Advertisement

ಬಡವರ ಜೀವನಕ್ಕೆ ನರೇಗಾ ಆಸರೆ

10:24 PM May 09, 2021 | Team Udayavani |

ಸಂಡೂರೂ: ಗ್ರಾಮ ಪಂಚಾಯಿತಿಗಳು ನರೇಗಾ ಯೋಜನೆಯಡಿಯಲ್ಲಿ ಬಡ ಕಾರ್ಮಿಕರಿಗೆ ಉದ್ಯೋಗ ನೀಡಿ ಅವರ ಜೀವನಕ್ಕೆ ಆಸರೆಯಾಗಿದೆ. ತಾಲೂಕಿನ ಕೃಷ್ಣಾನಗರ ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಬದು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಇದರಿಂದ ಕೃಷ್ಣಾನಗರ ಗ್ರಾಮ ಪಂಚಾಯಿತಿಯ 100ಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಪಡೆದುಕೊಳ್ಳುತ್ತಿದ್ದಾರೆ.

Advertisement

ಇದರಿಂದ ಅವರ ಕುಟುಂಬಗಳ ನಿರ್ವಹಣೆ ಸ್ವಲ್ಪಮಟ್ಟಿಗೆ ಕಷ್ಟದಿಂದ ಪಾರಾಗಿದೆ ಎನ್ನಬಹುದು. ಸರ್ಕಾರ ಜಾರಿಗೊಳಿಸಿದ ಈ ಮಹತ್ತರ ಉದ್ಯೋಗ ಖಾತ್ರಿ ಯೋಜನೆಯಿಂದ ನಮಗೆ ಬಹು ಲಾಭವಾಗಿದೆ. ಇದರಿಂದ ಕೆಲಸ ಸಿಕ್ಕು ಅದಾಯ ಬರುವಂತಾಗಿ ಕುಟುಂಬ ನಿರ್ವಹಣೆ ಸುಧಾರಿಸುತ್ತಿದೆ ಎನ್ನುತ್ತಿದ್ದಾರೆ ಉದ್ಯೋಗ ಖಾತ್ರಿ ಕಾರ್ಮಿಕರು. ಈ ಬಗ್ಗೆ ತಾಲೂಕುಮಟ್ಟದಲ್ಲಿ ಶಾಸಕರು ವಿಶೇಷ ಸಭೆಯನ್ನು ನಡೆಸಿ ಸಾಧ್ಯವಾದಷ್ಟು ಸಾಮಾಜಿಕ ಅಂತರದಿಂದ ಸ್ಯಾನಿಟೈಸರ್‌ ಬಳಸಿಕೊಂಡು ಉದ್ಯೋಗ ಖಾತ್ರಿ ಕೆಲಸ ನೀಡಿ ಇದರಿಂದ ನಮ್ಮ ಜನರು ಕಷ್ಟದಿಂದ ಪಾರಾಗುವಂತಾಗಿದೆ.

ಈಗಿರುವ 100 ದಿನದ ಬದಲಾಗಿ 150 ಮ್ಯಾನ್‌ ಡೇಸ್‌ಗೆ ವಿಸ್ತರಿಸಿ ಎಂದು ತಾಲೂಕಿನ ಎಲ್ಲ ಇಲಾಖೆ ಅಧಿ  ಕಾರಿಗಳಿಗೆ ಶಾಸಕ ಈ. ತುಕಾರಾಂ ಸೂಚಿಸಿದ್ದಾರೆ. ಒಟ್ಟಾರೆಯಾಗಿ ತಾಲೂಕಿನ ತೋರಣಗಲ್ಲು, ಚೋರುನೂರು, ಬೊಮ್ಮಘಟ್ಟ, ಬಂಡ್ರಿ, ಕೃಷ್ಣಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆ ಬಿದ್ದಿದ್ದು ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಒಡ್ಡು ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ ಪ್ರಾರಂಭವಾಗಿದ್ದು ಅತ್ತ ರೈತರ ಜಮೀನಿನಲ್ಲಿ ನೀರು ಇಂಗುವಿಕೆ ಪ್ರಾರಂಭವಾಗಿ ಅಂತರ್ಜಲ ಹೆಚ್ಚಾದರೆ, ಮತ್ತೂಂದು ಕಡೆ ಬಡ ಕೆಲಸಗಾರರಿಗೆ ಕೂಲಿ ಸಿಕ್ಕಂತಾಗಿದೆ. ಕೊರೊನಾದಿಂದ ಅರ್ಥಿಕ ಹೊರೆಯನ್ನು ಉದ್ಯೋಗ ಖಾತ್ರಿ ಯೋಜನೆ ತಪ್ಪಿಸುತ್ತಿರುವುದು ಗ್ರಾಮೀಣ ರೈತರಿಗೆ ಸಮಾಧಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next