Advertisement

ಸುಕೋ-ಐಎಂಎ ಕೋವಿಡ್‌ ಆಸ್ಪತ್ರೆ ಲೋಕಾರ್ಪಣೆ

10:27 PM May 06, 2021 | Team Udayavani |

ಸಿಂಧನೂರು: ಇಲ್ಲಿನ ಐಎಂಎ ಹಾಲ್‌ನಲ್ಲಿ ಅತ್ಯಾಧುನಿಕ ಸುಕೋ-ಐಎಂಎ ಸಹಭಾಗಿತ್ವ ಹಾಗೂ ಜನತಾ ಸೌಹಾರ್ದ ಸಹಕಾರಿ ನಿಯಮಿತ ಸಹಕಾರದಲ್ಲಿ ಆರಂಭಿಸಲಾದ 30 ಹಾಸಿಗೆ ಹೈಟೆಕ್‌ ಕೋವಿಡ್‌ ಆಸ್ಪತ್ರೆಯನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುಧವಾರ ಲೋಕಾರ್ಪಣೆ ಮಾಡಿದರು.

Advertisement

ಆನ್‌ಲೈನ್‌ನಲ್ಲಿ ಈ ವಿಶೇಷ ಕೋವಿಡ್‌ ಆಸ್ಪತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಷ್ಟ-ಕಾಲದಲ್ಲಿ ಸರಿಯಾದ ನಿರ್ಣಯ ತೆಗೆದುಕೊಂಡು ಸುಕೋ ಅವರು ಹಲವರ ಬದುಕಿನಲ್ಲಿ ಬೆಳಕು ಚೆಲ್ಲುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಕೋವಿಡ್‌ ಆಸ್ಪತ್ರೆಗೆ ಸಂಬಂಧಿ ಸಿ, ಶಾಸಕ ವೆಂಕಟರಾವ್‌ ನಾಡಗೌಡ ಅವರು ಎರಡೂ¾ರು ಬಾರಿ ನನಗೆ ಕರೆ ಮಾಡಿ, ಸರಕಾರದ ಸಹಕಾರ ಕೇಳಿದ್ದರು.

ಜನರು ಎಲ್ಲ ಕಡೆಗೂ ಬೆಡ್‌, ಆಕ್ಸಿಜನ್‌, ಔಷಧ ಕೊರತೆ ಎದುರಿಸುತ್ತಿದ್ದಾರೆ. ನಮಗೂ ಆಕ್ಸಿಜನ್‌ ಕೊಡಿಸಿ ಅಂತಾ ಕರೆಗಳು ಬರುತ್ತಿವೆ. ಆಸ್ಪತ್ರೆ ಭರ್ತಿಯಾಗಿವೆ. ಸ್ಥಳ ಕೊರತೆಯಿದೆ ಎಂಬ ಮಾತು ಕೇಳುತ್ತಿರುತ್ತೇವೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸುಕೋ ಮತ್ತು ಐಎಂಎ ವೈದ್ಯರ ತಂಡ ಜನಪರ ಕಾಳಜಿ ತೋರಿದೆ.

ಜನರ ಭಾವನೆಯನ್ನು ಅರಿತು ಅವರ ನೆರವಿಗೆ ಧಾವಿಸಿದ್ದು, ಒಳ್ಳೆಯ ಬೆಳವಣಿಗೆ. ಸರಕಾರ ನಿಗದಿಪಡಿಸಿದ ದರಕ್ಕಿಂತ ಶೇ.50ರಷ್ಟು ಕಡಿಮೆ ದರದಲ್ಲಿ ಚಿಕಿತ್ಸೆ ವೆಚ್ಚವನ್ನು ಪಡೆಯಲಾಗುತ್ತಿದೆ ಎಂಬುದನ್ನು ಕೇಳಿದಾಗ ಸಂತಸವಾಯಿತು. ಸುಕೋ ಹಾಗೂ ಐಎಂಎನ ಈ ಸೇವೆ ಹೆಚ್ಚು ಜನರಿಗೆ ತಲುಪಿ, ಜನರು ಕೊರೊನಾ ಮಹಾಮಾರಿ ಎಂಬ ಕಂಟಕದಿಂದ ಬೇಗ ಹೊರಬರುವಂತಾಗಲಿ ಎಂದರು.

ಶಾಸಕ ವೆಂಕಟರಾವ್‌ ನಾಡಗೌಡ ಮಾತನಾಡಿ, ಸಿಂಧನೂರು ತಾಲೂಕಿನಲ್ಲಿ 250 ಆಕ್ಸಿಜನ್‌ ಬೆಡ್‌ಗಳ ವ್ಯವಸ್ಥೆಯಾಗಿದೆ. ಸರಕಾರಿ ಆಸ್ಪತ್ರೆಯಲ್ಲಿ 3 ವೆಂಟಿಲೇಟರ್‌ ಗಳನ್ನು ಒದಗಿಸುವ ಕುರಿತು ಈಗಾಗಲೇ ನಿಮ್ಮ ಗಮನಕ್ಕೆ ತರಲಾಗಿದೆ. ಖಾಸಗಿ, ಸರಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧ ಪೂರೈಕೆಯಾಗಬೇಕಿದೆ. ಈ ಬಗ್ಗೆ ತ್ವರಿತ ಸ್ಪಂದನೆ ಅವಶ್ಯ ಎಂದು ಡಿಸಿಎಂ ಸವದಿ ಅವರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಭತ್ತ ಖರೀದಿಗೆ ಸಂಬಂಧಿ ಸಿ ಆನ್‌ಲೈನ್‌ ನೋಂದಣಿಯನ್ನು ಬ್ಲಾಕ್‌ ಮಾಡಿರುವ ಕುರಿತು ಗಮನಕ್ಕೆ ತಂದು, ನೋಂದಣಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

Advertisement

ಸುಕೋ ಬ್ಯಾಂಕ್‌ ಅಧ್ಯಕ್ಷ ಮೋಹಿತ್‌ ಮಸ್ಕಿ ಅವರು ಹೊಸದಾಗಿ ಆರಂಭಿಸುತ್ತಿರುವ ಕೋವಿಡ್‌ ಆಸ್ಪತ್ರೆ ಕುರಿತು ವಿವರ ನೀಡಿದರು. ಜನತಾ ಸೌಹಾರ್ದ ಸಹಕರಿ ನಿರ್ದೇಶಕ ಶಿವಕುಮಾರ್‌, ವೈದ್ಯರಾದ ಡಾ| ಶಿವರಾಜ್‌ ಪಾಟೀಲ್‌, ಬಿ.ಎನ್‌. ಪಾಟೀಲ್‌, ಡಾ| ಶರಣಬಸವ ದೇವರೆಡ್ಡಿ, ಡಾ| ಚನ್ನನಗೌಡ ಪಾಟೀಲ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next