Advertisement
ಬೆಳಗ್ಗೆಯಿಂದ ನಡೆದ ಮತದಾನ ಯಾವುದೇ ಅಹಿತಕರ ಘಟನೆಗಳಿಲ್ಲದೇ ಶಾಂತಿಯುತವಾಗಿ ನಡೆದಿದ್ದು ಶೇ. 57.67ರಷ್ಟು ಮತದಾನವಾಗಿದೆ. ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್‌ಗಳಿಗೆ ಮಂಗಳವಾರ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದ ಹಿನ್ನೆಲೆಯಲ್ಲಿ ನಗರದ ಬಾಪೂಜಿ ನಗರದ ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗಳು, ಬಂಡಿಮೋಟ್ ಉಜ್ಜಯಿನಿ ಪ್ರೌಢಶಾಲೆ, ಇಂದಿರಾನಗರದ ಅಂಬೇಡ್ಕರ್ ಪ್ರೌಢ ಮತ್ತು ಪ್ರಾಥಮಿಕ ಶಾಲೆಯಲ್ಲಿನ ಮತಗಟ್ಟೆಗಳು ಬೆಳಗ್ಗೆಯೇ ಮತದಾರರಿಂದ ತುಂಬಿ ತುಳುಕುತ್ತಿದ್ದವು. ರಂಜಾನ್ ದಿನಗಳು ಮತ್ತು ಬೇಸಿಗೆಯೂ ಆಗಿದ್ದರಿಂದ ಬಹುತೇಕ ವಾರ್ಡ್‌ಗಳಲ್ಲಿ ಅಲ್ಪಸಂಖ್ಯಾತರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಹಕ್ಕು ಚಲಾಯಿಸಿದರು.
Related Articles
Advertisement
ಗಣ್ಯರ ಮತದಾನ: ಪಾಲಿಕೆ ಚುನಾವಣೆ ನಿಮಿತ್ತ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕರಾದ ಜಿ. ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಶಾಸಕ ನಾರಾ ಸೂರ್ಯನಾರಾಯಣರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಮಹ್ಮದ್ ರμàಕ್, ಪಾಲಿಕೆ ಚುನಾವಣೆ ಕಾಂಗ್ರೆಸ್ ಸಂಯೋಜಕ ಜೆ.ಎಸ್.ಆಂಜನೇಯಲು, ಮಾಜಿ ಮೇಯರ್ ಇಬ್ರಾಹಿಂಬಾಬು ಸೇರಿ ಹಲವು ಗಣ್ಯವ್ಯಕ್ತಿಗಳು ಕುಟುಂಬ ಸಮೇತ ಹಕ್ಕು ಚಲಾಯಿಸಿದರು.
ಆರೋಗ್ಯ ತಪಾಸಣೆ: ಕೋವಿಡ್ ಸೋಂಕು ಎಲ್ಲೆಡೆ ಹೆಚ್ಚಿದ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು. ಪ್ರತಿಯೊಂದು ಮತಗಟ್ಟೆಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಇವರು ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸುವ ಪ್ರತಿಯೊಬ್ಬ ಮತದಾರರಿಗೂ ಥರ್ಮಲ್ ಸೀðನಿಂಗ್ ಮೂಲಕ ಉಷ್ಣಾಂಶ ಪರಿಶೀಲಿಸಿ, ಅವರ ಕೈಗಳಿಗೆ ಸ್ಯಾನಿಟೆ„ಸರ್ ಸಿಂಪಡಿಸಿ ಮತದಾನ ಮಾಡಲು ಕಳುಹಿಸುತ್ತಿದ್ದರು.
ಮೊದಲ ಬಾರಿಗೆ ಹಕ್ಕು ಚಲಾವಣೆ: ನಗರದ 38ನೇ ವಾರ್ಡ್‌ನಲ್ಲಿ ನೂರಿ ಮತ್ತು 35ನೇ ವಾರ್ಡ್‌ನ ಪಿ.ಹಿಮಬಿಂದು ಎಂಬುವವರು ಮೊದಲ ಬಾರಿಗೆ ಹಕ್ಕು ಚಲಾಯಿಸಿದರು. ಮೊದಲ ಬಾರಿಗೆ ಮತದಾನ ಮಾಡುತ್ತಿರುವುದು ಖುಷಿಯಾಗಿದೆ. ಮತದಾನ ಪ್ರಕ್ರಿಯೆ ಬಗ್ಗೆ ಇಷ್ಟುದಿನ ಇದ್ದ ಕುತೂಹಲಕ್ಕೆ ಈಗ ತೆರೆಬೀಳಲಿದೆ. ಜನಪ್ರತಿನಿಧಿಯೊಬ್ಬರನ್ನು ಆಯ್ಕೆ ಮಾಡಲು ಅವಕಾಶ ನೀಡಿರುವ ಮತದಾನ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.