ಕೆ.ಆರ್‌ .ನಂದಿನಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹೊÉàಟ್‌, ಡಿಎಚ್‌ಒ ಡಾ| ಜನಾರ್ದನ್‌, ವಿಮ್ಸ್‌ ನಿರ್ದೇಶಕ ಡಾ| ಗಂಗಾಧರಗೌಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next